newsfirstkannada.com

2024ರ ಐಪಿಎಲ್ UAEಗೆ ಶಿಫ್ಟ್​ ಮಾಡ್ತಾರಾ.. ಜಯ್ ಶಾ ಕೊಟ್ಟ ಸ್ಪಷ್ಟನೆ ಏನು?

Share :

Published March 17, 2024 at 8:57am

Update March 17, 2024 at 8:58am

    ಈಗಾಗಲೇ ಮೊದಲ ಶೆಡ್ಯೂಲ್ಡ್​ ಲಿಸ್ಟ್ ಬಿಡುಗಡೆ ಮಾಡಲಾಗಿದೆ

    ಎಲೆಕ್ಷನ್​ ದಿನಾಂಕ ಘೋಷಣೆ ಬೆನ್ನಲ್ಲೇ ಜಯ್ ಶಾ ಹೇಳಿದ್ದೇನು?

    2ನೇ ಶೆಡ್ಯೂಲ್ಡ್​ ಲಿಸ್ಟ್ ಬಗ್ಗೆ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ.!

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯಾವುದೇ ಕಾರಣಕ್ಕೂ ವಿದೇಶಕ್ಕೆ ಸ್ಥಳಾಂತರ ಮಾಡಲ್ಲ. ಭಾರತದಲ್ಲೇ ಟೂರ್ನಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಹೇಳಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಯ್ ಶಾ ಅವರು, ಈ ಬಾರಿಯ ಐಪಿಎಲ್​ ಅನ್ನು ಯಾವ ದೇಶಕ್ಕೂ ಶಿಫ್ಟ್ ಮಾಡುವುದಿಲ್ಲ. ನಮ್ಮ ದೇಶದಲ್ಲೇ ಸುಗಮವಾಗಿ ನಡೆಯಲಿದೆ. ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 4ರ ವರೆಗೆ ನಡೆಯಲಿದೆ. ಆದರೆ ಐಪಿಎಲ್​ ಮಾರ್ಚ್​ 22 ರಿಂದ ಶುರುವಾಗುವುದರಿಂದ ಯಾವುದೇ ಸಮಸ್ಯೆ ಆಗಲ್ಲ. ಈಗಾಗಲೇ ಮೊದಲ ಶೆಡ್ಯೂಲ್ಡ್​ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು ಮೊದಲ ಪಂದ್ಯವನ್ನು ಆರ್​ಸಿಬಿ ಮತ್ತು ಚೆನ್ನೈ ನಡುವೆ ನಡೆಯಲಿದೆ. ಶೀಘ್ರದಲ್ಲೇ 2 ಶೆಡ್ಯೂಲ್ಡ್​ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಈ ಸಲದ ಐಪಿಎಲ್​ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಭಾರತದಲ್ಲಿ ಲೋಕಸಭೆ ಎಲೆಕ್ಷನ್ ನಡೆಯುವುದರಿಂದ ಭದ್ರತೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಸಮಸ್ಯೆಯಾಗಬಹುದು ಎಂದು ಐಪಿಎಲ್ ಶಿಫ್ಟ್​ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ಇದಕ್ಕೆಲ್ಲ ಸದ್ಯ ಕಾರ್ಯದರ್ಶಿಯವರು ತೆರೆ ಎಳೆದಿದ್ದು ಐಪಿಎಲ್ ಭಾರತಲ್ಲೇ ನಡೆಯಲಿದೆ ಎಂದು ಹೇಳಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಯುಎಇಗೆ ಐಪಿಎಲ್ ಸ್ಥಳಾಂತರಿಸಲಾಗುವುದು ಎಂಬ ಊಹಾಪೋಹಗಳಿಗೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಳ್ಳಿ ಹಾಕಿದ್ದು ಭಾರತದಲ್ಲೇ ನಡೆಯಲಿವೆ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2024ರ ಐಪಿಎಲ್ UAEಗೆ ಶಿಫ್ಟ್​ ಮಾಡ್ತಾರಾ.. ಜಯ್ ಶಾ ಕೊಟ್ಟ ಸ್ಪಷ್ಟನೆ ಏನು?

https://newsfirstlive.com/wp-content/uploads/2024/02/RCB_CSK.jpg

Load More