/newsfirstlive-kannada/media/post_attachments/wp-content/uploads/2024/11/Rohit_Kohli-Test.webp)
ಇತ್ತೀಚೆಗೆ ಮೆಲ್ಬರ್ನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ 12 ರನ್ಗಳಿಗೆ ಸುಸ್ತಾದ್ರೆ, ವಿರಾಟ್ ಮತ್ತದೇ ತಪ್ಪಿಗೆ ವಿಕೆಟ್ ಒಪ್ಪಿಸಿ 2 ಇನ್ನಿಂಗ್ಸ್ಗಳಿಂದ 41 ರನ್ ಗಳಿಸಿದ್ರು. ಮಹತ್ವದ ಪಂದ್ಯದಲ್ಲಿ ಜಾವಾಬ್ದಾರಿಯುತ ಬ್ಯಾಟಿಂಗ್ ಮಾಡಿರೋ ಈ ದಿಗ್ಗಜರ ಭವಿಷ್ಯದ ಬಗ್ಗೆ ಚರ್ಚೆ ಜೋರಾಗಿದೆ.
ಕೊಹ್ಲಿ, ರೋಹಿತ್ ಕಳಪೆ ಪ್ರದರ್ಶನ
ಪ್ರಸಕ್ತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸಿರೀಸ್ನಲ್ಲಿ ರೋಹಿತ್, 5 ಇನ್ನಿಂಗ್ಸ್ಗಳಿಂದ 6.2ರ ಆವರೇಜ್ನಲ್ಲಿ 31 ರನ್ ಗಳಿಸಿದ್ರೆ, ವಿರಾಟ್ 7 ಇನ್ನಿಂಗ್ಸ್ಗಳಿಂದ 27.8ರ ಬ್ಯಾಟಿಂಗ್ ಆವರೇಜ್ನಲ್ಲಿ 167 ರನ್ ಗಳಿಸಿದ್ದಾರೆ. ಒಂದು ಶತಕ ಸಿಡಿಸಿದ್ದೆ ಬೆಸ್ಟ್ ಪರ್ಫಾಮೆನ್ಸ್.
2024ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಪ್ರದರ್ಶನ
ಆಸ್ಟ್ರೇಲಿಯಾ ನೆಲದಲ್ಲಿ ಮಾತ್ರವಲ್ಲ. 2024ರ ಇಡೀ ವರ್ಷ ಇವರಿಬ್ರು ಪರದಾಡಿದ್ದಾರೆ. 26 ಇನ್ನಿಂಗ್ಸ್ಗಳಿಂದ ರೋಹಿತ್, 24.76 ಬ್ಯಾಟಿಂಗ್ ಸರಾಸರಿಯಲ್ಲಿ 619 ರನ್ಗಳಿಸಿದ್ದು, 2 ಅರ್ಧಶತಕ, 2 ಶತಕ ದಾಖಲಿಸಿದ್ದಾರೆ. ಇನ್ನು ವಿರಾಟ್, 17 ಇನ್ನಿಂಗ್ಸ್ಗಳಿಂದ 24.52ರ ಬ್ಯಾಟಿಂಗ್ ಸರಾಸರಿಯಲ್ಲಿ 417 ರನ್ ಗಳಿಸಿದ್ದಾರೆ. 1 ಶತಕ, 1 ಅರ್ಧಶತಕ ಸಿಡಿಸಿದ್ದೆ ಕೊಹ್ಲಿಯ ಮಹಾ ಸಾಧನೆಯಾಗಿದೆ. ಹೀಗಾಗಿ ಇವರು ನಿವೃತ್ತಿ ಆಗಲಿದ್ದಾರಾ? ಅನ್ನೋ ಸಂಶಯ ಮೂಡಿದೆ.
ನಿವೃತ್ತಿ ವದಂತಿ ತಳ್ಳಿ ಹಾಕಿದ ರೋಹಿತ್
ಇನ್ನು, ನಿವೃತ್ತಿ ಬಗೆಗಿನ ವದಂತಿಯನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ. ವಿರಾಟ್ ಈ ವಿಚಾರದಲ್ಲಿ ಇನ್ನೂ ಮೌನವಾಗಿದ್ದಾರೆ. ಸತತ ವೈಫಲ್ಯದಿಂದ ಬಳಲುತ್ತಿರುವ ವಿರಾಟ್, ಸಿಡ್ನಿ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ಘೋಷಿಸ್ತಾರೆ ಎನ್ನಲಾಗ್ತಿದೆ. ಆದ್ರೆ, ರೋಹಿತ್ ಅಡ್ಡಗೋಡೆಯ ಮೇಲೆ ದೀಪ ಇಟ್ಟಿರೋದ್ರಿಂದ ಕೊಹ್ಲಿ ಮುಂದಿನ ನಡೆ ಏನು ಅನ್ನೋದು ಕ್ಯೂರಿಯಾಸಿಟಿ ಹುಟ್ಟಿಸಿದೆ.
ಬಿಸಿಸಿಐ ಸೆಲೆಕ್ಟರ್ಗಳ ಉತ್ತರ ಏನು?
ಕಳೆದೊಂದು ವರ್ಷದಿಂದ ರೋಹಿತ್, ವಿರಾಟ್ ಉತ್ತಮ ಪ್ರದರ್ಶನ ನೀಡ್ತಿಲ್ಲ. ಸದ್ಯ ಆಸ್ಟ್ರೇಲಿಯಾದಲ್ಲೂ ಅಟ್ಟರ್ ಫ್ಲಾಫ್ ಆಗಿದ್ದಾರೆ. ಇವರ ಪ್ರದರ್ಶನ ಕಣ್ತುಂಬಿಕೊಂಡ ಎಲ್ಲರಿಂದ ಟೀಕೆ, ಟಿಪ್ಪಣೆಗಳು ಕೇಳಿ ಬರ್ತಿವೆ. ಈಗಾಗಲೇ ಬಾರ್ಡರ್ ಗವಾಸ್ಕರ್ ಟೆಸ್ಟ್ನಲ್ಲಿ ಪ್ರದರ್ಶನ ನೀಡಿದ್ರಷ್ಟೇ ಚಾನ್ಸ್ ಎಂದಿರುವ ಟೀಮ್ ಮ್ಯಾನೇಜ್ಮೆಂಟ್ ಆ್ಯಂಡ್ ಬಿಸಿಸಿಐ, ರೋಹಿತ್, ವಿರಾಟ್ ಕೊಹ್ಲಿಗೆ ಸಿಡ್ನಿ ಟೆಸ್ಟ್ ಬಳಿಕ ಮನೆಗೆ ನಡೆಯಿರಿ ಎಂದು ಬಿಸಿಸಿಐ ವಾರ್ನಿಂಗ್ ನೀಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕ್ಯಾಪ್ಟನ್ ರೋಹಿತ್ ವಿರುದ್ಧ ಅಸಮಾಧಾನ ಹೊರಹಾಕಿದ ಕೋಚ್ ಗಂಭೀರ್; ಇಬ್ಬರ ಮಧ್ಯೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ