Advertisment

ದರ್ಶನ್ ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡ ಹಿರಿಯ ಸಾಹಿತಿ! ಆಗಿದ್ದೇನು?

author-image
Gopal Kulkarni
Updated On
ದರ್ಶನ್ ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡ ಹಿರಿಯ ಸಾಹಿತಿ! ಆಗಿದ್ದೇನು?
Advertisment
  • ದರ್ಶನ್ ಅಭಿಮಾನಿಗಳಿಂದ ಶ್ರವಣ ಶಕ್ತಿ ಕಳೆದುಕೊಂಡ ಹಿರಿಯ ಸಾಹಿತಿ
  • ಗದಗದಲ್ಲಿ ದರ್ಶನ್​ ಅಭಿಮಾನಿಗಳ ಯಡವಟ್ಟು ತೆರೆದಿಟ್ಟ ಚೆನ್ನಬಸಪ್ಪನವರು
  • ದರ್ಶನ್ ಹುಟ್ಟುಹಬ್ಬದ ವೇಳೆ ನಡೆದ ಘಟನೆ ಬಗ್ಗೆ ಹೇಳಿದ ಹಿರಿಯ ಸಾಹಿತಿ

ಹಿರಿಯ ಸಾಹಿತಿ ನಾಡೋಜ ಡಾ. ಗೊರೂರು ಚೆನ್ನಬಸಪ್ಪ ಅವರ ದರ್ಶನ್ ಅಭಿಮಾನಿಗಳ ಹುಚ್ಚಾಟದಿಂದ ತಾವು ಅನುಭವಿಸಿದ ಹಾಗೂ ಎಂದೂ ಸರಿಯಾಗಲಾರದ ಘಾಸಿಯ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅಭಿಮಾನಿಗಳ ಹುಚ್ಚಾಟದಿಂದಾಗಿ ನಾನು ನನ್ನ ಶ್ರವಣ ಶಕ್ತಿಯನ್ನೇ ಕಳೆದುಕೊಂಡೆ ಎಂದು ಗದಗನಲ್ಲಿ ನಾಡೋಜ ಡಾ. ಗೊರರೂರು ಚೆನ್ನಬಸಪ್ಪ ಹೇಳಿದ್ದಾರೆ.

Advertisment

ಇದನ್ನೂ ಓದಿ:Darshan: ಬೇಲ್​ ಸಿಗದೆ ಹಿನ್ನೆಲೆ ಮಂಕಾಗಿ​​ ಮತ್ತೊಂದು ಡಿಮ್ಯಾಂಡ್​​.. ಜೈಲಾಧಿಕಾರಿಗಳಿಗೆ ಟೆನ್ಶನ್

ಲಿಂ.ತೋಂಟದ ಸಿದ್ದಲಿಂಗ ಸ್ವಾಮಿಗಳ 6ನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಮಾತನಾಡಿದ ಡಾ.ಗೊರೂರು ಚೆನ್ನಬಸಪ್ಪನವರು, ದರ್ಶನ್ ಅಭಿಮಾನಿಗಳು ಮಾಡಿದ ಯಡವಟ್ಟನ್ನು ತೆರೆದಿಟ್ಟಿದ್ದಾರೆ. ಇಂದು ಮಾಧ್ಯಮದಲ್ಲಿ ಪ್ರಚಲಿತದಲ್ಲಿರುವ ಪುಣ್ಯಾತ್ಮ ದರ್ಶನ್ ಜನ್ಮದಿನದ ಸಂದರ್ಭ ಅದು. ಬೆಂಗಳೂರಿನ ನನ್ನ ನಿವಾಸದ ಪಕ್ಕವೇ ದರ್ಶನ್ ಮನೆಯಿದೆ. ಪುಣ್ಯಾತ್ಮನ ಜನ್ಮದಿನ ಹಿನ್ನೆಲೆ ಸಹಸ್ರಾರು ಅಭಿಮಾನಿಗಳು ಸೇರಿದ್ದರು. ಭಾರೀ ಪ್ರಮಾಣದಲ್ಲಿ ಸಿಡಿಮದ್ದು ಹಾರಿಸಿದ್ರು. ಆ ಭಾರಿ ಪ್ರಮಾಣದ ಸಿಡಿಮದ್ದಿನ ಕರ್ಕಶ ಸದ್ದಿನಿಂದಾಗಿ ನಾನು ನನ್ನ ಶ್ರವಣ ಶಕ್ತಿಯನ್ನೇ ಕಳೆದುಕೊಳ್ಳಬೇಕಾಯ್ತು ಎಂದು ಚೆನ್ನಬಸಪ್ಪನವರು ಹೇಳಿದ್ದಾರೆ.

ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿ ಮತ್ತೆ ಮಂಕಾದ ದರ್ಶನ್; ಅಧಿಕಾರಿಗಳ ಮುಂದೆ ಮತ್ತೊಂದು ಡಿಮ್ಯಾಂಡ್

Advertisment

ನನಗೀಗ 97 ವಯಸ್ಸು. ಈ ವಯಸ್ಸಿನಲ್ಲಿಯೂ ಕೂಡ ಸ್ಪಷ್ಟವಾಗಿ ಮಾತನಾಡಬಲ್ಲೆ, ನಡೆದಾಡಬಲ್ಲೆ. ಆದರೆ, ತಾವೆಲ್ಲರೂ ಮಾತನಾಡುವ ಪದಗಳನ್ನು ಕೇಳಿಸಿಕೊಳ್ಳಲಾಗದಷ್ಟು ಶ್ರವಣದೋಷ ಅನುಭವಿಸುತ್ತಿದ್ದೇನೆ. ಇದೆಲ್ಲಾ ಆ ಪುಣ್ಯಾತ್ಮ ದರ್ಶನ್ ಅಭಿಮಾನಿಗಳಿಂದಾಗಿದ್ದು ಎಂದು ತಮ್ಮ ತಮ್ಮ ಭಾಷಣದಲ್ಲಿ ನೋವನ್ನು ತೋಡಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment