HSRP ನಂಬರ್​ ಪ್ಲೇಟ್​ ಅಪ್ಲೈ ಮಾಡೋ ಮುನ್ನ ಎಚ್ಚರ! ಚೂರು ಯಾಮಾರಿದ್ರೂ ಮೋಸ ಹೋಗ್ತೀರಾ!

author-image
Ganesh Nachikethu
Updated On
ಸಂಚಾರಿ ನಿಯಮ ಉಲ್ಲಂಘಿಸುವ ಸವಾರರೇ ಎಚ್ಚರ.. ರಾಜ್ಯದಾದ್ಯಂತ ಬರಲಿದೆ ಹೊಸ ಟ್ರಾಫಿಕ್ ರೂಲ್ಸ್!
Advertisment
  • ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ
  • ನೋಂದಣಿ ಮಾಡಲು ಮುಂದಾದ ವಾಹನ ಸವಾರರು
  • ನಕಲಿ ಕ್ಯೂ ಆರ್ ಕೋಡ್ ಮೂಲಕ ನಾಮ ಹಾಕಿಸಿಕೊಳ್ಳದಿರಿ

ಬೆಂಗಳೂರು: ಇತ್ತೀಚೆಗಷ್ಟೇ HSRP ನಂಬರ್​ ಪ್ಲೇಟ್ ​ಅಳವಡಿಕೆ ಗಡುವು ವಿಸ್ತರಣೆ ಮಾಡಲಾಗಿತ್ತು. ಈವರೆಗೂ ರಾಜ್ಯ ಸಾರಿಗೆ ಇಲಾಖೆ 6 ಬಾರಿ ಗಡುವು ವಿಸ್ತರಣೆ ಮಾಡಿದೆ. HSRP ನಂಬರ್​ ಪ್ಲೇಟ್​ ಅಳವಡಿಕೆಗೆ 6 ಬಾರಿ ಸಮಯ ವಿಸ್ತರಿಸಿದ್ರೂ ವಾಹನ ಮಾಲೀಕರು ಇನ್ನೂ ಮಾಡಿಸುತ್ತಲೇ ಇದ್ದಾರೆ. ಇದರ ಮಧ್ಯೆ ಸ್ಕ್ಯಾಮ್​ ಒಂದು ಹೊರಬಿದ್ದಿದೆ.

HSRP ನಂಬರ್​ ಪ್ಲೇಟ್​​ಗಾಗಿ ಆನ್​ಲೈನ್​ ಮೊರೆ​

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಕಡ್ಡಾಯ ಎಂಬ ಕಾನೂನು ಬಂದು ಹಲವು ದಿನಗಳಾಯ್ತು. ಹೀಗಾಗಿ ವಾಹನ ಸವಾರರು ಅದರ ನೋಂದಣಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ರಿಜಿಸ್ಟರ್​ಗೆ ಆನ್​ಲೈನ್ ಮೊರೆ ಹೋಗುತ್ತಿದ್ದಾರೆ. ​ಆದರೆ ಆನ್​ಲೈನ್​ನಲ್ಲಿ ಹೆಚ್ಎಸ್ಆರ್​ಪಿ ನಂಬರ್​ ಪ್ಲೇಟ್​ ವಿಚಾರವಾಗಿ ದೊಡ್ಡ ಮೋಸದ ಜಾಲವೊಂದು ಬೆಳಕಿಗೆ ಬಂದಿದೆ. ಕೊಂಚ ಯಾಮಾರಿದರೂ ಹಣ ಗುಳುಂ ಆಗುವ ಸಾಧ್ಯತೆ ಇದೆ.

ಆನ್​ಲೈನ್​ ಸ್ಕ್ಯಾಮ್​

ಬಹುತೇಕರು ಆನ್‌ಲೈನ್ ನಲ್ಲಿ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್​​ಗೆ ಅಪ್ಲೈ ಮಾಡುತ್ತಿದ್ದಾರೆ. ಆದರೆ ಆನ್‌ಲೈನ್​ನಲ್ಲಿ ನಕಲಿ ಕ್ಯೂ ಆರ್ ಕೋಡ್ ಲಿಂಕ್​ಗಳು ಹರಿದಾಡುತ್ತಿವೆ. ಅಪ್ಪಿತಪ್ಪಿ ನಕಲಿ ಕ್ಯೂ ಆರ್ ಕೋಡ್ ಕ್ಲಿಕ್ ಮಾಡಿದ್ರೆ ಹಣ ಮಂಗ ಮಾಯವಾಗುವ ಸಾಧ್ಯತೆ ಇದೆ.

publive-image

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ದೋಖಾ ಶುರುವಾಗಿದೆ. ಖದೀಮರು ನಕಲಿ ಲಿಂಕ್ ಹರಿಬಿಟ್ಟು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ನೋಂದಣಿ ಬಳಿಕ ಕ್ಯೂ ಆರ್ ಕೋಡ್ ನೀಡುತ್ತಾರೆ. ಆದರೆ ಕ್ಯೂ ಆರ್ ಕೋಡ್ ಟಚ್ ಮಾಡಿದ್ರೆ ಅಪರಿಚಿತರಿಗೆ ಲಿಂಕ್ ರವಾನೆಯಾಗುತ್ತೆ. ಸ್ವಲ್ಪ ಯಾಮಾರಿದ್ರೂ ನಿಮ್ಮ ಹಣ ಖದೀಮರ ಪಾಲಾಗುವ ಸಾಧ್ಯತೆ ಇದೆ.

ಬೆಂಗಳೂರು ಪೊಲೀಸರಿಂದ ಎಚ್ಚರಿಕೆ

ಹೀಗೆ ಹಲವರು ಮೋಸದ ಜಾಲದ ಸಿಲುಕಿದ್ದಾರೆ. ನಕಲಿ ಕ್ಯೂ ಆರ್ ಕೋಡ್ ಸ್ಕ್ಯಾಮ್​​ಗೆ ಬಲಿಯಾಗಬೇಡಿ. ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಬೆಂಗಳೂರು ಪೊಲೀಸ್ರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಆರ್​​ಸಿಬಿ ತಂಡಕ್ಕೆ ಬಿಗ್​ ಶಾಕ್​; ಐಸಿಸಿ ಮೆಗಾ ಟೂರ್ನಿಯಿಂದಲೇ ಹೊರಬಿದ್ದ ಇಬ್ಬರು ಸ್ಟಾರ್​ ಪ್ಲೇಯರ್ಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment