/newsfirstlive-kannada/media/post_attachments/wp-content/uploads/2025/06/BCCI.jpg)
ಐಪಿಎಲ್​ನಲ್ಲಿ ಆರ್​ಸಿಬಿ ಕೊನೆಗೂ ಟ್ರೋಫಿಗೆ ಮುತ್ತಿಟ್ಟಿದೆ. ಆದರೆ ಫೈನಲ್ ಪಂದ್ಯ ಮುಗಿದ ಮರುದಿನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ದುರಂತ, ಆರ್​ಸಿಬಿಗೆ ಕಪ್ಪುಚುಕ್ಕೆಯಾಗಿ ಉಳಿದಿದೆ.
ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿ 11 ಆರ್​ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅನಾಹುತ ಸಂಬಂಧ ಆರ್‌ಸಿಬಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಇಬ್ಬರು ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಒಬ್ಬರ ಬಂಧನ ಕೂಡ ಆಗಿದೆ. ಇದರಿಂದ ಆರ್​ಸಿಬಿ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಆರ್​ಸಿಬಿ ಐಪಿಎಲ್-2026ರ ಭಾಗವಾಗುವ ಬಗ್ಗೆ ಬಿಸಿಸಿಐ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.
ಬಿಸಿಸಿಐ ನಿಷೇಧದಂಥ ನಿರ್ಧಾರ ತೆಗೆದುಕೊಳ್ಳುತ್ತದೆಯೇ..?
ಆರ್‌ಸಿಬಿಯ ವಿಜಯೋತ್ಸವದಲ್ಲಿ ನಡೆದ ದುರಂತಕ್ಕೆ ಕಾರಣ ಯಾರು ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಆರ್​ಸಿಬಿ ತಪ್ಪಿತಸ್ಥ ಅಂತಾದರೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಪ್ರಶ್ನೆಯಿದೆ. ಐಪಿಎಲ್‌ನಲ್ಲಿರುವ ಎಲ್ಲಾ ಫ್ರಾಂಚೈಸಿಗಳು ವಾಣಿಜ್ಯ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಅವುಗಳ ಭಾಗವಹಿಸುವಿಕೆಯನ್ನು ಬಿಸಿಸಿಐ ತನ್ನ ಒಪ್ಪಂದಗಳಿಂದ ನಿಯಂತ್ರಿಸುತ್ತದೆ. ಆ ಒಪ್ಪಂದ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಹಲವು ನಿಯಮಗಳನ್ನೂ ಒಳಗೊಂಡಿದೆ. ತನಿಖಾಧಿಕಾರಿಗಳು ಈ ಗಂಭೀರ ನಿರ್ಲಕ್ಷ್ಯಕ್ಕೆ ಆರ್‌ಸಿಬಿಯನ್ನು ಹೊಣೆ ಮಾಡಿದರೆ, ‘ನ್ಯಾಯ ಒದಗಿಸಲು ಮತ್ತು ಲೀಗ್‌ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಬಿಸಿಸಿಐ ಕ್ರಮ ಕೈಗೊಳ್ಳಬಹುದು.
11 ಮುಗ್ಧರ ಪ್ರಾಣ ಹೋಗಿದೆ..
ಕಳೆದ ಮಂಗಳವಾರ ಆರ್‌ಸಿಬಿ ಪಂಜಾಬ್ ಕಿಂಗ್ಸ್ ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಂತರ ಇಡೀ ತಂಡ ಮತ್ತು ಬೆಂಗಳೂರು ತಂಡದ ಅಭಿಮಾನಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಮರುದಿನ ಅಂದರೆ ಬುಧವಾರ, ಆರ್​ಸಿಬಿ ಟೀಂ ಬೆಂಗಳೂರಿಗೆ ಆಗಮಿಸಿತ್ತು. ಆರ್​ಸಿಬಿ ಟೀಂ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಲು ನಿರ್ಧರಿಸಿತ್ತು. ಈ ಹಬ್ಬದ ವಾತಾವರಣವು ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿತು. ಲಕ್ಷಾಂತರ ಜನ ಚಿನ್ನಸ್ವಾಮಿ ಮೈದಾನದ ಬಳಿ ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು. ಇದರಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ