/newsfirstlive-kannada/media/post_attachments/wp-content/uploads/2024/08/Gambhir_Rohit-Fight-1.jpg)
ಚಾಂಪಿಯನ್ಸ್ ಟ್ರೋಫಿಗೆ ಕೌಂಟ್ಡೌನ್ ಶುರುವಾಗಿದ್ದು, ದುಬೈಗೆ ಹಾರಲು ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸಜ್ಜಾಗಿ ನಿಂತಿದೆ. ಆದ್ರೆ, ಯುಎಇ ಪ್ರಯಾಣದ ಹೊತ್ತಿನಲ್ಲೇ ರೋಹಿತ್ ಶರ್ಮಾರ ಫ್ಯೂಚರ್ ಡಿಬೇಟ್ ಮತ್ತೆ ಮುನ್ನಲೆಗೆ ಬಂದಿದೆ. ರೋಹಿತ್ ಭವಿಷ್ಯದ ಬಗ್ಗೆ ಬಿಸಿಸಿಐ ಮೂಲಗಳೇ ಒಂದು ಹೇಳ್ತಿದ್ರೆ, ರೋಹಿತ್ ಮತ್ತೊಂದು ಹೇಳ್ತಿದ್ದಾರೆ. ಆದ್ರೆ, ಇದೆಲ್ಲವನ್ನು ನೋಡ್ತಿರುವ ಫ್ಯಾನ್ಸ್ ಮಾತ್ರ, ಈ ಟೈಮ್ನಲ್ಲಿ ಇದು ಬೇಕಿತ್ತಾ ಅಂತಿದ್ದಾರೆ.
ಕೆಲ ವರ್ಷಗಳಿಂದ ರಿಪೋರ್ಟ್ಸ್ ಬರ್ತಾನೆ ಇದೆ. ನಾನು ರಿಪೋರ್ಟ್ ಬಗ್ಗೆ ಕ್ಲಾರಿಫೈ ಮಾಡಲು ಇಲ್ಲಿಲ್ಲ. ನನಗೀಗ ಇಂಗ್ಲೆಂಡ್ ಹಾಗೂ ಚಾಂಫಿಯನ್ಸ್ ಟ್ರೋಫಿ ಮುಖ್ಯವಾಗಿದೆ. ನನ್ನ ಫೋಕಸ್, ಈ ಗೇಮ್ಸ್ ಮೇಲಿದೆ. ಈ ನಂತರ ಏನಾಗಲಿದೆ ಎಂದು ನೋಡೋಣ ಎಂದಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ.
ಹಿಟ್ಮ್ಯಾನ್ ರೋಹಿತ್, ತನ್ನ ಕ್ರಿಕೆಟ್ ಕರಿಯರ್ ಬಗ್ಗೆ ನೀಡಿದ ಕ್ಲಾರಿಟಿ ಇದು. ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮಾತ್ರನೇ ನನ್ನ ಫೋಕಸ್ ಎಂದಿರುವ ರೋಹಿತ್ ಚಾಂಪಿಯನ್ಸ್ ಟ್ರೋಫಿ ಅದ್ಮೇಲೆ ಏನ್ ಆಗುತ್ತೆ ನೋಡೋಣ ಎಂಬ ಕ್ಲಿಯರ್ ಕಟ್ ಮೆಸೇಜ್ ನೀಡಿದ್ದಾರೆ. ಆದ್ರೆ, ಬಿಸಿಸಿಐ ಮೂಲಗಳು ಮಾತ್ರ, ಬೇರೆಯದ್ದೇ ಕಥೆ ಹೇಳ್ತಿವೆ.
ಮುಂದಿನ ಭವಿಷ್ಯ ನಿರ್ಧರಿಸಿ..!
ಕೊನೆ ಸೆಲೆಕ್ಷನ್ ಮೀಟಿಂಗ್ನಲ್ಲಿ ರೋಹಿತ್ ಶರ್ಮಾ ಜೊತೆ ಸೆಲೆಕ್ಟರ್ಸ್, ಬಿಸಿಸಿಐ ಚರ್ಚೆ ನಡೆಸಿದೆ. ಚಾಂಪಿಯನ್ಸ್ ಟ್ರೋಫಿ ನಂತರ ಭವಿಷ್ಯ ನಿರ್ಧರಿಸಲು ತಿಳಿಸಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಏಕದಿನ ವಿಶ್ವಕಪ್ ದೃಷ್ಟಿಯಿಂದ ಲಾಂಗ್ ಟರ್ಮ್ ಪ್ಲಾನ್ನಲ್ಲಿದೆ ಎಂದರು ಬಿಸಿಸಿಐ ಅಧಿಕಾರಿ.
ಇದನ್ನೂ ಓದಿ:ಎಬಿಡಿ ತಂಡಕ್ಕೆ ಕರೆತರಲು RCB ಸರ್ವ ಪ್ರಯತ್ನ.. ಈ ಜೂನಿಯರ್ಗೆ ಇದೆ ಆ ಸ್ಕಿಲ್ಗಳು!
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಲೆಕ್ಷನ್ ಮೀಟಿಂಗ್ನಲ್ಲೇ ಸೆಲೆಕ್ಷನ್ ಕಮಿಟಿ, ಬಿಸಿಸಿಐ ರೋಹಿತ್ ಶರ್ಮಾಗೆ ಡೈಡ್ ಲೈನ್ ನೀಡಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ. ಆದ್ರೀಗ ಬಿಸಿಸಿಐನ ಈ ನಡೆ ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ