ಟೀಮ್​ ಇಂಡಿಯಾದ ಸ್ಟಾರ್​​ ಅಕ್ಷರ್​​ ಪಟೇಲ್​ಗೆ ಜಾಕ್​ಪಾಟ್​​; ಬಿಸಿಸಿಐನಿಂದ ಅಚ್ಚರಿ ನಿರ್ಧಾರ

author-image
Ganesh Nachikethu
Updated On
ಪ್ರೀತಿಗೆ ಸೇತುವೆಯಾದ ಒಂದು ಚಾಕೊಲೇಟ್​.. ಸಿನಿಮಾ ಮೀರಿಸುತ್ತೆ ಅಕ್ಷರ್ ಪಟೇಲ್ ಲವ್​ ಸ್ಟೋರಿ
Advertisment
  • ಸೌತ್​ ಆಫ್ರಿಕಾ ಟೂರ್​ನಲ್ಲಿ ಇರಲಿಲ್ಲ ಉಪ ನಾಯಕ
  • ಉಪ ನಾಯಕನ ಸ್ಥಾನಕ್ಕೆ ಅಕ್ಷರ್ ಪಟೇಲ್​​ ಅರ್ಹನಾ?
  • ಅಕ್ಷರ್ ಪಟೇಲ್ ಆಯ್ಕೆಯ ಹಿಂದಿದೆ ಬೇರೆಯದ್ದ ಕಾರಣ

ಇಂಗ್ಲೆಂಡ್​ ಟಿ20 ಸಿರೀಸ್​ಗೆ ಪ್ರಕಟಿಸಿರೋ ತಂಡದಲ್ಲಿ ಬೆಸ್ಟ್​ ಓಪನರ್ಸ್ ಇದ್ದಾರೆ. ಫೈರಿ ಆಲ್​​ರೌಂಡರ್​​​​ಗಳಿದ್ದಾರೆ. ಟಿ20 ಸ್ಪೆಷಲಿಸ್ಟ್​ ಪೇಸರ್ಸ್ ಆ್ಯಂಡ್ ಸ್ಪಿನ್ನರ್ಸ್ ಇದ್ದಾರೆ. ಎಲ್ಲಾ ಓಕೆ. ಆದ್ರೆ, ಅಕ್ಷರ್ ಪಟೇಲ್​​​​​​​​​​​​​ ಉಪ ನಾಯಕ ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಟಿ20 ಸಿರೀಸ್​ಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಹಿರಿಯರಿಗೆ ರೆಸ್ಟ್​ ನೀಡಿರುವ ಸೆಲೆಕ್ಷನ್ ಕಮಿಟಿ, ಯಂಗ್ ಟಿ20 ಸ್ಪೆಷಲಿಸ್ಟ್​​ಗಳಿಗೆ ಮಣೆ ಹಾಕಿದೆ. ಫೈರಿ ಆಟಗಾರರ ತಂಡ ಇಂಗ್ಲೆಂಡ್ ಸರಣಿಯಲ್ಲಿ ಸಿಕ್ಸರ್​ ಮಳೆ ಸುರಿಸೋ ಮುನ್ಸೂಚನೆಯನ್ನ ನೀಡ್ತಿದೆ. ಆದ್ರೆ, ಸೂರ್ಯಕುಮಾರ್ ಸಾರಥ್ಯದ ಟಿ20 ತಂಡದಲ್ಲಿ ಅಕ್ಷರ್ ಪಟೇಲ್ ಉಪ ನಾಯಕರಾಗಿದ್ದಾರೆ. ಇದೇ ಈಗ ಇಂಡಿಯನ್ ಕ್ರಿಕೆಟ್ ಲೋಕದ ಹಾಟ್​ ಟಾಫಿಕ್.

ಅಕ್ಷರ್​ ಪಟೇಲ್​ಗೆ ‘ಡಬಲ್ ಪ್ರಮೋಷನ್’​.. ಡಬಲ್ ಖುಷ್..!

ಕಳೆದ ತಿಂಗಳಷ್ಟೇ ತಂದೆಯಾಗಿ ಪ್ರಮೋಷನ್ ಪಡೆದಿದ್ದ ಅಕ್ಷರ್ ಪಟೇಲ್​​​ಗೆ, ಈಗ ಟೀಮ್​ ಇಂಡಿಯಾದ ಉಪ ನಾಯಕನ ಪಟ್ಟ ಒಲಿದಿದೆ. ಡಬಲ್​ ಪ್ರಮೋಷನ್​​ ವೈಯಕ್ತಿಕವಾಗಿ ಅಕ್ಷರ್ ಪಟೇಲ್​ಗೆ ಡಬಲ್ ಖುಷಿ ತಂದಿದೆ. ಆದ್ರೆ, ಅಕ್ಷರ್ ಪಟೇಲ್ ಟಿ20 ಉಪ ನಾಯಕನ ಹುದ್ದೆಗೇರಿರೋದು ಬಹುತೇಕರಿಗೆ ನಿಜಕ್ಕೂ ಅಚ್ಚರಿ ತರಿಸಿರೋದು ಸುಳ್ಳಲ್ಲ.

ಟಿ20 ತಂಡದ ಉಪ ನಾಯಕನ ರೇಸ್​ನಲ್ಲಿ ಅಕ್ಷರ್​ ಹೆಸರು ಇರಲೇ ಇಲ್ಲ. ಅನುಭವಿ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿದ್ದಾರೆ. ಪಾಂಡ್ಯನ ಸೈಡ್​ಲೈನ್​ ಮಾಡಿ ಅಕ್ಷರ್​​ ಪಟೇಲ್​ಗೆ ಉಪನಾಯಕ ಪಟ್ಟ ಕಟ್ಟಿರೋದು ನಿಜಕ್ಕೂ ಸರ್​ಪ್ರೈಸ್​​! ಅಂದ್ಹಾಗೆ ಸುಖಾ ಸುಮ್ಮನೆ ಈ ನಿರ್ಧಾರವನ್ನ ಸೆಲೆಕ್ಷನ್​ ಕಮಿಟಿ ಮಾಡಿಲ್ಲ. ಇದಕ್ಕೆ ಮಹತ್ವದ ಕಾರಣಗಳಿವೆ.

ಸೌತ್​ ಆಫ್ರಿಕಾ ಪ್ರವಾಸದಲ್ಲಿ ಇರಲಿಲ್ಲ ಉಪ ನಾಯಕ!

ವೈಟ್​ಬಾಲ್ ತಂಡದ ವೈಸ್ ಕ್ಯಾಪ್ಟನ್ ಆಗಿ ಈಗಾಗಲೇ ಶುಭ್​ಮನ್ ಗಿಲ್ ಗುರುತಿಸಿಕೊಂಡಿದ್ದಾರೆ. ಆದ್ರೆ, ಈ ಹಿಂದೆ ಗಿಲ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಪ್ರವಾಸ ಮಾಡಿತ್ತು. ಆಗ ಯಾರಿಗೂ ಉಪನಾಯಕನ ಹೊಣೆಯನ್ನ ನೀಡಿರಲಿಲ್ಲ. ಆದ್ರೀಗ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಅಕ್ಷರ್​ಗೆ ವೈಸ್ ಕ್ಯಾಪ್ಟನ್ಸಿ ಪಟ್ಟ ಕಟ್ಟಿದೆ. ಅನುಭವಿ ಹಾರ್ದಿಕ್​​ರನ್ನೂ ಅಕ್ಷರ್​ ಓವರ್​ ಟೇಕ್​ ಮಾಡಿದ್ದಾರೆ.

publive-image

ಈ ಹಿಂದೆ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾ ನಾಯಕನ ರೇಸ್​ನಲ್ಲಿದ್ರು. ನಾಯಕನಾಗಿ ಕೆಲ ಸರಣಿಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಕೂಡ ಉಪನಾಯಕನ ಸ್ಥಾನ ನೀಡಿದ್ರೆ, ಹಾರ್ದಿಕ್​ ಅವಮಾನ ಮಾಡಿದಂತಾಗಲಿದೆ. ಜೊತೆಗೆ ಇದು ತಂಡದ ಡ್ರೆಸ್ಸಿಂಗ್​ ರೂಮ್​ ವಾತಾವಣವನ್ನೂ ಕೆಡಿಸೋ ಸಾಧ್ಯತೆಯಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಟ್ಟಿರೋ ಸೆಲೆಕ್ಷನ್​​ ಕಮಿಟಿ ಅಕ್ಷರ್​ಗೆ ಪಟ್ಟ ಕಟ್ಟಿದೆ.

ಅಕ್ಷರ್ ಪಟೇಲ್ ಆಯ್ಕೆಗೆ ವಿಶ್ವಕಪ್​ ಕಾರಣ..!

ಪರ್ಫಾಮೆನ್ಸ್​ ವಿಚಾರದಲ್ಲೂ ಅಕ್ಷರ್​ ಪಟೇಲ್​ ಕನ್ಸಿಸ್ಟೆಂಟ್​ ಆಟದಿಂದ ಗಮನ ಸೆಳೆದಿದ್ದಾರೆ. 2024ರ T20 ವಿಶ್ವಕಪ್ ಗೆಲುವಿನಲ್ಲಿ ಅಕ್ಷರ್ ಪಾತ್ರ ನಿರ್ಣಾಯಕವಾಗಿತ್ತು. ಬ್ಯಾಟ್​ ಮತ್ತು ಬಾಲ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಅಕ್ಷರ್​, ಹೈಪ್ರೆಷರ್​ ಫೈನಲ್ಸ್​ನಲ್ಲಿ 47 ರನ್ ಸಿಡಿಸಿ ಮಿಂಚಿದ್ರು. ಈ ಇನ್ನಿಂಗ್ಸ್​ ಟೀಮ್ ಇಂಡಿಯಾದ ವಿಶ್ವಕಪ್ ಗೆಲುವಿನಲ್ಲಿ ಮೇಜರ್ ರೋಲ್​​ ಪ್ಲೇ ಮಾಡ್ತು.

ಅಷ್ಟೇ ಅಲ್ಲ.! ಟೂರ್ನಿಯುದ್ದಕ್ಕೂ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ್ದ ಅಕ್ಷರ್ ಪಟೇಲ್, ಒಟ್ಟು 9 ವಿಕೆಟ್ ಪಡೆದು ಮಿಂಚಿದ್ರು. ಎಕಾನಮಿಕಲ್​ ಸ್ಪೆಲ್​ಗಳನ್ನ ಹಾಕಿದ್ರು. ವಿಶ್ವಕಪ್​ ಹೊರತಾಗಿಯೂ ಸಿಕ್ಕ ಅವಕಾಶಗಳಲ್ಲಿ ಸಾಮರ್ಥ್ಯ ಫ್ರೂವ್ ಮಾಡಿದ್ದಾರೆ.

ಒಟ್ಟಿನಲ್ಲಿ, ಹಲವು ಲೆಕ್ಕಾಚಾರಗಳನ್ನ ಹಾಕಿ ಅಕ್ಷರ್​ ಪಟೇಲ್​ಗೆ ಸೆಲೆಕ್ಷನ್​ ಕಮಿಟಿ ಪಟ್ಟ ಕಟ್ಟಿದೆ. ಆದ್ರೆ, ಇದು ಇಂಗ್ಲೆಂಡ್ ಸರಣಿಗೆ ಮಾತ್ರ ಸಿಮೀತಾನ ಎಂಬ ಪ್ರಶ್ನೆಯೂ ಇದೆ. ಶುಭ್​ಮನ್​ ಗಿಲ್​ ಕಮ್​ಬ್ಯಾಕ್ ಮಾಡಿದ್ರೆ, ಸೆಲೆಕ್ಷನ್​ ಕಮಿಟಿ ನಿರ್ಧಾರ ಏನಿರಲಿದೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:IPL ಬ್ರ್ಯಾಂಡ್ ವ್ಯಾಲ್ಯೂ ಬರೋಬ್ಬರಿ 1 ಲಕ್ಷ ಕೋಟಿ; ಇದರಲ್ಲಿ ಆರ್​​​ಸಿಬಿ ತಂಡದ ಪಾಲು ಎಷ್ಟು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment