newsfirstkannada.com

HSRP ನಂಬರ್​​ ಪ್ಲೇಟ್ ಮಾಡಿಸೋ ಮುನ್ನ ಎಚ್ಚರ! ಚೂರ್​ ಯಾಮಾರಿದ್ರೂ ಮೋಸ ಹೋಗ್ತೀರಾ!​​

Share :

Published February 18, 2024 at 6:05am

    ಆನ್​ಲೈನ್​ನಲ್ಲಿ ನಕಲಿ ಕ್ಯೂ ಆರ್ ಕೋಡ್​ಗಳ ಹಾವಳಿ ಶುರು

    ನಕಲಿ ಕ್ಯೂ ಆರ್ ಕೋಡ್ ಅನ್ನು​ ಟಚ್ ಮಾಡಿದ್ರೆ ಹಣ ಗುಳುಂ

    ಅಪ್ಪಿ ತಪ್ಪಿ ನಕಲಿ ಕ್ಯೂ ಆರ್ ಕೋಡ್ ಕ್ಲಿಕ್ ಮಾಡಿದ್ರೆ ಮುಗೀತು

ಬೆಂಗಳೂರು: ಇಂಟರ್ನೆಟ್ ಲೋಕದಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರೋ ಸೈಬರ್ ಕ್ರೈಂ ಖದೀಮರು ಹೊಸ ವಿಚಾರ ಬಂದ್ರೆ ಸಾಕು ಲೂಟಿ ಮಾಡೋಕೆ ಕಾಯ್ತಿರ್ತಾರೆ. ಜನ ನಂಬೋ ಕಂಟೆಂಟ್‌ನೇ ನೋಡಿ ಗಾಳ ಹಾಕಿ ಬಿಡ್ತಾರೆ. ಈಗ ಆಗ್ತಿರೋದು ಕೂಡ ಅದೇ. ಈ ಬಾರಿ ಖದೀಮದ ದಾಳ HSRP ನಂಬರ್ ಪ್ಲೇಟ್.

ಇದೀಗ ಈ ಜಾಲ ಮತ್ತೆ ನಿಮ್ಮನ್ನ ಖೆಡ್ಡಾಗೆ ಕೆಡವೋಕೆ ರೆಡಿಯಾಗಿದೆ. ಈ ಬಾರಿ ಇವರ ಅಸ್ತ್ರ HSRP ನಂಬರ್‌ ಪ್ಲೇಟ್‌. ಮೇ 31ರವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಸಾರಿಗೆ ಇಲಾಖೆ ಗಡುವು ವಿಸ್ತರಿಸಿದೆ. ಈಗ ಇದನ್ನೇ ಬಂಡವಾಳ ಮಾಡಿಕೊಂಡಿರೋ ಸೈಬರ್‌ ಖದೀಮರು ಅಮಾಯಕರನ್ನ ಕೆಡವೋಕೆ ಖೆಡ್ಡಾ ರೆಡಿ ಮಾಡಿದ್ದಾರೆ. HSRP ನಂಬರ್ ಪ್ಲೇಟ್ ರಿಜಿಸ್ಟ್ರೇಶನ್‌ ಅನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ನಕಲಿ ಕ್ಯೂ ಆರ್ ಕೋಡ್ ಮೂಲಕ ಜನರಿಗೆ ಮೋಸ ಮಾಡಲು ಬಲೆ ಬೀಸಿದ್ದಾರೆ. ಆನ್ಲೈನ್ ಮೂಲಕವೇ ಹಣ ಪಾವತಿ ಮಾಡಬೇಕು ಅನ್ನೋ ಕಡ್ಡಾಯ ಸೂಚನೆ ಇದೆ.

ಹೀಗಾಗಿ ಎಲ್ಲರೂ ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್‌ಗಾಗಿ ರಿಜಿಸ್ಟರೇಷನ್ ಮಾಡಿಸ್ತಿದ್ದಾರೆ. ಇದನ್ನೇ ಎನ್‌ಕ್ಯಾಶ್ ಮಾಡ್ಕೊಂಡಿರೋ ಖದೀಮರು ನೋಂದಣಿ ಬಳಿಕ ಸಿಗುವ ಕ್ಯೂ ಆರ್ ಕೋಡ್​ಗಳನ್ನ ನಕಲಿ ಮಾಡ್ತಿದ್ದಾರೆ. ಇದ್ರಿಂದ ನೀವೇನಾದ್ರೂ ದುಡ್ಡು ಕಳಿಸಿದ್ರೆ ಅದು ಸೀದಾ ಖದೀಮರ ಖಾತೆಗೆ ಹೋಗ್ತಿದೆ. ಈ ಬಗ್ಗೆ ಓರ್ವ ವ್ಯಕ್ತಿ ಎಕ್ಸ್ ಆ್ಯಪ್ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಫೈನ್​ ಹಾಕ್ತಾರೆ ಅನ್ನೋ ಭಯದಲ್ಲಿ ಅರ್ಜೆಂಟ್​​ನಲ್ಲಿ HSRP ರಿಜಿಸ್ಟರ್ ಮಾಡೋಕೆ ಹೋಗುವ ಮುನ್ನ ಎಚ್ಚರ ವಹಿಸಿ. ಇಲ್ಲವಾದ್ರೆ ನಿಮ್ ಅಕೌಂಟ್ ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಖಾಲಿಯಾಗಿರುತ್ತೆ ಹುಷಾರ್‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HSRP ನಂಬರ್​​ ಪ್ಲೇಟ್ ಮಾಡಿಸೋ ಮುನ್ನ ಎಚ್ಚರ! ಚೂರ್​ ಯಾಮಾರಿದ್ರೂ ಮೋಸ ಹೋಗ್ತೀರಾ!​​

https://newsfirstlive.com/wp-content/uploads/2024/02/number.jpg

Load More