ಕರುಣ್ ನಾಯರ್​ ಸ್ಥಾನಕ್ಕಾಗಿ ರೇಸ್​​ನಲ್ಲಿ 4 ಯಂಗ್​ ಪ್ಲೇಯರ್ಸ್​.. ವಿಶ್ವಾಸ ಕಳೆದುಕೊಂಡ್ರಾ ಕನ್ನಡಿಗ?

author-image
Bheemappa
Updated On
ಕರುಣ್ ನಾಯರ್​ ಸ್ಥಾನಕ್ಕಾಗಿ ರೇಸ್​​ನಲ್ಲಿ 4 ಯಂಗ್​ ಪ್ಲೇಯರ್ಸ್​.. ವಿಶ್ವಾಸ ಕಳೆದುಕೊಂಡ್ರಾ ಕನ್ನಡಿಗ?
Advertisment
  • ಟೀಮ್ ಇಂಡಿಯಾದಿಂದ ಯಾರಿಗೆ ಸಿಗಲಿದೆ ಈ ಗುಡ್​​ನ್ಯೂಸ್
  • ಕರುಣ್ ಕಮ್​ಬ್ಯಾಕ್ ಮಾಡ್ತಾರೆ ಅಂದುಕೊಂಡ್ರೆ ಫ್ಲಾಪ್ ಶೋ
  • ಕರುಣ್​ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ ಭಾರತ ತಂಡದ ಪ್ಲೇಯರ್ಸ್

ಕರುಣ್ ನಾಯರ್ ಮೇಲೆ ಕೋಚ್ ಗೌತಮ್ ಗಂಭೀರ್ ವಿಶ್ವಾಸ ಕಳೆದುಕೊಂಡ್ರಾ?. ಕನ್ನಡಿಗ ಕರುಣ್, ನಾಯಕ ಶುಭ್ಮನ್​ ಗಿಲ್​ಗೂ ಬೇಡವಾದ್ರಾ?. 3 ಟೆಸ್ಟ್ ಪಂದ್ಯಗಳಲ್ಲಿ ಫ್ಲಾಪ್ ಆದ ಕರುಣ್, ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ತಾರಾ ಇಲ್ವಾ?. ಈ ಎಲ್ಲಾ ಪ್ರಶ್ನೆಗಳು ಈಗ ಕ್ರಿಕೆಟ್ ಅಭಿಮಾನಿಗಳನ್ನ ಕಾಡ್ತಿದೆ. ಆ ಎಲ್ಲದಕ್ಕೂ ಉತ್ತರ ಇಲ್ಲಿದೆ.

9 ವರ್ಷಗಳ ಬಳಿಕ ಟೆಸ್ಟ್​ ಕ್ರಿಕೆಟ್​​​ಗೆ ರೀ-ಎಂಟ್ರಿ ಕೊಟ್ಟ ಕರುಣ್ ನಾಯರ್, ಆತ್ಮವಿಶ್ವಾಸದಿಂದ ಇಂಗ್ಲೆಂಡ್​​ ಫ್ಲೈಟ್ ಹತ್ತಿದ್ದರು. ಆಂಗ್ಲರ ನಾಡಲ್ಲಿ ತನ್ನ ಸಾಮರ್ಥ್ಯ ತೋರಿಸಬೇಕು, ಟೀಕಕಾರರಿಗೆ ಉತ್ತರಿಸಬೇಕು, ಟೀಮ್ ಇಂಡಿಯಾ ಪರ ಹೆಚ್ಚು ಹೆಚ್ಚು ಟೆಸ್ಟ್ ಪಂದ್ಯಗಳನ್ನ ಆಡಬೇಕು, ಟೆಸ್ಟ್ ಕ್ರಿಕೆಟರ್ ಎನಿಸಿಕೊಳ್ಳಬೇಕು ಅಂತ ಕರುಣ್ ನಾಯರ್​​ ಕನಸು ಕಂಡರು.

publive-image

ಕರುಣ್, ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡ್ತಾರೋ ಇಲ್ವಾ ಅನ್ನೋ ಅನುಮಾನ ಇತ್ತು. ಆದ್ರೆ ಸರಣಿಗೂ ಮುನ್ನ ಕರುಣ್​​​, ಇಂಗ್ಲೆಂಡ್ ಲಯನ್ಸ್ ವಿರುದ್ಧ ಕ್ಯಾಂಟಿಬರ್ರಿಯಲ್ಲಿ ಸಿಡಿಸಿದ ದ್ವಿಶತಕ, ಕನ್ನಡಿಗೆ ಟೆಸ್ಟ್​ ತಂಡದಲ್ಲಿ ಸ್ಥಾನ ದೊರೆಕಿಸುವಂತೆ ಮಾಡಿತು. ಆದ್ರೆ, ಲೀಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕರುಣ್, ಡಕೌಟ್ ಆಗಿ ತೀವ್ರ ನಿರಾಸೆಗೊಂಡರು.

ಮತ್ತೆ ಅನ್​ಲಕ್ಕಿ ಕ್ರಿಕೆಟರ್ ಆದ್ರಾ ಟ್ಯಾಲೆಂಟೆಡ್ ಕರುಣ್..?

ಎರಡನೇ ಇನ್ನಿಂಗ್ಸ್​ನಲ್ಲಾದ್ರೂ ಕರುಣ್ ಕಮ್​ಬ್ಯಾಕ್ ಮಾಡ್ತಾರೆ ಅಂದುಕೊಂಡ್ರೆ, ಅಲ್ಲೂ ಕೂಡ ಫ್ಲಾಪ್. ಇನ್ನು ಎಡ್ಜ್​​​ಬಸ್ಟನ್ ಮತ್ತು ಲಾರ್ಡ್ಸ್ ಟೆಸ್ಟ್​ ಪಂದ್ಯಗಳಲ್ಲಿ ಕರುಣ್​ಗೆ ಒಳ್ಳೆ ಸ್ಟಾರ್ಟ್​​ ಸಿಕ್ಕಿತ್ತು. ಆದ್ರೆ ಕರುಣ್​​​​​​​​​​ಗೆ ಲಕ್ ಇರಲಿಲ್ಲ ಅನಿಸುತ್ತದೆ. 30, 40 ರನ್​ಗಳಿಸುವಷ್ಟರಲ್ಲೇ ಕರುಣ್ ಔಟಾದರು.

ಇಂಗ್ಲೆಂಡ್ ವಿರುದ್ಧ ಕರುಣ್

ಲೀಡ್ಸ್, ಎಡ್ಜ್​ಬಸ್ಟನ್ ಮತ್ತು ಲಾರ್ಡ್ಸ್​ ಟೆಸ್ಟ್​ನ 6 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ಕರುಣ್, 131 ರನ್​ಗಳಿಸಿದ್ದಾರೆ. 21.83ರ ಸರಾಸರಿಯಲ್ಲಿ ರನ್​ಗಳಿಸಿರೋ ಕರುಣ್ ಬೆಸ್ಟ್ ಸ್ಕೋರ್ ಜಸ್ಟ್ 40.

ಟೆಸ್ಟ್ ಕಮ್​​​ಬ್ಯಾಕ್​​ಗೆ ಜಾತಕ ಪಕ್ಷಿಯಂತೆ ಕಾಯ್ತಿದ್ದ ಕರುಣ್, 9 ವರ್ಷಗಳಲ್ಲಿ ಸಿಕ್ಕಾಪಟ್ಟೆ ಹಾರ್ಡ್​​ವರ್ಕ್​ ಮಾಡಿದ್ದಾರೆ. ಆದರೆ, ಸದ್ಯ ಕರುಣ್ ಪರಿಸ್ಥಿತಿ ನೋಡಿದರೆ, ಮ್ಯಾಂಚೆಸ್ಟರ್ ಮತ್ತು ದ ಓವಲ್ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳೋದು ಅನುಮಾನ ಎನ್ನಲಾಗ್ತಿದೆ.

ಶ್ರೇಯಸ್​ಗೆ ಟೆಸ್ಟ್ ಕ್ರಿಕೆಟ್​​ನ ಡೋರ್ ಓಪನ್ ಆಗುತ್ತಾ..?

3 ಟೆಸ್ಟ್​ ಪಂದ್ಯಗಳಲ್ಲಿ ತಮ್ಮ ಮೇಲಿದ್ದ ನಿರೀಕ್ಷೆಗಳನ್ನ ಉಳಿಸಿಕೊಳ್ಳಲಾಗದ ಕರುಣ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯ ಉಳಿದ ಪಂದ್ಯಗಳಲ್ಲಿ ಕಾಣಿಸಿಕೊಳ್ತಾರೋ ಇಲ್ವೋ ಗೊತ್ತಿಲ್ಲ. ಯಾಕಂದ್ರೆ, ಈಗಾಗಲೇ ಬೆಂಚ್​​ನಲ್ಲಿ ಅಭಿಮನ್ಯು ಈಶ್ವರನ್, ಧೃವ್ ಜುರೆಲ್ ಮತ್ತು ಒಂದೇ ಒಂದು ಅವಕಾಶ ಪಡೆದು ಫೇಲ್ ಆಗಿದ್ದ ಸಾಯಿ ಸುದರ್ಶನ್ ಮತ್ತೆ ಚಾನ್ಸ್​ಗಾಗಿ ಕಾಯುತ್ತಿದ್ದಾರೆ.

ಒಂದೂವರೆ ವರ್ಷದ ಬಳಿಕ ಶ್ರೇಯಸ್​ಗೆ ಚಾನ್ಸ್..?

2024, ಫೆಬ್ರವರಿ ತಿಂಗಳಲ್ಲಿ ಶ್ರೇಯಸ್ ಅಯ್ಯರ್, ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದ್ರು. ಆದಾದ ನಂತರ ಶ್ರೇಯಸ್​​​, ಟೆಸ್ಟ್ ಕ್ರಿಕೆಟ್​​ನಿಂದ ಡ್ರಾಪ್ ಆಗಿದ್ದರು. ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿರೋ ಶ್ರೇಯಸ್​​ಗೆ, ಇದೀಗ ಭಾರತ ಟೆಸ್ಟ್ ತಂಡದ ಡೋರ್​​​​ ಸಲೀಸಲಾಗಿ ಓಪನ್ ಆಗೋ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಟೆಸ್ಟ್​ನಲ್ಲಿ ‘ವಿರಾಟ್​’ರೂಪ ದರ್ಶನ.. ಇಂಗ್ಲೆಂಡ್ ಬ್ಯಾಟರ್​​ಗಳ ಮೇಲೆ ಕೆಂಡಕಾರಿದ ಕ್ಯಾಪ್ಟನ್ ಗಿಲ್​​!

publive-image

ಮಿಡಲ್ ಆರ್ಡರ್​​​ಗೆ ಶ್ರೇಯಸ್ ಬೆಸ್ಟ್..!

ಶ್ರೇಯಸ್ ಅಯ್ಯರ್​​​, ಎಲ್ಲಾ ಸ್ಲಾಟ್​​​ಗೂ ಸೂಟ್ ಆಗುವಂತಹ ಪ್ಲೇಯರ್. ಅದು ನಂಬರ್.3 ಸ್ಲಾಟ್ ಇರಬಹುದು ಅಥವಾ ಮಿಡಲ್ ಆರ್ಡರ್ ಇರಬಹುದು. ಆ ಸ್ಲಾಟ್​​ಗೆ ಶ್ರೇಯಸ್ ಬೆಸ್ಟ್ ರೀಪ್ಲೇಸ್​ಮೆಂಟ್. ಶ್ರೇಯಸ್ 3 ಫಾರ್ಮೆಟ್ ಪ್ಲೇಯರ್. ಜೊತೆಗೆ ಅನುಭವಿ ಆಟಗಾರ ಬೇರೆ. ಹಾಗಾಗಿ ಟೆಸ್ಟ್ ಕ್ರಿಕೆಟ್​​ಗೆ ಮುಂಬೈಕರ್ ಎಂಟ್ರಿ ಕೊಟ್ರೆ, ನಾಯಕ ಮತ್ತು ಕೋಚ್​​ಗೆ ಅರ್ಧ ತಲೆನೋವು ದೂರವಾದಂತೆ.

ಕರುಣ್ ನಾಯರ್​ಗೆ 9 ವರ್ಷಗಳ ಬಳಿಕ ಮಿಂಚಲು ಗೋಲ್ಡನ್ ಚಾನ್ಸ್ ಸಿಕ್ಕಿತ್ತು. ಆದ್ರೆ ನಾಯರ್, ಸಿಕ್ಕ ಅವಕಾಶಗಳನ್ನ ಕೈ ಚೆಲ್ಲಿಕೊಂಡು, ಭಾರೀ ನಿರಾಸೆಗೊಂಡಿದ್ದಾರೆ. ಹೀಗಾಗಿ ಚಾನ್ಸ್​ಗಾಗಿ ಕಾಯ್ತುತ್ತಿರುವ ಶ್ರೇಯಸ್​​ಗೆ, ಸದ್ಯದಲ್ಲೇ ಗುಡ್​​ನ್ಯೂಸ್​ ಸಿಗೋ ಸಾಧ್ಯತೆ ಹೆಚ್ಚಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment