/newsfirstlive-kannada/media/post_attachments/wp-content/uploads/2024/10/DIPAVALI.jpg)
ದೀಪಾವಳಿ ಎಂದರೆ ಇಡೀ ಭಾರತೀಯರೇ ಸಂಭ್ರಮದಿಂದ ಆಚರಣೆ ಮಾಡುವಂತ ದೊಡ್ಡ ಹಬ್ಬ. ಮನೆಯಲ್ಲಿ ಎಲ್ಲರೂ ಹೊಸ ಹೊಸ ಬಟ್ಟೆ ಧರಿಸಿ ಸಿಹಿ ತಿನಿಸುಗಳನ್ನು ಮಾಡಿ ಕುಟುಂಬ ಸಮೇತ ಒಟ್ಟಿಗೆ ಕುಳಿತು ಹಬ್ಬದೂಟವನ್ನ ಸವಿಯುವ ಆ ಕ್ಷಣ ಅದ್ಭುತವಾಗಿರುತ್ತದೆ. ಇದರ ಜೊತೆಗೆ ಮಕ್ಕಳು, ಯುವಕರು, ಕೆಲ ಯುವತಿಯರು ಮನೆ ಮುಂದೆ ಪಟಾಕಿಗಳನ್ನು ಸಿಡಿಸಿ ಖುಷಿ ಪಡುತ್ತಾರೆ. ಆದರೆ ಈ ರೀತಿ ಪಟಾಕಿ ಸಿಡಿಸುವಾಗ ಕುಟುಂಬಸ್ಥರು ಎಚ್ಚರಿಕೆ ವಹಿಸಬೇಕು. ಏಕೆಂದರೆ..?
ಪಟಾಕಿಗಳನ್ನ ತಯಾರಿಸುವಾಗ ಅವುಗಳಲ್ಲಿ ಹಲವಾರು ವಿವಿಧ ರಾಸಾಯನಿಕಗಳನ್ನು ಹಾಕಿರುತ್ತಾರೆ. ರಾಸಾಯನಿಕ ಬಳಸುವಾಗ ಒಂದು ಪಟಾಕಿಗೆ ಇಷ್ಟೇ ನಿರ್ಧಿಷ್ಟವಾಗಿ ಎಂದು ಅಂದಾಜು ಮಾಡಿ ಹಾಕಿರುತ್ತಾರೆ. ಹೀಗಾಗಿ ಕೆಲವೊಂದು ಪಟಾಕಿಗಳಲ್ಲಿ ಹೆಚ್ಚು, ಕಡಿಮೆ ರಾಸಾಯನಿಕ ಇರುತ್ತದೆ. ಇವುಗಳನ್ನ ಕೈಯಲ್ಲಿ ಹಿಡಿದು ಬೆಂಕಿ ಹಚ್ಚುವಾಗ ಭಾರೀ ಪ್ರಮಾಣದಲ್ಲಿ ಸ್ಫೋಟ ಆಗಬಹುದು. ಇಲ್ಲದಿದ್ದರೇ ನಿಮ್ಮ ದೇಹದ ಮೇಲೆ ಬೀಳಬಹುದು. ಪಟಾಕಿಗಳಿಂದ ಕೆಲವೊಮ್ಮೆ ಕಣ್ಣುಗಳಿಗೂ ಹಾನಿಯಾಗಬಹುದು. ದೇಹಕ್ಕೂ ಹಾನಿಯಾಗುವ ಸಂಭವವಿರುತ್ತದೆ. ಎಚ್ಚರ ತಪ್ಪಿದರೆ ನಿಮ್ಮ ಬದುಕಿನ ಪೂರ್ತಿ ಸಮಸ್ಯೆ ಅನುಭವ ಸಾಧ್ಯತೆ ಇರುತ್ತದೆ. ಯುವಕರು, ಮಕ್ಕಳು ಆದಷ್ಟು ಜಾಗ್ರತರಾಗಿ ಪಟಾಕಿ ಹೊಡೆಯಿರಿ.
ಇದನ್ನೂ ಓದಿ: ಅಂಬಾನಿಯಿಂದ ದೀಪಾವಳಿ ಆಫರ್; ಈಗ 4G ಫೋನ್ 700 ರೂಪಾಯಿಗಿಂತ ಕಮ್ಮಿ ಬೆಲೆಗೆ ಲಭ್ಯ..!
ಕಣ್ಣು, ಕಿವಿಗಳ ಬಗ್ಗೆ ಜಾಗ್ರತೆ ಇರಲಿ!
ಪಟಾಕಿಗಳಲ್ಲಿ ಬಳಸುವ ಮದ್ದು ಕಣ್ಣುಗಳಿಗೆ ಹಾನಿ ಮಾಡುವ ಸಂಭವ ಹೆಚ್ಚು ಇರುತ್ತದೆ. ಇದರ ಶಬ್ಧದಿಂದ ಕಿವಿಗಳು ಹಾನಿಯಾಗಬಹುದು. ಸ್ಫೋಟ ಶಬ್ಧದಿಂದ ಕಿವಿಯ ತಮಟೆ ಶಕ್ತಿ ಕುಂದಬಹುದು. ಹೀಗಾಗಿ ಕಿವಿ ಸಮಸ್ಯೆ ಇರುವವರು ದೊಡ್ಡ ಶಬ್ಧದಿಂದ ದೂರವಿರಿ.
ಅಸ್ತಮಾ ಇರುವವರು ಪಟಾಕಿಗಳನ್ನ ಹೊಡೆಯುವ ಸ್ಥಳದಿಂದ ದೂರವಿರಿ. ಪಟಾಕಿಗಳನ್ನ ಸಿಡಿಸಿದ ಮೇಲೆ ಬರುವ ಹೊಗೆಯು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹೊಗೆಯಿಂದ ಶ್ವಾಸಕೋಶದ ಸಮಸ್ಯೆ ಎದುರಾಗಬಹುದು. ಸೀನು, ಕೆಮ್ಮು ಹೆಚ್ಚಾಗುತ್ತದೆ. ಗರ್ಭಿಣಿಯರಿಗೂ ಪಟಾಕಿ ಹೊಡೆಯಲು ಹೋಗದಿದ್ದರೂ ಅದರ ಹೊಗೆ ನಿಮಗೆ ಹಾಗೂ ಮಗುವಿಗೆ ಹಾನಿ ಮಾಡುತ್ತದೆ.
ಹೃದಯ ತೊಂದರೆ ಇರುವವರು, ಉಸಿರಾಟ, ಆರೋಗ್ಯ ಸಮಸ್ಯೆ ಇರುವವರು ಭಾರೀ ಪ್ರಮಾಣದಲ್ಲಿ ಸ್ಫೋಟವಾಗುವ ಪಟಾಕಿಗಳಿಂದ ಅಂತರ ಕಾಯ್ದುಕೊಳ್ಳಿ. ಹಬ್ಬದ ಸಡಗರದಲ್ಲಿ ಜೀವನ ಹಾಳು ಮಾಡಿಕೊಳ್ಳಬಾರದು.
ಮನೆಯಲ್ಲಿ ಹಿರಿಯರು ಸ್ವಲ್ಪ ಎಚ್ಚರಿಕೆ ತೆಗೆದುಕೊಳ್ಳಬೇಕು
ಪಟಾಕಿ ಹೊಡೆಯುವಾಗ ಜಾಗ್ರತೆ ವಹಿಸಬೇಕು ಎಂದು ಸರ್ಕಾರ ಎಷ್ಟೇ ಮುಂಜಾಗ್ರತೆ ಕ್ರಮ ತೆಗೆದುಕೊಂಡರು ಸಾಕಷ್ಟು ಮಕ್ಕಳ ಕಣ್ಣು, ಕೈ, ಕಾಲು, ಕಿವಿ ಸೇರಿದಂತೆ ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ದೀಪಾವಳಿ ವೇಳೆ ಈ ರೀತಿ ಅನಾಹುತ ಸಾಮಾನ್ಯವಾಗಿವೆ. ಆದರೆ ಮನೆಯಲ್ಲಿ ಹಿರಿಯರು ಸ್ವಲ್ಪ ಎಚ್ಚರಿಕೆ ತೆಗೆದುಕೊಂಡರೇ ಆಗುವ ಹಾನಿಯನ್ನ ಮೊದಲೇ ತಡೆಯಬಹುದು.
ಪಟಾಕಿ ಹೊಡೆಯುವಾಗ ನಿಮ್ಮ ಹೊಸ ಬಟ್ಟೆ ಮೇಲೆ ಗಮನವಹಿಸಿ. ಏಕೆಂದರೆ ದೊಡ್ಡ ಬೆಲೆ ಕೊಟ್ಟು ಖರೀದಿಸಿದ ಬಟ್ಟೆ ಬೆಂಕಿ ಕಿಡಿ ಬಿದ್ದು ಹಾಳಾಗುತ್ತದೆ. ಒಂದು ಕಿಡಿ ನಿಮ್ಮ ಬೆಲೆಬಾಳುವ ಸೀರೆ ಅಥವಾ ಹೊಸ ಉಡುಗೆಯನ್ನು ನಾಶಮಾಡಬಹುದು. ಜೊತೆಗೆ ನಿಮಗೂ ಅಪಾಯವಾಗಬಹುದು.
ಇದನ್ನೂ ಓದಿ:ನಾಗರಿಕ ವಿಮಾನಯಾನದಲ್ಲಿ ಲಕ್ಷ ಲಕ್ಷ ಸಂಬಳ.. ಈ ಖಾಲಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಇನ್ನೂ ದೀಪಾವಳಿಗೆ ಪಟಾಕಿ ಸಿಡಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಸಿಇಒಗಳ ಜೊತೆ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಮಾತನಾಡಿದ್ದಾರೆ. ಅವಘಡ ಸಂಭವಿಸದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೇ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶವಿದೆ. ಅದು ರಾತ್ರಿ 8 ಗಂಟೆಯಿಂದ 10 ಗಂಟೆ ಒಳಗೆ ಮಾತ್ರ ಪಟಾಕಿ ಹೊಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ