/newsfirstlive-kannada/media/post_attachments/wp-content/uploads/2024/04/whatsapp-3.jpg)
ಭಾರತದಲ್ಲಿ 50 ಕೋಟಿಗೂ ಹೆಚ್ಚು ಜನರು WhatsApp ಬಳಸುತ್ತಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಸ್ಕ್ಯಾಮರ್‌ಗಳು, ಲಕ್ಷಾಂತರ ಜನರನ್ನು ಮೋಸಗೊಳಿಸ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸೈಬರ್ ಅಪರಾಧಗಳು ವೇಗವಾಗಿ ಹೆಚ್ಚುತ್ತಿವೆ.
ಇದೀಗ ಸೈಬರ್ ವಂಚಕರು ಹೊಸ ರೀತಿಯಲ್ಲಿ ವಂಚಿಸಲು ಶುರುಮಾಡಿದ್ದಾರೆ. ಹಾಗಾಗಿ ನಿಮ್ಮ ವಾಟ್ಸ್ಆ್ಯಪ್ಗೆ ನಾಲ್ಕು ರೀತಿಯಲ್ಲಿ ಸಂದೇಶ ಬಂದರೆ ಕ್ಲಿಕ್ ಮಾಡಬೇಡಿ. ಒಂದು ವೇಳೆ ನೀವು ಕ್ಲಿಕ್ ಮಾಡಿದರೆ ಭಾರೀ ತೊಂದರೆ ಎದುರಿಸುತ್ತಿರಿ.
ಈ 4 ಮೆಸೇಜ್ ಮೇಲೆ ಇರಲಿ ಎಚ್ಚರ!
ಜಾಬ್ ಆಫರ್ (Job): ಅಪರಾಧಿಗಳು ಉದ್ಯೋಗದ ಹೆಸರಿನಲ್ಲಿ ಯುವಕರನ್ನು ಬೇಟೆಯಾಡುತ್ತಿದ್ದಾರೆ. ಒಳ್ಳೆಯ ಉದ್ಯೋಗ ನೀಡುತ್ತೇವೆ ಎಂದು ಲಿಂಕ್ ಕಳುಹಿಸುತ್ತಾರೆ. ಅದರಲ್ಲಿ ವೈಯಕ್ತಿಕ ಮಾಹಿತಿಯನ್ನು ನಮೂದಿಸಲು ಸೂಚಿಸುತ್ತಾರೆ. ಒಂದು ವೇಳೆ ನೀವು ಅವರು ಹೇಳಿದ ಹಾಗೆ ಮಾಡಿದರೆ, ನಿಮ್ಮ ಜಾತಕ ಹ್ಯಾಕರ್ಗಳ ಕೈಗೆ ಸೇರಲಿದೆ. ಅವರು ಸುಲಭವಾಗಿ ನಿಮ್ಮ ಬ್ಯಾಂಕ್ ಖಾತೆ ಪ್ರವೇಶ ಮಾಡುತ್ತಾರೆ. ಅದು ಸಾಧ್ಯವಾಗದಿದ್ದರೆ ಬ್ಲ್ಯಾಕ್ ಮೇಲ್ ದಂಧೆಗೆ ಇಳಿಯುತ್ತಾರೆ.
ಬಹುಮಾನದ ಹಣ/ಲಾಟರಿ
ಲಾಟರಿ, ಬಹುಮಾನದ ಹೆಸರಿನಲ್ಲೂ ವಂಚಿಸಲಾಗುತ್ತಿದೆ. ಲಾಟರಿ ಅಥವಾ ಬಹುಮಾನ ಗೆದ್ದಿರೋದಾಗಿ ಹೇಳಿಕೊಂಡು ಜನರಿಗೆ ಸಂದೇಶ ಕಳುಹಿಸುತ್ತಾರೆ. ಬಹುಮಾನದ ಹಣ ನೀಡಲು ಬ್ಯಾಂಕ್ ಖಾತೆ ವಿವರ ಕೊಡುವಂತೆ ಕೇಳುತ್ತಾರೆ. ಹಣದ ಆಸೆಗೆ ಬಿದ್ದ ಅನೇಕರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಸೂರ್ಯಗೆ ಕಾಡ್ತಿದೆ ಒಂದೇ ಒಂದು ಚಿಂತೆ.. ಸರಿ ಹೊದ್ರೆ ಟೀಂ ಇಂಡಿಯಾ ನೆಕ್ಸ್ಟ್ ಲೇವೆಲ್..!
ಬ್ಯಾಂಕ್ ಅಲರ್ಟ್ (KYC ಅಪ್‌ಡೇಟ್)
ಬಹುತೇಕ ಬ್ಯಾಂಕ್‌ಗಳು WhatsApp ಚಾಟ್‌ಬಾಟ್ ಮೂಲಕ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುತ್ತಿವೆ. ಇದನ್ನು ಖದೀಮರು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹ್ಯಾಕರ್‌ಗಳು KYC ಮಾಹಿತಿ ನವೀಕರಿಸಲು ಬ್ಯಾಂಕ್ ಗ್ರಾಹಕರಿಗೆ ಲಿಂಕ್ ಕಳುಹಿಸುತ್ತಾರೆ. ಈ ಲಿಂಕ್‌ನಲ್ಲಿ KYC ಭರ್ತಿ ಮಾಡಿದ ತಕ್ಷಣ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಾಯವಾಗುತ್ತದೆ.
ಡೆಲಿವರಿ ಸ್ಕ್ಯಾಮ್
ಹ್ಯಾಕರ್‌ಗಳು ವಾಟ್ಸ್ಆ್ಯಪ್ ಮೂಲಕ ಡೆಲಿವರಿ ಹೆಸರು ಹೇಳಿಕೊಂಡು ವಂಚನೆ ಮಾಡುತ್ತಿದ್ದಾರೆ. ವಿವಿಧ ವೈಯಕ್ತಿಕ ಮಾಹಿತಿ ಕೇಳುವ ಮತ್ತೊಂದು ಮೋಸ ಮಾಡುತ್ತಿದ್ದಾರೆ. ಹೀಗಾಗಿ ಅಪರಿಚಿತ, ಅನುಮಾನಸ್ಪದ ಸಂದೇಶಗಳಿಂದ ದೂರ ಇರಿ. ತೀರಾ ಮೋಸ ಹೋಗುವ ಅನುಮಾನ ಬಂದರೆ ಅಧಿಕಾರಿಗಳಿಗೆ ದೂರು ನೀಡಬೇಕು.
ಇದನ್ನೂ ಓದಿ: Kumbh Mela; 2000 ಕೋಟಿ ಹಣದ ಡ್ರಗ್ಸ್ ಕೇಸ್ನಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ಈಗ ಸಾಧ್ವಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ