/newsfirstlive-kannada/media/post_attachments/wp-content/uploads/2025/06/B-2-BOMBER.jpg)
ಅಮೆರಿಕಾದ ಬಿ-2 ಬಾಂಬರ್ ಯುದ್ಧ ವಿಮಾನಗಳು ಕಳೆದ ಶನಿವಾರ ಇರಾನ್ ಮೇಲೆ ದಾಳಿ ನಡೆಸಿದ್ದವು. ಅಮೆರಿಕಾದ ಮಿಸ್ಸೂರಿ ವಾಯುನೆಲೆಯಿಂದ ಟೇಕಾಫ್ ಆಗಿದ್ದ ಯುದ್ದ ವಿಮಾನಗಳು ನಿರಂತರ 37 ಗಂಟೆ ಹಾರಾಟ ನಡೆಸಿ ದಾಳಿ ನಡೆಸಿದ್ದು ವಿಶೇಷ. ಬಿ-2 ಸ್ಟೀಲ್ತ್ ಬಾಂಬರ್ ಯುದ್ಧ ವಿಮಾನಗಳು ಮಾಮೂಲಿ ಯುದ್ಧ ವಿಮಾನಗಳಂತೆ ಅಲ್ಲ. ಸಾಕಷ್ಟು ವಿಶೇಷತೆಯನ್ನು ಹೊಂದಿರುವ ವಿಮಾನಗಳು.
ಬರೀ ಹಕ್ಕಿಯಂತೆ ಅಗಸದಲ್ಲಿ ಹಾರಾಟ ಮಾತ್ರ ನಡೆಸಲ್ಲ. ಬಿ-2 ಸ್ಟೀಲ್ತ್ ಬಾಂಬರ್ ವಿಮಾನ ಬರೀ ಯುದ್ಧ ವಿಮಾನವೂ ಅಲ್ಲ. ಬಿ-2 ಸ್ಟೀಲ್ತ್ ಬಾಂಬರ್ ವಿಮಾನವೂ ವಿಶ್ವದ ಅತ್ಯಂತ ಅಡ್ವಾನ್ಸಡ್ ಯುದ್ಧ ವಿಮಾನ. ಈ ಯುದ್ಧ ವಿಮಾನದೊಳಗೆ ಬಂಕ್, ಸ್ನಾಕ್ಸ್, ಮೈಕ್ರೋವೇವ್, ಬೆಡ್, ಟಾಯ್ಲೆಟ್, ಫುಡ್ ಸೇರಿದಂತೆ ಸುದೀರ್ಘ ಅವಧಿಗೆ ಸಮಯ ಕಳೆಯಲು ಬೇಕಾದ ಎಲ್ಲ ವ್ಯವಸ್ಥೆಗಳೂ ಇವೆ ಅನ್ನೋದು ವಿಶೇಷ.
ಇದನ್ನೂ ಓದಿ: AI ಇಂದ IT ಉದ್ಯೋಗಗಳಿಗೆ ಧಕ್ಕೆ ಇಲ್ಲ.. ಇನ್ಫೋಸಿಸ್ ದಿಗ್ಗಜ ಎನ್.ಆರ್ ನಾರಾಯಣಮೂರ್ತಿ ಹೇಳಿದ್ದು ಏನು?
ಯುದ್ಧ ವಿಮಾನಗಳಲ್ಲಿ ಪೈಲಟ್ಗಳು ಕುಳಿತುಕೊಳ್ಳಲು ಬಿಟ್ಟರೆ ಬೇರೆ ಜಾಗ ಇರೋದಿಲ್ಲ. ಯುದ್ಧ ವಿಮಾನಗಳು ಕಮರ್ಷಿಯಲ್ ಪ್ರಯಾಣಿಕರ ವಿಮಾನಗಳಂತೆ ವಿಶಾಲವಾಗಿ ಇರೋದಿಲ್ಲ. ಆದರೆ ಬಿ-2 ಸ್ಟೀಲ್ತ್ ಬಾಂಬರ್ ವಿಮಾನದಲ್ಲಿ ಪೈಲಟ್ಗಳು ಎರಡು ಮೂರು ದಿನಗಳವರೆಗೂ ಇರಲು ಬೇಕಾದ ವ್ಯವಸ್ಥೆಗಳಿವೆ. ಬಿ-2 ಸ್ಟೀಲ್ತ್ ಯುದ್ಧ ವಿಮಾನವನ್ನು ವೈರಿಗಳನ್ನು ಸೋಲಿಸಲು, ವೈರಿಗಳ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಫೇಲ್ಯೂರ್ ಮಾಡಿ ಮುನ್ನುಗ್ಗಲು ಮಾತ್ರ ವಿನ್ಯಾಸಗೊಳಿಸಿಲ್ಲ.
ಬಿ-2 ಸ್ಟೀಲ್ತ್ ಬಾಂಬರ್ ವಿಮಾನದಲ್ಲಿ ಇಬ್ಬರು ಪೈಲಟ್ಗಳು ಹಾರಾಟ ನಡೆಸಬಹುದು. ಪೈಲಟ್ ಗಳ ಪೈಕಿ ಒಬ್ಬ ಪೈಲಟ್ ವಿಮಾನದ ಹಾರಾಟ ನಡೆಸುತ್ತಿದ್ದರೆ ಮತ್ತೊಬ್ಬ ಪೈಲಟ್ ಮಲಗಿಕೊಳ್ಳಲು ಬೆಡ್ ವ್ಯವಸ್ಥೆ ಇದೆ. ಚಿಕ್ಕದಾದ ಫ್ರಿಡ್ಜ್ ಕೂಡ ಇದೆ. ಮೈಕ್ರೋ ವೇವ್ ಓವನ್ ಮೂಲಕ ಆಹಾರವನ್ನು ಬಿಸಿ ಮಾಡಿಕೊಳ್ಳಬಹುದು. ಬಿ-2 ಸ್ಟೀಲ್ತ್ ಯುದ್ಧ ವಿಮಾನವನ್ನು ಎಲ್ಲೂ ಲ್ಯಾಂಡಿಂಗ್ ಮಾಡದೆ ಕನಿಷ್ಠ 2 ರಿಂದ 3 ದಿನ ಹಾರಾಟ ನಡೆಸಲಾಗುತ್ತೆ. ಆಗಸದಲ್ಲೇ ಈ ವಿಮಾನಕ್ಕೆ ಬೇರೊಂದು ವಿಮಾನದ ಮೂಲಕ ಇಂಧನ ಭರ್ತಿ ಮಾಡಲಾಗುತ್ತೆ. ಹೀಗಾಗಿ ಎರಡು ಮೂರು ದಿನಗಳ ಕಾಲ ಪೈಲಟ್ಗಳು ಕಂಫರ್ಟಬಲ್ ಆಗಿ ಇರಲು ಯುದ್ಧ ವಿಮಾನದಲ್ಲಿ ಸ್ನಾಕ್ಸ್ , ಫುಡ್ ಇಟ್ಟುಕೊಂಡು ಬಿಸಿ ಮಾಡಿಕೊಂಡು ಸೇವಿಸಬಹುದು.
ಇದನ್ನೂ ಓದಿ: ಇರಾನ್ ಮೇಲೆ US ಅಟ್ಯಾಕ್.. ಅಮೆರಿಕ ಸೇನೆಯ ಬಾಹುಬಲಿ ಬಿ-2 ಬಾಂಬರ್ ವಿಶೇಷತೆ ಏನು ಗೊತ್ತಾ..?
ಇದರಿಂದ ಪೈಲಟ್ಗಳಿಗೆ ಹಸಿವು, ಸುಸ್ತು ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಫುಡ್ ರಾಕ್ನಲ್ಲಿ ಕ್ಯಾಂಡಿ ಬಾರ್, ಸೆರೆಲ್ಸ್, ಸ್ಯಾಂಡ್ ವಿಚ್, ಮಿಲ್ಕ್, ಎನರ್ಜಿ ಡ್ರಿಂಕ್ಸ್ ಇಟ್ಟುಕೊಳ್ಳಬಹುದು. ಇದರಿಂದಾಗಿ ಅಮೆರಿಕಾದ ಬಿ-2 ಸ್ಟೀಲ್ತ್ ಯುದ್ಧ ವಿಮಾನದ ಮೂಲಕ 30-40 ಗಂಟೆ ಹಾರಾಟ ನಡೆಸಿ, ಜಗತ್ತಿನ ಯಾವುದೇ ಭಾಗಕ್ಕೆ ಬೇಕಾದರೂ ಹೋಗಿ ದಾಳಿ ನಡೆಸುವ ಶಕ್ತಿ, ಸಾಮರ್ಥ್ಯವನ್ನು ಈ ಯುದ್ದ ವಿಮಾನ ಹೊಂದಿದೆ.
ಟಾಯ್ಲೆಟ್ಗೆ ಹೋಗಲು ಯುದ್ಧ ವಿಮಾನದಲ್ಲಿ ಟಾಯ್ಲೆಟ್ ವ್ಯವಸ್ಥೆಯೂ ಇದೆ. ಈ ಯುದ್ಧ ವಿಮಾನವೇ ವೈರಿಗಳನ್ನು ಕೊಲ್ಲುತ್ತೆ. ವೈರಿಗಳನ್ನು ಯಾಮಾರಿಸಿ ದಾಳಿಯನ್ನು ನಡೆಸುತ್ತೆ. ಕಳೆದ ವಾರ ಇರಾನ್ ಪರಮಾಣ ಸ್ಥಾವರಗಳ ಮೇಲೆ ಬಾಂಬ್ ದಾಳಿಗೆ ಅಮೆರಿಕಾ ಇದೇ ಬಿ-2 ಸ್ಟೀಲ್ತ್ ಬಾಂಬರ್ ವಿಮಾನವನ್ನೇ ನಿಯೋಜಿಸಿದ್ದು ವಿಶೇಷ.
90ರ ದಶಕದಲ್ಲಿ ಜಗತ್ತಿನಲ್ಲಿ ಶೀತಲ ಸಮರ ಅಂತ್ಯವಾದ ಬಳಿಕ ಅಮೆರಿಕ 132 ಬಿ-2 ಬಾಂಬರ್ ವಿಮಾನ ನಿರ್ಮಾಣದ ಪ್ಲ್ಯಾನ್ ಹೊಂದಿತ್ತು. ಅಮೆರಿಕಾದ ಡಿಫೆನ್ಸ್ ಬಜೆಟ್ ಕಡಿತವಾಗಿದ್ದರಿಂದ 21 ಬಿ- 2 ಸ್ಟೀಲ್ತ್ ಬಾಂಬರ್ ಯುದ್ಧ ವಿಮಾನ ತಯಾರಿಸಿದೆ. ಪ್ರತಿಯೊಂದು ಬಿ-2 ಸ್ಟೀಲ್ತ್ ಯುದ್ಧ ವಿಮಾನದ ರಿಸರ್ಚ್, ಡೆವಲಪಮೆಂಟ್ ಹಾಗೂ ನಿರ್ಮಾಣಕ್ಕೆ 2.2 ಬಿಲಿಯನ್ ಡಾಲರ್ ವೆಚ್ಚವಾಗಿದೆ.
ಇದನ್ನೂ ಓದಿ: ಮೊಟ್ಟ ಮೊದಲ ಎಲೆಕ್ಟ್ರಿಕ್ ವಿಮಾನ.. ಜಸ್ಟ್ 700 ರೂಪಾಯಿ ಇದ್ರೆ ಪ್ರಯಾಣಿಸಬಹುದು! -Video
ಅಮೆರಿಕಾದಲ್ಲಿ ಬಿ-2 ಸ್ಟೀಲ್ತ್ ಬಾಂಬರ್ ವಿಮಾನಗಳ ಪೈಕಿ 1 ಯುದ್ಧ ವಿಮಾನ ಅಪಘಾತದಲ್ಲಿ ಹಾಳಾಗಿದೆ. 2008 ರಲ್ಲಿ ಆ್ಯಂಡರಸನ್ ಏರ್ಬೇಸ್ನಿಂದ ಟೇಕಾಫ್ ಆಗುವಾಗ ಯುದ್ಧ ವಿಮಾನವೊಂದು ಅಪಘಾತಕ್ಕೀಡಾಗಿ ಪತನವಾಯಿತು. ಇಬ್ಬರು ಪೈಲಟ್ಗಳು ಸೇಫಾಗಿ ವಿಮಾನದಿಂದ ಜಂಪ್ ಮಾಡಿ ಎಸ್ಕೇಪ್ ಆದರು. ಫ್ಲೈಟ್ ಕಂಟ್ರೋಲ್ ಸಿಸ್ಟಮ್ನ ಸೆನ್ಸರ್ನಲ್ಲಿದ್ದ ಮೋಯಶ್ಚರ್ನಿಂದ ವಿಮಾನ ಅಪಘಾತಕ್ಕೀಡಾಗಿತ್ತು. ಮತ್ತೊಂದು ವಿಮಾನ ಸೇವೆಯಿಂದ ನಿವೃತ್ತಿ ತೆಗೆದುಕೊಂಡಿದೆ. ಇಂದು ಅಮೆರಿಕಾದ ಸೇನೆಯ ಬಳಿ 19 ಬಿ-2 ಸ್ಟೀಲ್ತ್ ವಿಮಾನಗಳಿವೆ. ಇವೆಲ್ಲವೂ ಮಿಸ್ಸೂರಿಯ ವೈಟ್ ಮ್ಯಾನ್ ಏರ್ ಪೋರ್ಸ್ ಬೇಸ್ನಲ್ಲಿವೆ. ಬಿ-2 ಸ್ಟೀಲ್ತ್ ಬಾಂಬರ್ ಯುದ್ಧ ವಿಮಾನವನ್ನು ವೈರಿ ರಾಷ್ಟ್ರಗಳ ರಾಡಾರ್ಗಳು ಪತ್ತೆ ಹಚ್ಚಲು, ಹೊಡೆದುರುಳಿಸಲು ಸಾಧ್ಯವೇ ಇಲ್ಲ. ಇದೊಂದು ಮಲ್ಟಿ ರೋಲ್ ಹೆವಿ ಬಾಂಬರ್ ಯುದ್ಧ ವಿಮಾನ. ಈ ಯುದ್ಧ ವಿಮಾನದ ಥ್ರಸ್ತ್ 17,300 ಪೌಂಡ್ಸ್ ಫಾರ್ ಇಂಜಿನ್ ಆಗಿದೆ. 17 ಅಡಿ ಎತ್ತರ ಇರುವ ಈ ವಿಮಾನವು 69 ಅಡಿ ಉದ್ದ ಇದೆ. ಖಾಲಿ ಯುದ್ಧ ವಿಮಾನ 72,575 ಕೆಜಿ ತೂಕ ಇದೆ. 1,52,634 ಕೆಜಿ ತೂಕದೊಂದಿಗೆ ಟೇಕಾಫ್ ಆಗುವ ಸಾಮರ್ಥ್ಯ ಹೊಂದಿದೆ.
ಬಿ-2 ಸ್ಟೀಲ್ತ್ ಬಾಂಬರ್ ವಿಮಾನದ ಬಳಿಕ ಅಮೆರಿಕಾ, ಬಿ-21 ರೈಡರ್ ಯುದ್ಧ ವಿಮಾನವನ್ನು ಅಭಿವೃದ್ದಿಪಡಿಸುತ್ತಿದೆ. ಬಿ-21 ರೈಡರ್ ಯುದ್ಧ ವಿಮಾನವು 6ನೇ ಜನರೇಷನ್ ಯುದ್ಧ ವಿಮಾನ. ಅಮೆರಿಕಾದ ಏರ್ಫೋರ್ಸ್ ಈಗ 200 ಬಿ- 21 ರೈಡರ್ ಬಾಂಬರ್ ಯುದ್ಧ ವಿಮಾನ ಖರೀದಿಸುವ ಪ್ಲಾನ್ ಹಾಕಿಕೊಂಡಿದೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ