/newsfirstlive-kannada/media/post_attachments/wp-content/uploads/2024/02/dashan.jpg)
ಬೆಂಗಳೂರು: ಕಳೆದ 4 ದಿನಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ನಟ ದರ್ಶನ್​ ಅವರ 25 ವರ್ಷದ ಬೆಳ್ಳಿ ಪರ್ವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ ದರ್ಶನ್ ಅವರು ವೇದಿಕೆಯ ಮೇಲೆ ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಇವರಜ್ಜೀನೆ ಬಡಿಯಾ’ ಎಂದು ನಾಲಿಗೆ ಹರಿಬಿಟ್ಟಿದ್ದರು.
ಇದನ್ನು ಓದಿ: ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ’.. ದರ್ಶನ್​ ವಿರುದ್ಧ ಕೆಂಡಾಮಂಡಲ; ದಾಖಲಾಯ್ತು ದೂರು
/newsfirstlive-kannada/media/post_attachments/wp-content/uploads/2024/02/Darshan_Star.jpg)
ಈ ವಿಚಾರ ಮಹಿಳೆಯರ ಕೋಪಕ್ಕೆ ಕಾರಣವಾಗಿದೆ. ಗೌಡತಿಯರ ಸೇನೆಗೆ ಸೇರಿದ ಮಹಿಳಾ ಸದಸ್ಯರು ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಬಳಿಕ ನಟ ದರ್ಶನ್​​ ವಿರುದ್ಧ ಕೆಂಡಕಾರಿದ್ದಾರೆ. ಇನ್ನೊಮ್ಮೆ ಹೀಗೆ ಮಾತಾಡಿದ್ರೆ ಕಥೆನೇ ಬೇರೆ ಅಂತಾ ವಾರ್ನಿಂಗ್​ ಸಹ ಕೊಟ್ಟಿದ್ದಾರೆ.
ಇನ್ನು, ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಗೌಡತಿಯರ ಸೇನೆ ಮಹಿಳೆ ಕಾರ್ಯಕರ್ತೆ ಒಬ್ಬರು, ದರ್ಶನ್​ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತಾಡಬೇಕಾದರೇ ಸ್ವಲ್ಪ ಎಚ್ಚರದಿಂದ ಇರಬೇಕು. ಯಾರ ಬಗ್ಗೆ ಮಾತಾಡುತ್ತಿದ್ದೀವಿ ಎಂದು ಹಿಡಿತ ಇಟ್ಟುಕೊಂಡು ಮಾತಾಡಲಿ. ಸಿನಿಮಾಗಳಲ್ಲಿ ಒಳ್ಳೊಳ್ಳೆ ಡೈಲಾಗ್ ಹೊಡೆದು ಹೀರೋ ಆಗಿದ್ದೀರಿ. ವೇದಿಕೆ ಮೇಲೆ ಬಂದು ಬೇಕಾಬಿಟ್ಟಿಯಾಗಿ ಮಾತಾಡಿದರೆ ನಿಮ್ಮ ಫಾಲೋವರ್ಸ್​ ಕೂಡ ಹಾಗೇ ಮಾತಾಡುತ್ತಾರೆ. ಇಲ್ಲಿ ಯಾರು ಬೀದಿಗೆ ಬಿದ್ದಿಲ್ಲ. ಹೆಣ್ಣು ಮಕ್ಕಳ ಕಷ್ಟ ಹೆಣ್ಣು ಮಕ್ಕಳಿಗೆ ಗೊತ್ತು. ಹೀಗೆ ಮಾತಾಡಿದರೇ ಹೇಗೆ ಹೆಣ್ಣು ಮಕ್ಕಳು ಕೂಡ ಫ್ಯಾನ್ಸ್ ಇರ್ತಾರೆ. ನಾವು ಬಂದು ಸಿನಿಮಾ ನೋಡಿಲ್ಲ ಅಂದ್ರೆ ನೀವುಗಳು ಏನೂ ಮಾಡೋಕು ಆಗಲ್ಲ. ಇನ್ನೊಂದು ಸಾರಿ ಬಾಯಿಗೆ ಬಂದ ಹಾಗೇ ಮಾತಾಡಿದರೇ ಕಥೆ ಬೇರೇನೆ ಆಗುತ್ತೆ ಅಂತಾ ಸಿಟ್ಟಿನಲ್ಲಿ ಮಾತಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us