ಬೈಕ್​ ಸಿಕ್ತು ಅಂತ ಸ್ಟಂಟ್​ ಮಾಡಿದ್ರೆ ಜೈಲೂಟ ಫಿಕ್ಸ್​; ಇನ್ಮುಂದೆ ಪೊಲೀಸರಿಂದ ಹೊಸ ಅಸ್ತ್ರ ಜಾರಿ.. ಏನದು?

author-image
Veena Gangani
Updated On
ಬೈಕ್​ ಸಿಕ್ತು ಅಂತ ಸ್ಟಂಟ್​ ಮಾಡಿದ್ರೆ ಜೈಲೂಟ ಫಿಕ್ಸ್​; ಇನ್ಮುಂದೆ ಪೊಲೀಸರಿಂದ ಹೊಸ ಅಸ್ತ್ರ ಜಾರಿ.. ಏನದು?
Advertisment
  • ರಸ್ತೆಯಲ್ಲಿ ದವಲತ್ತು, ಧಿಮಾಕು ತೋರಿಸ್ತೀರಾ ಹಾಗಾದ್ರೆ ಎಚ್ಚರ!
  • ಇನ್ಮುಂದೆ ವೀಲ್ಹಂಗ್​ ಮಾಡಿ ಸಿಕ್ಕಿಬಿದ್ರೆ ಬೇಲ್​ ಸಿಗೋದಿಲ್ಲ!
  • ರೌಡಿಶೀಟ್​​ ಓಪನ್​ ಆದ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಹುಷಾರ್

ಬೆಂಗಳೂರು: ಸಿಲಿಕಾನ್​ ಸಿಟಿಗೆ ಕತ್ತಲು ಆವರಿಸ್ತಿದ್ದಂತೆ ವ್ಹೀಲಿಂಗ್​ ಸೌಂಡ್​​ ಜೋರಾಗ್ತಿವೆ. ಆ ಗ್ಯಾಂಗ್​​ ಪ್ರಮುಖ ರಸ್ತೆಗಳಲ್ಲಿ ಸೌಂಡ್​ ಮಾಡೋದಕ್ಕೆ ಶುರು ಮಾಡುತ್ತಿವೆ. ವ್ಹೀಲಿಂಗ್​ ಮಾಡ್ತಾ ಸವಾರರ ಎದೆ ಬಡಿತ ಹೆಚ್ಚು ಮಾಡ್ತಾ ಜೀವದ ಜೊತೆ ಚೆಲ್ಲಾಟ ಆಡೋದು ಕಾಮನ್​ ಆಗ್ಬಿಟ್ಟಿದೆ. ಪೊಲೀಸರಿಗೂ ದಿನೇ ದಿನೇ ವೈರಲ್​ ಆಗ್ತಿರೋ ವ್ಹೀಲಿಂಗ್​ ನೋಡಿ ತಲೆಬಿಸಿ ಹೆಚ್ಚಾಗಿತ್ತು. ಇಷ್ಟು ದಿನ ಪುಂಡರ ಸ್ಪೀಡ್​​ಗೆ ಬ್ರೇಕ್​ ಹಾಕಲು ನಗರ ಪೊಲೀಸರು ಆರ್ಮ್ಸ್​ ಆಕ್ಟ್ ಅಡಿ ಕೇಸ್​ ದಾಖಲಿಸಿ ಜೈಲಿಗೆ ಕಳುಹಿಸ್ತಿದ್ರು. ಆದ್ರೆ ಇನ್ಮುಂದೆ ಹಾಗಿರಲ್ಲ ಅದಕ್ಕೂ ಮೇಲೆ.

ಇದನ್ನೂ ಓದಿ:ಉಕ್ಕಿನ ಕಾರ್ಖಾನೆಯ ಹೊಗೆಗೆ ತತ್ತರಿಸಿದ ಕೊಪ್ಪಳ; ಜನರ ದುರ್ಗತಿ ಕಂಡು ಗವಿಮಠದ ಶ್ರೀ ಕಣ್ಣೀರು

publive-image

ಕೈಯಲ್ಲಿ ಲಾಂಗ್​ ಹಿಡಿದು ವ್ಹೀಲಿಂಗ್​ ಮಾಡ್ತಾ ಪುಂಡಾಟ ಮರೆಯುತ್ತಿದ್ದವರನ್ನ 11 ಜನರನ್ನ ಕಳೆದ ಎರಡು ದಿನಗಳ ಹಿಂದೆಯಷ್ಟೇ ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ರು. ಹೀಗಾದ್ರೂ ವೈರಲ್​ ಆಗ್ತಿರೋ ವ್ಹೀಲಿಂಗ್​ ವಿಡಿಯೋಗಳ ಸಂಖ್ಯೆ ಮಾತ್ರ ಕಡಿಮೆ ಆಗ್ತಿರ್ಲಿಲ್ಲ. ಇದರಿಂದ ಪೊಲೀಸರು ರೋಸಿ ಹೋಗಿದ್ರು. ಆದ್ರೀಗ ಹೆಚ್ಚು ತಲೆಕೆಡಿಸಿಕೊಳ್ಳದೇ ನಗರ ಪೊಲೀಸರು ವ್ಹೀಲಿಂಗ್​ ಬ್ರೇಕ್​ಗೆ ರೌಡಿ ಶೀಟ್ ಓಪನ್ ಮಾಡೋಕೆ ನಿರ್ಧರಿಸಿದ್ದಾರೆ. ಶಸ್ತ್ರಾಸ್ತ್ರ ಹಿಡಿದು ವ್ಹೀಲಿಂಗ್ ಮಾಡಿದ್ರೆ ಮೊದಲ ಕೇಸ್‌ನಲ್ಲೇ ರೌಡಿ ಶೀಟ್ ಓಪನ್ ಆಗುತ್ತೆ. ಒಮ್ಮೆ ರೌಡಿ ಶೀಟ್ ಓಪನ್ ಆಯ್ತು ಅಂತಂದ್ರೆ ಆಮೇಲೆ ಎಂಥಾ ಕಷ್ಟ ಅನುಭವಿಸ್ಬೇಕಾಗುತ್ತೆ ಅನ್ನೋದನ್ನ ನೀವು ತಿಳ್ಕೋಬೇಕು.

ರೌಡಿಶೀಟ್​ ಓಪನ್​ ಆದ್ರೆ ಅಷ್ಟೇ!

ಈ ರೌಡಿ ಶೀಟ್ ಒಮ್ಮೆ ಓಪನ್ ಆಯ್ತು ಅಂದ್ರೆ ಅಷ್ಟೇ. ಪೊಲೀಸರು ಠಾಣೆಗೆ ಕರೆದಾಗೆಲ್ಲಾ ಹಾಜರಾಗಬೇಕು. ಪ್ರತಿ ಸಲವೂ ನಡೆಯೋ ರೌಡಿ ಪರೇಡ್​ನಲ್ಲಿ​ ಭಾಗಿಯಾಗಬೇಕು, ಒಮ್ಮೆ ಓಪನ್ ಆದ ರೌಡಿಶೀಟ್ ಕನಿಷ್ಠ 10 ವರ್ಷಗಳ ಕಾಲ ಇರುತ್ತೆ. ಚುನಾವಣೆ, ಹಬ್ಬ ಹರಿದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ, ಯಾವುದೇ ಅಪರಾಧಗಳಲ್ಲಿ ಭಾಗಿಯಾಗಲ್ಲ ಅಂತ ಬಾಂಡ್ ಬರೆದು ಕೊಡಬೇಕು. ಒಮ್ಮೆ ಬರೆದು ಕೊಟ್ಟ ಬಾಂಡ್ ಆರು ತಿಂಗಳ ಕಾಲ ಚಾಲ್ತಿಯಲ್ಲಿರುತ್ತೆ.

publive-image

ಈ ಅವಧಿಯಲ್ಲಿ ಮತ್ತೆ ಕೇಸ್ ಮಾಡಿದ್ರೆ ಬಾಂಡ್ ವಯಲೇಷನ್ ಅಡಿ ಕೇಸ್ ಹಾಕಲಾಗುತ್ತೆ. ಕನಿಷ್ಠ ಒಂದು ಲಕ್ಷದ ಬಾಂಡ್​ಗೆ ಇಬ್ಬರು ಸಾಕ್ಷಿಗಳ ಸಹಿ ಪಡೆಯಲಾಗುತ್ತೆ. ನಾನ್ ಬೇಲಬಲ್ ವಾರೆಂಟ್ ಇಶ್ಯೂ ಆಗುತ್ತೆ. ನಂತರ ಬಂಧಿಸಿ ಜೈಲಿಗೆ ಕಳುಹಿಸ್ತಾರೆ ಪೊಲೀಸರು. ಜೈಲಿಗೆ ಹೋದ ಮೇಲೆ ಒಂದು ವರ್ಷ ರೌಡಿಶೀಟರ್​​ಗೆ ಕಂಡಿತಾ ಬೇಲ್ ಸಿಗಲ್ಲ. ಶಸ್ತ್ರಾಸ್ತ್ರ ಹಿಡ್ಕೊಂಡು ವ್ಹೀಲಿಂಗ್ ಮಾಡಿದ್ರೆ ಫಸ್ಟ್ ಕೇಸ್‌ನಲ್ಲೇ ರೌಡಿ ಶೀಟ್‌, ಹಾಗೇ ವ್ಹೀಲಿಂಗ್ ಮಾಡಿದ್ರೆ ಮೊದಲ ಕೇಸ್‌ನಲ್ಲೂ ತೆರೆಯಬಹುದು, ಮೂರನೇ ಕೇಸ್‌ನಲ್ಲೂ ತರೆಯಬಹುದು. ಅದು ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದು. ಆದ್ರೆ, ಒಮ್ಮೆ ರೌಡಿ ಶೀಟ್ ಓಪನ್ ಆಯ್ತು ಅಂದ್ರೆ ಜೀವನ ನರಕ ನರಕ ಆಗ್ಬಿಡುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment