/newsfirstlive-kannada/media/post_attachments/wp-content/uploads/2025/05/IPL_MATCH_1.jpg)
ಭಾರತ ಹಾಗೂ ಪಾಕಿಸ್ತಾನದ ನಡುವೆ ಘರ್ಷಣೆ ತೀವ್ರಗೊಂಡ ಬೆನ್ನಲ್ಲೇ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯದಲ್ಲಿ ರದ್ದು ಮಾಡಲಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರರನ್ನು ವಿಶೇಷ ವಂದೇ ಭಾರತ್ ರೈಲಿನ ಮೂಲಕ ದೆಹಲಿಗೆ ಕಳುಹಿಸಿಕೊಡಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ​ ಮಂಡಳಿ (ಬಿಸಿಸಿಐ) ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಬಳಿಕ ರೈಲಿನ ಮೂಲಕ ಪಂಜಾಬ್ ಕಿಂಗ್ಸ್​ ಹಾಗೂ ಡೆಲ್ಲಿ ಆಟಗಾರರನ್ನು, ಸಿಬ್ಬಂದಿ ಹಾಗೂ ಐಪಿಎಲ್​ಗೆ ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ ಸುಮಾರು 300 ಜನರನ್ನು ದೆಹಲಿಗೆ ಸ್ಥಳಾಂತರ ಮಾಡಲಾಗಿದೆ. ಪರಿಸ್ಥಿತಿ ಬಗ್ಗೆ ಪ್ರತಿಕ್ಷಣ ಮಾಹಿತಿ ಪಡೆಯಲಾಗುತ್ತಿದೆ.
ಇದನ್ನೂ ಓದಿ: INS ವಿಕ್ರಾಂತ್ ಮಾರಕ ದಾಳಿ.. ಪಾಕಿಸ್ತಾನದ ಕರಾಚಿ ಬಂದರು ಸಂಪೂರ್ಣ ನಾಶ
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಎರಡು ದೇಶಗಳ ವಿಮಾನಯಾನದಲ್ಲಿ ಈಗಾಗಲೇ ವ್ಯತ್ಯಯವಾಗಿದೆ. ಇದರಿಂದ ಆಟಗಾರರಿಗೆ, ಐಪಿಎಲ್​ನ ಅಧಿಕಾರಿಗಳಿಗೆ ರೈಲಿನ ವ್ಯವಸ್ಥೆ ಮಾಡಿ ದೆಹಲಿಗೆ ಕಳುಹಿಸಿ ಕೊಡಲಾಗಿದೆ. ಇನ್ನು ಪಂದ್ಯದ ವೇಳೆ ಫ್ಲಡ್ ಲೈಟ್ಸ್ ಆಫ್ ಆಗುತ್ತಿದ್ದಂತೆ ಮ್ಯಾಚ್ ಅನ್ನು ರದ್ದು ಮಾಡಲಾಗಿತ್ತು.
ಪಂದ್ಯದ ವೇಳೆ ಫ್ಲಡ್ ಲೈಟ್ಸ್ ಆಫ್ ಆಗುತ್ತಿದ್ದಂತೆ ಸ್ಟೇಡಿಯಂನ ಗ್ಯಾಲರಿಯಲ್ಲಿ ಕುಳಿತ್ತಿದ್ದ ಅಭಿಮಾನಿಗಳನ್ನು ಹೋಗುವಂತೆ ಸೂಚನೆ ಕೊಡಲಾಗಿತ್ತು. ಸ್ವತಹ ಐಪಿಎಲ್ ಚೇರ್ಮನ್ ಆಗಿರುವ ಅರುಣ್ ಧುಮಾಲ್ ಅವರು ಮೈದಾನಕ್ಕೆ ಬಂದು ಎಲ್ಲರೂ ಎದ್ದು ಹೋಗುವಂತೆ ಮನವಿ ಮಾಡಿದರು. ಇದರಿಂದ ಕೆಲವೇ ಸಮಯದಲ್ಲಿ ಇಡೀ ಮೈದಾನವೇ ಖಾಲಿ ಆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ