ಹೊಸ ವರ್ಷಕ್ಕೆ ಬಂದ ಸಂದೇಶಗಳ ಬಗ್ಗೆ ಇರಲಿ ಎಚ್ಚರ; ಒಂದೇ ಒಂದು ಕ್ಲಿಕ್​​ನಿಂದ ಬದುಕಿಗೆ ಬೀಳುತ್ತೆ ಪೆಟ್ಟು..!

author-image
Ganesh
Updated On
ಹೀಗೆ ಮಾಡಿದ್ರೆ ಭಾರತವನ್ನೇ ಬಿಡ್ತೀವಿ; ಕೇಂದ್ರ ಸರ್ಕಾರಕ್ಕೆ ವಾಟ್ಸಪ್​ ಎಚ್ಚರಿಕೆ!
Advertisment
  • QR ಕೋಡ್​​ನಲ್ಲಿ ಬಂದಿರೋ ವಿಶಸ್​ ಮೇಲೆ ಕ್ಲಿಕ್​ ಮಾಡಬೇಡಿ
  • ಶುಭಾಶಯದ ಲಿಂಕ್ ಎಂದು ಕಂಡ ಕಂಡ URL ಮೇಲೆ ಕ್ಲಿಕ್ ಬೇಡ
  • ಅಪರಿಚಿತರ ಮೆಸೇಜ್​​ಗಳಿಂದ ಆದಷ್ಟು ದೂರ ಇದ್ದುಬಿಡಿ

ಜನ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಆತ್ಮೀಯರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಪರಸ್ಪರ ಶುಭ ಹಾರೈಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮೆಸೇಜ್​​ಗಳನ್ನು ಕಳುಹಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಿದ್ದಾರೆ. ಈ ನಡುವೆ ಕೆಲವು ವಂಚಕರು ನಿಮ್ಮ ಮೇಲೆ ಕಣ್ಣಿಟ್ಟಿರಬಹುದು ಹುಷಾರ್!

ಒಮ್ಮೆ ಯೋಚಿಸಿ..

ಹೊಸ ವರ್ಷದ ಸಂದೇಶದೊಂದಿಗೆ ವಂಚಕರು ನಿಮ್ಮನ್ನು ಬಲಿಪಶು ಮಾಡಲು ಹೊಂಚು ಹಾಕಿರಬಹುದು. ಯಾವುದೋ ಅಪರಿಚಿತ, ಪರಿಚಿತರ ಸೋಗಿನಲ್ಲಿ ನಿಮಗೆ ಬರುವ ಮೆಸೇಜ್​​ಗಳ ಮೇಲೆ ಕ್ಲಿಕ್ ಮಾಡುವಾಗ ಒಮ್ಮೆ ಯೋಚಿಸಿ. ಯಾಕೆಂದರೆ ಒಂದು ಸಣ್ಣ ಕ್ಲಿಕ್​ನಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವೇ ಖಾಲಿ ಆಗಬಹುದು ಎಚ್ಚರ ಇರಲಿ.

ಇದನ್ನೂ ಓದಿ:Thank You ಹೇಳಿದ ರೋಹಿತ್ ಶರ್ಮಾರ ಪೋಸ್ಟ್​ ವೈರಲ್; ವರ್ಷದ ಮೊದಲ ದಿನವೇ ಶಾಕ್ ಕೊಟ್ರಾ?

ಕೆಲವರು ಹೊಸ ವರ್ಷದ ಶುಭಾಶಯ ಎಂದು ವಿಡಿಯೋ ಇತ್ಯಾದಿಗಳನ್ನು ಶೇರ್ ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸೈಬರ್ ದಾಳಿಕೋರರು ಸಂದೇಶದ ಜೊತೆಗೆ ಮಾಲ್‌ವೇರ್ ಹೊಂದಿರುವ ಫೈಲ್ ಲಗತ್ತಿಸಿ ನಿಮ್ಮನ್ನು ಯಾಮಾರಿಸಬಹುದು. ಹಾಗಾಗಿ ಎಚ್ಚರದಿಂದಿರಿ!

ಇರಲಿ ಎಚ್ಚರಿಕೆ..!

  • ಅನುಮಾನಾಸ್ಪದ ಸಂಖ್ಯೆಯಿಂದ ಬರುವ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
  • ಯಾವುದಾದರು ಉಡುಗೊರೆ, ಉಚಿತ ಸೇವೆಯ ಆಮಿಷದ ಲಿಂಕ್ ಬಂದ್ರೆ ಹುಷಾರ್
  • ಅಪರಿಚಿತರು ಕರೆ ಮಾಡಿ ಲಾಟರಿ ಅಥವಾ ಗಿಫ್ಟ್ ಗೆಲ್ಲುವಂತೆ ಪ್ರಚೋದಿಸಿದರೆ ಎಚ್ಚರದಿಂದಿರಿ
  • ಕ್ಯೂಆರ್ ಕೋಡ್ ಮೂಲಕವೂ ವಂಚನೆ ನಡೆಯುತ್ತಿದೆ ಜಾಗೃತರಾಗಿ
  • ಅಪರಿಚಿತ ವ್ಯಕ್ತಿಗಳೊಂದಿಗೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ

ಇದನ್ನೂ ಓದಿ:BBK11; ವೀಲ್​ಚೇರ್​ ಮೇಲಿದ್ದ ತಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ.. ಅಕ್ಕನನ್ನೇ ಮರೆತನಾ ಸಹೋದರ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment