ಬೀಟ್ರೂಟ್ನಲ್ಲಿದೆ ನಿಮ್ಮ ದೇಹವನ್ನು ಶಕ್ತಿಯುತವಾಗಿ ಮಾಡುವ ಅಂಶ
ರಕ್ತದೊತ್ತಡದ ಸಮಸ್ಯೆಯಿಂದ ಪಾರಾಗಲು ದೇಹಕ್ಕೆ ಬೇಕು ಬೀಟ್ರೂಟ್
ನಿತ್ಯ 100 ಗ್ರಾಂ ಬೀಟ್ರೂಟ್, ದೇಹದ ಆರೋಗ್ಯಕ್ಕೆ 6 ಪ್ರಯೋಜನಗಳು
ತರಕಾರಿ ಮಾರುಕಟ್ಟೆಯಲ್ಲಿ ಬೀಟ್ರೂಟ್ಗೆ ಬೇಡಿಕೆ ಒಂದು ಕೈ ಹೆಚ್ಚೇ ಇದೆ. ಕಾರಣ ಅದರಿಂದ ಆಗುವ ಆರೋಗ್ಯದ ಪ್ರಯೋಜನಗಳು. ಬೀಟ್ರೂಟ್ ನ್ಯೂಟ್ರಿಷನ್ಗಳ ಒಂದು ಪ್ಯಾಕೇಜ್ ಎಂದೇ ವೈದ್ಯರು ಬಣ್ಣಿಸುತ್ತಾರೆ. ಡಯಟ್ ಮಾಡುವವರಂತೂ ಇದನ್ನು ಕಡ್ಡಾಯವಾಗಿ ಉಪಯೋಗಿಸುತ್ತಾರೆ. ಯಾವುದೇ ಮದುವೆ, ಮುಂಜಿಯಂತಹ ಕಾರ್ಯಕ್ರಮಗಳಿರಲಿ ಅಲ್ಲಿ ಸಲಾಡ್ನಲ್ಲಿ ಈ ಕೆಂಪು ಬಣ್ಣದ ಆರೋಗ್ಯಕರ ತರಕಾರಿ ತನ್ನ ಜಾಗವನ್ನು ಪಡೆದುಕೊಂಡಿರುತ್ತದೆ. ಕಾರಣ ಬೀಟ್ರೂಟ್ ಅತಿಹೆಚ್ಚು ವಿಟಮಿನ್ಸ್ ಮತ್ತು ಮಿನರಲ್ಸ್ಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಈ ಬೀಟ್ರೂಟ್ ಸೇವನೆಯಿಂದ ನಿಮಗೆ ಒಟ್ಟು ಆರು ರೀತಿಯ ಆರೋಗ್ಯದ ಪ್ರಯೋಜನಗಳಿವೆ. ನಿಮ್ಮ ನಿತ್ಯ ಬದುಕನ್ನು ಮತ್ತಷ್ಟು ಚಟುವಟಿಕೆಯಿಂದ ನಿಮ್ಮ ದೇಹದ ಆರೋಗ್ಯವನ್ನು ಮತ್ತಷ್ಟು ಸದೃಢಗೊಳಿಸಲು ನೀವು ಬೀಟ್ರೂಟ್ ತಿನ್ನಲೇಬೇಕು.
1 ರಕ್ತದೊತ್ತಡವನ್ನು ನಿಯಂತ್ರಿಸುವ ಬಿಟ್ರೂಟ್
ಬೀಟ್ರೂಟ್ ತಿನ್ನುವುದರಿಂದ ಆಗುವ ದೊಡ್ಡ ಲಾಭ ಅಂದ್ರೆ ಅದು ನಿಮ್ಮ ದೇಹದ ರಕ್ತದೊತ್ತಡವನ್ನು ಅಂದ್ರೆ ಬ್ಲಡ್ ಪ್ರಶರ್( blood pressure) ರನ್ನು ನಿಯಂತ್ರಿಸುತ್ತದೆ. ಇದರೊಳಗಿರುವ ಅಧಿಕ ನೈಟ್ರೇಟ್ಸ್ಗಳು ದೇಹದಲ್ಲಿ ನೈಟ್ರಿಕ್ ಆಕ್ಸಿಡ್ ಆಗಿ ಬದಲಾಗುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ. ಇನ್ನು ನಿತ್ಯ ಬೀಟ್ರೂಟ್ ಸೇವನೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಪಾರ್ಶ್ವವಾಯುವಿನಂತ ಸಮಸ್ಯೆಗಳಿಂದ ದೂರ ಇರಬಹುದು.
2 ತೂಕ ಕಡಿಮೆ ಮಾಡುವಲ್ಲಿ ಸಹಾಯಕ
ಬೀಟ್ರೂಟ್ ತಿನ್ನುವುದರಿಂದ ಸ್ಥೂಲಕಾಯದವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನೀವು 100 ಗ್ರಾಂನಷ್ಟು ಬೀಟ್ರೂಟ್ ಬೇಯಿಸಿದರೆ, ಅದರಲ್ಲಿ 44 ಕ್ಯಾಲರೀಸ್ಗಳು ಇರುತ್ತವೆ. 1.7ಗ್ರಾಂನಷ್ಟು ಪೌಷ್ಠಿಕಾಂಶವಿರುತ್ತದೆ. 0.2ರಷ್ಟು ಫ್ಯಾಟ್ ಅಂಶ ಇದ್ದು, 2 ಗ್ರಾಂನಷ್ಟು ಫೈಬರ್ ಕಂಟೆಂಟ್ ಇರುತ್ತದೆ. ಈ ಎಲ್ಲಾ ಅಂಶಗಳು ನಿಮಗೆ ತೂಕ ಕಡಿಮೆ ಮಾಡಿಕೊಳ್ಳಲಲು ಸಹಾಯ ಮಾಡುತ್ತದೆ.
3 ದೇಹದಲ್ಲಿ ಶಕ್ತಿ ಮತ್ತು ಕಾರ್ಯಕ್ಷಮತೆ ಹೆಚ್ಚಿಸುತ್ತದೆ
ಕ್ರೀಡಾಪಟುಗಳು ತಮ್ಮ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಬೀಟ್ರೂಟ್ ನ್ನು ಹೆಚ್ಚು ಅವಲಂಬಿಸುತ್ತಾರೆ. ಇದರಲ್ಲಿರುವ ನೈಟ್ರೇಟ್ಸ್ ಮೈಟೋಕಾಂಡ್ರಿಯಾದ ದಕ್ಷತೆಯನ್ನು ಹೆಚ್ಚಿಸು ದೇಹದಲ್ಲಿ ಶಕ್ತಿಯನ್ನು ಬೂಸ್ಟ್ ಮಾಡಲು ಸಹಾಯ ಮಾಡುತ್ತದೆ. ಹಲವು ಅಧ್ಯಯನಗಳು ವರದಿ ಮಾಡಿರುವ ಪ್ರಕಾರ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದಾಗಿ ದೇಹದಲ್ಲಿ ಶ್ರಮದ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯದ ಆರೋಗ್ಯದಲ್ಲಿಯೂ ಧನಾತ್ಮಕ ಪರಿಣಾಮ ಬೀರುತ್ತದೆ. ವ್ಯಾಯಾಮ ಮಾಡುವಾಗ ಆಮ್ಲಜನಕವನ್ನು ಸರಿಯಾಗಿ ಬಳಕೆ ಮಾಡುವಂತೆ ಮಾಡುತ್ತದೆ.
ಇದನ್ನೂ ಓದಿ: ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಇದೆ ಲಸಿಕೆ; ಕೂಡಲೇ ವೈದ್ಯರನ್ನು ಸಂಪರ್ಕಿಸಿ!
4 ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ
ಉರಿಯೂತ ಎನ್ನುವುದು ಹಲವು ರೋಗಗಳಿಗೆ ಆಹ್ವಾನ ಪತ್ರಿಕೆಯಿದ್ದಂತೆ. ಬೀಟ್ರೂಟ್ ಸೇವನೆಯಿಂದ ಈ ಊರಿಯೂತದಂತಹ ಸಮಸ್ಯೆಗಳನ್ನು ದೂರ ಇಡಬಹುದು. ಊರಿಯೂತಕ್ಕೆ ವೈದ್ಯರು ಸೂಚಿಸುವುದು ಕೂಡ ಬೀಟ್ರೂಟ್ನ್ನೆ. ಇದರಲ್ಲಿರುವ ಪೋಷಕಾಂಶಗಳು ಉರಿಯೂತಕ್ಕೆ ನಿರೋಧಕ ಶಕ್ತಿಯಾಗಿ ದೇಹದಲ್ಲಿ ನಿಲ್ಲುತ್ತದೆ.
5 ಕರುಳಿನ ಆರೋಗ್ಯಕ್ಕೆ ಶ್ರೇಷ್ಠ ಆಹಾರ
ಅತಿಹೆಚ್ಚು ಫೈಬರ್ ಅಂಶವನ್ನು ಹೊಂದಿರುವ ಬೀಟ್ರೂಟ್ ಜೀರ್ಣಶಕ್ತಿಯನ್ನು ದೇಹದಲ್ಲಿ ವೃದ್ಧಿಸುತ್ತದೆ.ಇದರಿಂದಾಗಿ ಲೀವರ್ ಹಾಗೂ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಇದು ಶ್ರೇಷ್ಠ ಸಸ್ಯಾಹಾರವೆಂದೇ ಬಣ್ಣಿಸಲಾಗುತ್ತದೆ.
ಇದನ್ನೂ ಓದಿ: Myopia; ಕೋವಿಡ್ ಲಾಕ್ ಡೌನ್ ಬಳಿಕ ಮಕ್ಕಳಲ್ಲಿ ಸೃಷ್ಟಿಯಾಗಿದೆ ಹೊಸ ಸಮಸ್ಯೆ, ಏನದು?
6 ಮೆದುಳು ಆರೋಗ್ಯಕರವಾಗಿಡಲು ಬಿಟ್ರೂಟ್ ಬೇಕು
ವಯಸ್ಸು ಆದಂತೆಲ್ಲಾ ನಾವು ಮೆದುಳಿನ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ. ನಿತ್ಯ ಬೀಟ್ರೂಟ್ ಸೇವನೆಯಿಂದಾಗಿ ಮೆದುಳಿನಲ್ಲಿ ಹೆಚ್ಚು ಹೆಚ್ಚು ರಕ್ತ ಹರಿಯುವಲ್ಲಿ ಸಹಕಾರಿಯಾಗುತ್ತದೆ. ಹೀಗಾಗಿ ಮೆದುಳಿನ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ನಿಮ್ಮ ಡಯಟ್ನಲ್ಲಿ ಬೀಟ್ರೂಟ್ ಒಂದನ್ನ ಖಾಯಂ ಆಗಿ ಇಟ್ಟುಕೊಳ್ಳಿ.ಬೀಟ್ರೂಟ್ ತಿನ್ನಲು ಹಲವು ವಿಧಾನಗಳಿಗೆ. ನೀವು ಬೀಟ್ರೂಟ್ ನ್ನ ಸಣ್ಣದಾಗಿ ಕಟ್ ಮಾಡಿ ಸಲಾಡ್ ರೀತಿಯಲ್ಲಿ ತಿನ್ನಬಹುದು. ಇಲ್ಲವೇ ಜ್ಯೂಸ್ ಮಾಡಿಕೊಂಡು ಕುಡಿಯಬಹುದು ಅಥವಾ ಚಿಕ್ಕದಾಗಿ ಕತ್ತರಿಸಿ ಕುದಿಸಿ ಕೂಡ ತಿನ್ನಬಹುದು. ಇದೆಲ್ಲದರಿಂದಲೂ ನಿಮ್ಮ ದೇಹದಾರೋಗ್ಯಕ್ಕೆ ಆರು ಪ್ರಯೋಜನಗಳು ಆಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ