/newsfirstlive-kannada/media/post_attachments/wp-content/uploads/2023/09/Shreyas-Iyer_1.jpg)
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದು ಗೊತ್ತೇ ಇದೆ. ಜಸ್ಟ್ ದೇಶಿ ಕ್ರಿಕೆಟ್ನಿಂದ ದೂರ ಉಳಿದಿದ್ದಕ್ಕೆ ತಂಡದಿಂದ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗಿದ್ದ ಇವರು, ಕಮ್ಬ್ಯಾಕ್ಗೆ ಹೆಣೆಗಾಡುವಂತಾಗಿದೆ. ಸದ್ಯ ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಿದ್ರು, ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಗಿದೆ.
2023ರ ಎಕದಿನ ವಿಶ್ವಕಪ್ ಮುಗಿದಿದ್ದೇ ತಡ ಹೆಚ್ಚು ಚರ್ಚೆಯಲ್ಲಿದ್ದ ಹೆಸರು ಶ್ರೇಯಸ್ ಅಯ್ಯರ್. ಮುಂಬೈಕರ್ ಶ್ರೇಯಸ್ ಅದ್ಭುತ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾದಿಂದ ಕೈಬಿಟ್ಟ ನಡೆ ಅಚ್ಚರಿಗೆ ದೂಡಿತ್ತು. ದೇಶಿ ಕ್ರಿಕೆಟ್ ಆಡುವ ಬಿಸಿಸಿಐ ಸೂಚನೆಗೂ ಸೆಡ್ಡು ಹೊಡೆದಿದ್ದರು ಅಯ್ಯರ್. ಇದಕ್ಕೆ ಕುಪಿತಗೊಂಡಿದ್ದ ಬಿಸಿಸಿಐ, ವಾರ್ಷಿಕ ಗುತ್ತಿಗೆ ಪಟ್ಟಿಯಿಂದಲೇ ಕೈಬಿಟ್ಟು ಶಾಕ್ ನೀಡಿತ್ತು.
ರೂಲ್ಸ್ ಫಾಲೋ ಮಾಡಿ..!
ನೀವು ದುಲೀಪ್ ಟ್ರೋಫಿ ತಂಡವನ್ನು ನೋಡಿದರೆ, ಸದ್ಯ ರೋಹಿತ್ ಮತ್ತು ವಿರಾಟ್ ವಿರಾಮದಲ್ಲಿದ್ದಾರೆ. ಇದಲ್ಲದೇ ಇತರೆ ಆಟಗಾರರು ದುಲೀಪ್ ಟ್ರೋಫಿ ಆಡಲಿದ್ದಾರೆ. ನಾನು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಶ್ರೇಯಸ್ ಅಯ್ಯರ್ ದುಲೀಪ್ ಟ್ರೋಫಿ ಆಡುತ್ತಿದ್ದಾರೆ. ಕಮ್ಬ್ಯಾಕ್ ಮಾಡಬೇಕಾದ್ರೆ, ರೂಲ್ಸ್ ಫಾಲೋ ಮಾಡಬೇಕು. ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು. ನಾವು ಸ್ವಲ್ಪ ಕಟ್ಟುನಿಟ್ಟಾಗಿದ್ದೇವೆ. ಜಡೇಜಾ ಗಾಯಗೊಂಡಾಗ ಅವರಿಗೆ ಕರೆ ಮಾಡಿ ದೇಶಿ ಪಂದ್ಯಗಳನ್ನ ಆಡುವಂತೆ ಹೇಳಿದ್ದು ನಾನೇ. ಇದೀಗ ಗಾಯಾಳುವಾಗಿ ಹೊರಗಿರುವವರು ದೇಶಿ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಸಾಬೀತುಪಡಿಸಿದ ನಂತರವೇ ಭಾರತ ತಂಡಕ್ಕೆ ಸೇರಿಸಿಕೊಳ್ಳುವುದು ಎಂದಿದ್ದಾರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ.
ರೂಲ್ಸ್ ಫಾಲೋ ಮಾಡಿ, ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಜಯ ಶಾ ಎಚ್ಚರಿಕೆ ನೀಡಿದ್ದಾರೆ. ಡೊಮೆಸ್ಟಿಕ್ ರೂಲ್ಸ್ ವಿಚಾರದಲ್ಲಿ ರಾಜೀಯೇ ಇಲ್ಲ ಎಂದಿರುವ ಜಯ ಶಾ, ಡೊಮೆಸ್ಟಿಕ್ ಆಡಿದ್ರಷ್ಟೇ ಟೀಮ್ ಇಂಡಿಯಾ ಡೋರ್ ಓಪನ್ ಆಗುತ್ತೆ ಅನ್ನೋ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ:IPL 2025: ಆರ್ಸಿಬಿ ಹೊಸ ರೀಟೈನ್ ಲಿಸ್ಟ್ ಲೀಕ್; ಉತ್ತಮ ಪ್ರದರ್ಶನ ನೀಡಿದ್ದ ಸ್ಟಾರ್ ಆಟಗಾರರೇ ಔಟ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್