newsfirstkannada.com

ಆಟಗಾರರ​ ಮೇಲೆ ಬಿಸಿಸಿಐ ಅಸಮಾಧಾನ; ಇಶಾನ್ ಕಿಶನ್, ಪಾಂಡ್ಯ ಬದರ್ಸ್​​ಗೆ BCCI ವಾರ್ನ್..!

Share :

Published February 13, 2024 at 9:42am

  ಜನವರಿಯಿಂದಲೇ IPL ಮೂಡ್​​​ನಲ್ಲಿ ಆಟಗಾರರು

  ಐಪಿಎಲ್ ಮೂಡ್​ನಲ್ಲಿದ್ದವರಿಗೆ ಬಿಸಿಸಿಐ ವಾರ್ನ್​

  ರಣಜಿಗೆ ಚಕ್ಕರ್.. ಇಶಾನ್​ಗೆ ಎಚ್ಚರಿಕೆ ಕರೆಗಂಟೆ

ಒಂದೆಡೆ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್​ ಸರಣಿ ನಡೀತಿದ್ರೆ, ಮತ್ತೊಂದೆಡೆ ರಣಜಿ ಟ್ರೋಫಿ ಕಾವೇರುತ್ತಿದೆ. ಕೆಲ ಆಟಗಾರರು ಮಾತ್ರ ಈಗಾಗಲೇ ಐಪಿಎಲ್​ ಮೂಡ್​ಗೆ ಶಿಫ್ಟ್​ ಆಗಿದ್ದಾರೆ. ಇಂಥಹವರಿಗೆ ಇದೀಗ ಬಿಸಿ ಮುಟ್ಟಿಸುವ ಕೆಲಸಕ್ಕೆ ಬಿಸಿಸಿಐ ಬಿಗ್​​ಬಾಸ್​ಗಳು ಕೈ ಹಾಕಿದ್ದಾರೆ.

ಇಶಾನ್ ಕಿಶನ್. ಸದ್ಯ ಕಾಂಟ್ರವರ್ಸಿಯಿಂದಲೇ ಸದ್ದು ಮಾಡ್ತಿರೋ ಕ್ರಿಕೆಟರ್​. ಕಳೆದೊಂದು ತಿಂಗಳಿಂದ ಭಾರತೀಯ ಕ್ರಿಕೆಟ್​​ನ ಚರ್ಚೆಯ ಕೇಂದ್ರ ಬಿಂದು. ಸೌತ್ ಆಫ್ರಿಕಾ ಪ್ರವಾಸದಿಂದ ಹಿಂತಿರುಗಿದ ದಿನದಿಂದ ಸದಾ ಸುದ್ದಿಯಲ್ಲಿರುವ ಇಶಾನ್​ ಕಿಶನ್​​ಗೆ, ಬಿಸಿಸಿಐ ಈಗ ಬರೆ ಎಳೆಯಲು ಮುಂದಾಗಿದೆ.

ಎಲ್ಲಕ್ಕೂ ಚಕ್ಕರ್.. ಐಪಿಎಲ್​​​ಗೆ ಸಿದ್ಧತೆಗೆ ಹಾಜರ್

ಮೆಂಟಲ್ ಫಿಟಿಗ್​ ಎಂದು ಸಬೂಬು ನೀಡಿದ್ದ ಇಶಾನ್ ಕಿಶನ್, ಸೌತ್ ಆಫ್ರಿಕಾ ಪ್ರವಾಸದಿಂದ ವಾಪಸ್ ಆಗಿದ್ದರು. ದುಬೈ ಗಿಬೈ ಅಂತೆಲ್ಲಾ ಸುತ್ತಾಡಿದ್ದ ಇಶಾನ್ ಕಿಶನ್, ಮೋಜು ಮಸ್ತಿ ಮಾಡಿದ್ರು. ಈ ಬೆನ್ನಲ್ಲೇ ಕೋಚ್ ದ್ರಾವಿಡ್ ಸೇರಿದಂತೆ ಬಿಸಿಸಿಐ ದೇಶಿ ಕ್ರಿಕೆಟ್ ಆಡುವ ಸೂಚನೆ ನೀಡಲಾಗಿತ್ತು. ಇದಕ್ಕೆಲ್ಲಾ ಕ್ಯಾರೆ ಎನ್ನದ ಇಶಾನ್, ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್​ನಿಂದಲೂ ದೂರ ಉಳಿದಿದ್ರು. ಬಿಸಿಸಿಐನ ಸೂಚನೆಯನ್ನೇ ದಿಕ್ಕರಿಸಿದ ಇಶಾನ್, ರಣಜಿ ಬದಲಿಗೆ ಹಾಜರಾಗಿರೋದು ಐಪಿಎಲ್ ಪ್ರಿಪರೇಷನ್​​ಗೆ.

ಪಾಂಡ್ಯ ಬ್ರದರ್ಸ್​ ಜೊತೆ ಐಪಿಎಲ್​ಗೆ ಇಶಾನ್​​​ ಸಿದ್ಧತೆ

ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ಇಶಾನ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರೆ ಆಟಗಾರರಿಗೆ ಬಿಸಿಸಿಐ ರಣಜಿಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಅತ್ತ ರಣಜಿಗೂ ಹಾಜರಾಗದೇ, ಇತ್ತ ಎನ್​ಸಿಎಗೂ ಅಟೆಂಡ್ ಆಗದ ಇಶಾನ್​ ಕಿಶನ್​ ಪಾಂಡ್ಯ ಬ್ರದರ್ಸ್​ ಜೊತೆ ಐಪಿಎಲ್​​ ಪ್ರಿಪರೇಷನ್​​ಗೆ ತೆರಳಿದ್ದಾರೆ. ಐಪಿಎಲ್ ಆರಂಭಕ್ಕೆ ಒಂದು ತಿಂಗಳಿಗೂ ಅಧಕ ದಿನವಿದೆ. ನಡೆದುಕೊಂಡ ರೀತಿ ಬಿಸಿಸಿಐ ಬಿಗ್​ಬಾಸ್​​ಗಳ ಕಣ್ಣು ಕೆಂಪಾಗಿಸಿದೆ.

ಏಕದಿನ ವಿಶ್ವಕಪ್​​ ವೇಳೆ ಆ್ಯಂಕಲ್ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯ, ಚೇತರಿಸಿಕೊಂಡು ಹಲವು ದಿನಗಳೇ ಕಳೆದಿವೆ. ಆದ್ರೆ, ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಜನವರಿ ತಿಂಗಳಿಂದಲೇ ಐಪಿಎಲ್​ ಪ್ರಿಪರೇಷನ್​​​​​ನಲ್ಲೇ ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೀಗ ಬಿಸಿಸಿಐ ಖಡಕ್ ಸಂದೇಶ ರವಾನಿಸಿದೆ. ಮುಂದಿನ ಕೆಲ ದಿನಗಳಲ್ಲಿ ಎಲ್ಲಾ ಆಟಗಾರರು, ರಾಜ್ಯ ತಂಡಗಳ ಜೊತೆ ರಣಜಿ ಆಡುವ ಬಗ್ಗೆ ಮಾತುಕತೆ ನಡೆಸುವಂತೆ ಸೂಚಿಸಿದೆ. ಇದಿಷ್ಟೇ ಅಲ್ಲ, ಅನ್​​ಫಿಟ್​ ಇರೋ ಆಟಗಾರರೆಲ್ಲಾ ಎನ್​ಸಿಎಗೆ ಹಾಜರಾಗುವಂತೆಯೂ ಎಚ್ಚರಿಕೆ ನೀಡಿದೆ. ಈ ಫೈನಲ್​ ವಾರ್ನಿಂಗ್ ಅನ್ನ ಇಶಾನ್ ಪಾಲಿಸ್ತಾರಾ ಅನ್ನೋದೇ ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ತಂಡಕ್ಕೆ ಗೈರಾಗಿ ಐಪಿಎಲ್​ಗೆ ಜೈ

ಇಶಾನ್ ಕಿಶನ್​ ಮಾತ್ರವೇ ಅಲ್ಲ. ಹಾರ್ದಿಕ್ ಪಾಂಡ್ಯ, ಚೆನ್ನೈ ಸೂಪರ್ ಕಿಂಗ್ಸ್​ ತಂಡದ ವೇಗಿ ದೀಪಕ್​ ಚಹರ್​ ಕೂಡ ಇದೇ ಸಾಲಿಗೆ ಸೇರ್ತಾರೆ. ವೈಯಕ್ತಿಕ ಕಾರಣ ನೀಡಿ ಸೌತ್ ಆಫ್ರಿಕಾ ಪ್ರವಾಸದಿಂದ ಹೊರಗುಳಿದ ದೀಪಕ್ ಚಹರ್ ಕೂಡ, ರಣಜಿ ಬದಲಿಗೆ ಐಪಿಎಲ್ ಪ್ರಿಪರೇಷನ್​ನಲ್ಲೇ ತೊಡಗಿದ್ದಾರೆ. ಹೀಗಾಗಿ ಇಂಥವರಿಗೆ ಪಾಠ ಕಲಿಸುವ ಕೆಲಸಕ್ಕೆ ಬಿಸಿಸಿಐ ಕೈಹಾಕಿದೆ. ಒಟ್ನಲ್ಲಿ, ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎಂಬ ಗಾದೆ ಮಾತಿದೆ. ಅದರಂತೆಯೇ ಇಷ್ಟು ದಿನ ಮಾತಿನ ಪೆಟ್ಟು ನೀಡಿದ್ದ ಬಿಗ್​ಬಾಸ್​ಗಳು, ಈಗ ಮಾತು ಕೇಳದವರಿಗೆ ದೊಣ್ಣೆ ಪೆಟ್ಟು ನೀಡೋಕೆ ಹೊರಟಿರೋದಂತು ಸತ್ಯ. ಕ್ರಿಕೆಟರ್ಸ್​ ಈಗಲಾದರೂ ಬುದ್ದಿ ಕಲೀತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಟಗಾರರ​ ಮೇಲೆ ಬಿಸಿಸಿಐ ಅಸಮಾಧಾನ; ಇಶಾನ್ ಕಿಶನ್, ಪಾಂಡ್ಯ ಬದರ್ಸ್​​ಗೆ BCCI ವಾರ್ನ್..!

https://newsfirstlive.com/wp-content/uploads/2024/01/HARDIK-PANDYA-3.jpg

Load More