newsfirstkannada.com

ಎಚ್ಚರ! ಏಪ್ರಿಲ್‌ ತಿಂಗಳು ಪೂರ್ತಿ ಹುಷಾರಾಗಿರಿ.. ಹವಾಮಾನ ಇಲಾಖೆಯಿಂದ ಜನರಿಗೆ ಎಚ್ಚರಿಕೆ; ಏನದು?

Share :

Published April 1, 2024 at 8:19pm

Update April 1, 2024 at 8:23pm

  ಇಡೀ ತಿಂಗಳಿಗೆ ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಿಗೆ ಅಲರ್ಟ್‌!

  ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ, ಕನಿಷ್ಠ ಉಷ್ಣಾಂಶ 22 ಡಿಗ್ರಿ

  ಹೆಚ್ಚು ಕೂಲ್ ಡ್ರಿಂಕ್ಸ್‌, ಐಸ್ ಕ್ರೀಮ್ ಸೇವನೆಯಿಂದ ವೈರಲ್ ಫೀವರ್!

ನವದೆಹಲಿ: ಏಪ್ರಿಲ್ ತಿಂಗಳ ಮೊದಲ ದಿನವೇ ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ನೀಡಿದೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಬಿಸಿಲಿನ ವಾತಾವರಣ ಮತ್ತು ಅತ್ಯಧಿಕ ಉಷ್ಣಾಂಶ ದಾಖಲಾಗಲಿದೆ. ಜೂನ್ 1ರ ಒಳಗಾಗಿ ಗರಿಷ್ಠ ತಾಪಮಾನವನ್ನು ಜನರು ಎದುರಿಸಬೇಕಾಗುತ್ತದೆ ಎನ್ನಲಾಗಿದೆ.

ಭಾರತೀಯ ಹವಮಾನ ಇಲಾಖೆಯ ಮಾಹಿತಿಯ ಪ್ರಕಾರ ಈ ವರ್ಷದ ಏಪ್ರಿಲ್ ತಿಂಗಳು ಅತ್ಯಂತ ಸುಡೋ ಬಿಸಿಲಿನ ವಾತಾವರಣಕ್ಕೆ ಸಾಕ್ಷಿಯಾಗಲಿದೆ. ಪ್ರಮುಖವಾಗಿ ಗುಜರಾತ್, ಮಹಾರಾಷ್ಟ್ರ, ಉತ್ತರ ಕರ್ನಾಟಕ, ಒಡಿಶಾ, ಆಂಧ್ರ ಪ್ರದೇಶ, ಪೂರ್ವ ಮಧ್ಯ ಪ್ರದೇಶದಲ್ಲಿ ರಣ ಬಿಸಿಲಿನ ವಾತಾವರಣ ಎದುರಾಗಲಿದೆ ಎನ್ನುವ ಮಾಹಿತಿ ನೀಡಿದೆ.

ಜೂನ್‌ ತಿಂಗಳವರೆಗೂ ದೇಶಾದ್ಯಂತ ಸೂರ್ಯನ ಶಾಖ ಹೆಚ್ಚಾಗಿರಲಿದೆ. ಭಾರತದ ಮಧ್ಯ, ಉತ್ತರ, ದಕ್ಷಿಣದ 6 ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಲಿನ ವಾತಾವರಣ ಕಾಡಲಿದೆ ಎಂದು ಹೇಳಲಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆತ್ತಿ ಸುಡುವ ವಾತಾವರಣ ಕಂಡು ಬರುತ್ತಾ ಇದೆ. ಇದು ಏಪ್ರಿಲ್ ತಿಂಗಳ ಪೂರ್ತಿ ಮುಂದುವರಿಯುವ ಸಾಧ್ಯತೆ ಇದೆ.

ಸಿಲಿಕಾನ್ ಸಿಟಿಯಲ್ಲಿ ವೈರಲ್ ಫೀವರ್‌!
ಬೆಂಗಳೂರಲ್ಲಿ ಇಂದು ಗರಿಷ್ಠ ಉಷ್ಣಾಂಶ 35 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಇತ್ತು. ಮುಂದಿನ ಒಂದು ವಾರ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಇಷ್ಟೇ ಪ್ರಮಾಣದಲ್ಲಿ ಇರುವ ಸಾಧ್ಯತೆ ಇದೆ. ಇದೇ ರೀತಿಯ ವಾತಾವರಣ ಮುಂದುವರಿದಿದ್ದು, ಬೆಂಗಳೂರಿನ ಮಂದಿಗೆ ಬೇಸಿಗೆಯಲ್ಲೂ ವೈರಲ್ ಫೀವರ್ ಬಾಧಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಎಚ್ಚರ.. ಪ್ರತಿದಿನ ಸ್ನಾನ ಮಾಡದೇ ನಿರ್ಲಕ್ಷ್ಯ ತೋರಿದ್ರೆ ಕಾಡುತ್ತೆ ಈ ಭಯಾನಕ ಕಾಯಿಲೆ; ಏನದು? 

ಬಿಸಿಲಿನ ಬೇಗೆ ತಾಳಲಾರದೇ ಕೃತಕ ತಂಪು ಪಾನಿಗಳು ಮತ್ತು ಐಸ್ ಕ್ರೀಮ್ ಹೆಚ್ಚಾಗಿ ಸೇವಿಸುತ್ತಿರುವುದರಿಂದ ವೈರಲ್ ಫೀವರ್ ಹೆಚ್ಚಾಗುತ್ತಿದೆ. ರಣ ಬಿಸಿಲಿನ ಸಮಯದಲ್ಲಿ ಫ್ರಿಡ್ಜ್‌ನಲ್ಲಿಟ್ಟ ನೀರು ಮತ್ತು ಹೆಚ್ಚು, ಹೆಚ್ಚು ಐಸ್‌ಕ್ರೀಮ್‌ ತಿನ್ನುವುದರಿಂದ ದೂರ ಉಳಿಯೋದು ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ! ಏಪ್ರಿಲ್‌ ತಿಂಗಳು ಪೂರ್ತಿ ಹುಷಾರಾಗಿರಿ.. ಹವಾಮಾನ ಇಲಾಖೆಯಿಂದ ಜನರಿಗೆ ಎಚ್ಚರಿಕೆ; ಏನದು?

https://newsfirstlive.com/wp-content/uploads/2024/03/heat-wave-3.jpg

Load More