newsfirstkannada.com

ಸಿಕ್ಕ ಸಿಕ್ಕಲ್ಲಿ ನೆಟ್ ಬ್ಯಾಂಕಿಂಗ್ ಮಾಡೋ ಮುನ್ನ ಎಚ್ಚರ; ಸೈಬರ್​ ಖದೀಮರ ಕ್ರಿಮಿನಲ್ ಐಡಿಯಾ ಬಯಲಿಗೆ!

Share :

Published February 25, 2024 at 5:54pm

    ನಿಮ್ಮಲ್ಲಿರೋ ಅಮೌಂಟ್​ ಟ್ರಾನ್ಸಾಕ್ಷನ್ ಮಾಡುವಾಗ ಎಚ್ಚರ

    ಯಾರೋ ಹೇಳಿದರೂ ಅಂತಾ ಅಕೌಂಟ್ ಡೀಟೈಲ್ಸ್​ ಹಾಕಬೇಡಿ

    ಖದೀಮರು ನಿಮ್ಮ ಅಕೌಂಟ್​ಗೆ ಕನ್ನ ಹಾಕಬಹುದು ಹುಷಾರ್​!

ನಾವೆಲ್ಲಾ ಇರೋದು ಡಿಜಿಟಲ್ ಯುಗದಲ್ಲಿ. ಇವತ್ತು ಹೋದಲ್ಲಿ ಬಂದಲ್ಲಿ 10 ರೂಪಾಯಿ ಇರಲಿ, ಸಾವಿರಾರು ರೂಪಾಯಿ ಇರಲಿ. ಥಟ್ ಅಂತಾ ಕೈಗೆ ಮೊಬೈಲ್ ತಗೊಂಡು, ಗೂಗಲ್​ ಪೇ ನೋ ಅಥವಾ ಫೋನ್​ ಪೇ ನೋ ಓಪನ್ ಮಾಡಿ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಿ ಬಂದು ಬಿಡುತ್ತೇವೆ. ಈಗಾಗಲೇ ಹೇಳಿದ ಹಾಗೇ ಸೈಬರ್ ಹ್ಯಾಕರ್​​ಗಳು ಗಾಳಿ ಬಂದ್ ಕಡೆ ತೂರೋದಕ್ಕೆ ಶುರು ಮಾಡ್ಕೊಂಡಿದ್ದಾರೆ. ಈಗ ರಿವಾರ್ಡ್​ ಅನ್ನೋ ಹೆಸರಲ್ಲಿ ಅಕೌಂಟ್ ಖಾಲಿ ಮಾಡೋಕೆ ಶುರು ಮಾಡ್ಕೊಂಡಿದ್ದಾರೆ.

ಹೌದು, ಶಾಪಿಂಗ್​, ಅರ್ಜೆಂಟಾಗಿ ಯಾರಿಗಾದ್ರು ಹಣ ಕಳಿಸಬೇಕು, ಚಿಕ್ಕ ಪುಟ್ಟ ಚಿಲ್ಲರೇ ಕಾಸಿಗೂ ನೀವು ಇತ್ತಿಚಿನ ದಿನಗಳಲ್ಲಿ ಗೂಗಲ್​ ಪೇಗೆ ಅಡಿಕ್ಟ್​ ಆಗಿದ್ದೀರಾ ಅಲ್ವಾ. ನೀವು ಅಡಿಕ್ಟ್​ ಯಾವುದಕ್ಕೇ ಆಗಿರ್ತಿರೋ ಅದೇ ನಿಮ್ಮ ವೀಕ್​ನೆಸ್​​​. ಆ ವೀಕ್​ನೆಸ್​ ಮೇಲೆ ಸೈಬರ್ ಖದೀಮರು ಆಟ ಆಡೋದು. ಆಟ ಆಡಿಕೊಂಡೇ ಅಕೌಂಟ್ ಹ್ಯಾಕ್ ಮಾಡೋದು. ಸಾಮಾನ್ಯವಾಗಿ ನೀವು ಏನಾದ್ರು ಪರ್ಚೇಸ್ ಮಾಡುವಾಗ ಏನ್ ಮಾಡ್ತಿರಾ? ನಿಮಗೆ ಬೇಕಾದ್ದನ್ನು ಪರ್ಚೇಸ್ ಮಾಡಿ ಅದರ ಬಿಲ್ ಪಾವತಿ ಮಾಡೋಕೆ ಸ್ಕ್ಯಾನರ್ ಹುಡುಕಾಡ್ತೀರಾ. ಅಲ್ಲೇ ಇರೋದು ವೀಕ್ನೇಸ್. ಸಾವಿರ ಸಾವಿರ ಪೇ ಮಾಡುದ್ರೆ ರಿವಾರ್ಡ್ ಏನಾದ್ರು ಸಿಗಬೋದು ಅನ್ನೋದು. ಈ ರಿವಾರ್ಡ್​ ಯಾವ ರೀತಿ ಸೀಗುತ್ತೇ. ನೀವು ಬಿಲ್ ಪೇ ಮಾಡ್ತಿದ್ದ ಹಾಗೆ. ನಿಮಗೊಂದು ರಿವಾರ್ಡ್​ ಸ್ಕ್ರಾಚ್ ಕಾರ್ಡ್ ಸಿಗುತ್ತೇ. ಅದನ್ನ ಸ್ಕ್ರಾಚ್ ಮಾಡಿದ್ರೆ ಅದರಲ್ಲಿ ನಿಮಗೇನಾದ್ರು ರಿವಾರ್ಡ್​ ಬಂದಿರುತ್ತೇ. ಅದೇ ಆಸೆಯಲ್ಲಿ ನೀವು ಆನ್​ಲೈನ್​ ಪೇ ಮಾಡ್ತಿರಾ. ಹೀಗೆ ಮಾಡೋದ್ರಿಂದ ನಿಮ್ಮ ಅಕೌಂಟ್ ಖಾಲಿ ಆಗುತ್ತೇ ಹುಷಾರ್​​​.

ಇದನ್ನು ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಊರ್ವಶಿ.. ಹನಿ ಸಿಂಗ್ ಜೊತೆ ಗೋಲ್ಡ್ ಕೇಕ್ ಕಟ್ ಮಾಡಿದ ‘ಐರಾವತ’​ ಬ್ಯೂಟಿ

ನೀವೇನೋ ಖುಷಿಯಿಂದ ಹಣ ಪಡೆಯಬಹುದು ಅಂತ ಸ್ಕ್ರ್ಯಾಚ್ ಮಾಡುತ್ತೀರಾ. ಆದ್ರೆ ಅಲ್ಲೇ ಕಾದು ಕುಳಿತಿರುವ ಸೈಬರ್ ಖದೀಮರು ಸ್ಕ್ರ್ಯಾಚ್ ಮಾಡಿ ಹಣಸಿಕ್ಕದ್ದನ್ನ ಅಕೌಂಟ್​ಗೆ ಹಾಕಲು ಆಪ್ಶನ್ ಕೊಡುತ್ತಾರೆ. ಆಪ್ಶನ್ ಕೊಡ್ತಿದ್ದಂತೆ ನೀವು ಈ ಲಿಂಕ್ ಕ್ಲಿಕ್ ಮಾಡಿದ್ರೆ ಹಣ ನಿಮ್ಮ ಅಕೌಂಟ್​ಗೆ ಬರುತ್ತೆ ಅಂತ ಹೇಳ್ತಾರೆ ನೀವು ನಂಬಿ ಕ್ಲಿಕ್ ಮಾಡಿದ್ರೆ ಮುಗಿತು. ಗೋವಿಂದ ಎಲ್ಲವೂ ಗೋವಿಂದ. ಅವರು ಕಳುಹಿಸೋ ಲಿಂಕ್ ಕ್ಲಿಕ್ ಮಾಡ್ತಿದ್ದಂತೆ ಯಾವ ಅಕೌಂಟ್​ಗೆ ಹಣ ಹಾಕಬೇಕು ಎಂದು ಹೇಳುತ್ತಾರೆ. ನೀವು ಬೈ ಮಿಸ್ ಆಗಿ ನಿಮ್ಮ ಅಕೌಂಟ್ ಡೀಟೇಲ್ಸ್ ಹಾಕಿದ್ರೆ ನಿಮ್ಮ ಕಂಪ್ಲೀಟ್ ಡೀಟೇಲ್ಸ್​ನ ಅದರಲ್ಲೂ ಗೂಗಲ್ ಪೇ ಹಾಗೂ ಆ ಲಿಂಕ್ ಮೂಲಕವೇ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ಜಸ್ಟ್ ಒಂದೇ ದಿನದಲ್ಲಿ ಅಕೌಂಟ್​ನಿಂದ ಅವರಿಗೆ ಬೇಕಾದಷ್ಟು ಹಣ ಡ್ರಾ ಮಾಡಿಕೊಳ್ಳುತ್ತಾರೆ. ಇಂತಹ ವಂಚನೆಯಿಂದ ಸಾಕಷ್ಟು ಮಂದಿ ಮೋಸ ಹೋಗಿದ್ದಾರೆ.

ಗೂಗಲ್ ಪೇನಲ್ಲಿ ರಿವಾರ್ಡ್ ಸಿಗುತ್ತೆ ಅಂತಾ ಯಾವುದೇ ಲಿಂಕ್ ಅನ್ನ ಕ್ಲಿಕ್ ಮಾಡಿ ಎಂದು ಹೇಳಿದ್ರೆ ಅಪ್ಪಿ ತಪ್ಪಿಯೂ ಮಾಡೋಕೆ ಹೋಗಬೇಡಿ. ಯಾವಾಗಲೂ ಗೂಗಲ್ ಪೇನಲ್ಲಿ ಪೇಮೆಂಟ್ ಮಾಡುವಾಗ ಅಥವಾ ಟ್ರಾನ್ಸಕ್ಷನ್ ಮಾಡುವಾಗ ಎಚ್ಚರವಾಗಿರಿ. ಯಾವುದಾದ್ರು ಲಿಂಕ್ ಮೇಲೆ ಕ್ಲಿಕ್ ಮಾಡಿ ಅನ್ನೋ ಮೆಸೇಜ್​ ಇದ್ರೆ ಜಸ್ಟ್ ನೆಗ್ಲೆಕ್ಟ್ ಮಾಡಿ, ಕ್ಲಿಕ್ ಮಾಡೋ ಮನಸ್ಸು ಮಾಡಲೇಬೇಡಿ. ನಿಮಗೆ ಗೊತ್ತಿರಲಿ ನೀವು ಗೂಗಲ್ ಪೇ ಡೌನ್​ಲೋಡ್ ಮಾಡುತ್ತಿದ್ದ ಹಾಗೇ ವೆರಿಫಿಕೇಷನ್ ಮೂಲಕ ನಿಮ್ಮ ಬ್ಯಾಂಕ್ ಅಕೌಂಟ್ ರಿಜಿಸ್ಟ್ರೇಷನ್ ಆಗಿರುತ್ತೇ. ಹಾಗಾಗಿ ರಿಜಿಸ್ಟ್ರೇಷನ್ ಎಂದು ಕ್ಲಿಕ್ ಮಾಡಿ ಅಂದ್ರೆ ಕೂಡಲೇ ಅಲರ್ಟ್​ ಆಗಿ. ಒಂದು ವೇಳೇ ನೀವೇನಾದ್ರೂ ಅಪ್ಪಿ ತಪ್ಪಿ ಕ್ಲಿಕ್ ಮಾಡಿ ಹಣ ಕಳೆದು ಕೊಂಡರೇ ತಕ್ಷಣ ಹಿಂದೆ ಮುಂದೆ ಆಲೋಚನೆ ಮಾಡದೇ ಸೈಬರ್ ಠಾಣೆಗ ತೆರಳಿ ದೂರನ್ನ ದಾಖಲಿಸಿ. ರಿವಾರ್ಡ್​ ಆಸೆಗೆ ಬಿದ್ದರೆ ಅಕೌಂಟ್​ ಅನ್ನ ಹೇಗೆ ಖಾಲಿ ಮಾಡಿಬಿಡ್ತಾರೆ. ಅದೇ ಗ್ಯಾಪ್​ನಲ್ಲಿ ಖದೀಮರು ನಿಮ್ಮ ಅಕೌಂಟ್​ಗೆ ಕನ್ನ ಹಾಕಿ ಬಿಡ್ತಾರೆ ಹುಷಾರು.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಕ್ಕ ಸಿಕ್ಕಲ್ಲಿ ನೆಟ್ ಬ್ಯಾಂಕಿಂಗ್ ಮಾಡೋ ಮುನ್ನ ಎಚ್ಚರ; ಸೈಬರ್​ ಖದೀಮರ ಕ್ರಿಮಿನಲ್ ಐಡಿಯಾ ಬಯಲಿಗೆ!

https://newsfirstlive.com/wp-content/uploads/2024/02/phone-pay.jpg

Load More