/newsfirstlive-kannada/media/post_attachments/wp-content/uploads/2025/05/operation-sindoor18.jpg)
ನಿನ್ನೆಯಷ್ಟೇ ‘ಆಪರೇಷನ್ ಸಿಂಧೂರ’ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಯಶಸ್ವಿಯಾಗಿ ಸೇಡು ತೀರಿಸಿಕೊಂಡಿದೆ.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಮೊತ್ತೊಂದು ದೊಡ್ಡ ಆಘಾತ; 12 ಸೈನಿಕರು ಛಿದ್ರ ಛಿದ್ರ..! VIDEO
ಪಿಓಕೆ ಹಾಗೂ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ 9 ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮೂಲಕ ಉಡೀಸ್ ಮಾಡಿದೆ.
ನಿನ್ನೆ ಭಾರತ ಸೇನೆ ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ಮಾಡಿ ನಡೆಸಿದ ಬಳಿಕ ಉಗ್ರರ ನೆಲೆ ಧ್ವಂಸಗೊಂಡಿದೆ.
ಕ್ಷಿಪಣಿ ದಾಳಿಯಿಂದಾಗಿ ಧ್ವಂಸವಾದ ಕಟ್ಟಡದ ಪೂರ್ಣ ವಿಡಿಯೋ ಬಿಡುಗಡೆಯಾಗಿದೆ. ಆ ವಿಡಿಯೋದಲ್ಲಿ ಉಗ್ರರ ನೆಲೆ ಪೂರ್ಣ ಪ್ರಮಾಣದಲ್ಲಿ ನಿರ್ನಾಮವಾಗಿದೆ.
ಭಾರತದ ಮಿಸೈಲ್ಗೆ ಪೂರ್ತಿ ಟೆರರ್ ಕ್ಯಾಂಪ್ ಛಿದ್ರಗೊಂಡಿದೆ. ಸದ್ಯ ಟೆರರ್ ಕ್ಯಾಂಪ್ಗೆ ಪಾಕ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸದ್ಯ ಸ್ಥಳೀಯ ಜನರಿಂದ ದಾಳಿಯಾದ ಪ್ರದೇಶಕ್ಕೆ ಭೇಟಿ ಕೊಡುತ್ತಿದ್ದಾರೆ. ಪೂರ್ತಿ ಟೆರರ್ ಕ್ಯಾಂಪ್ ಅನ್ನ ಪಾಕ್ ಸೀಲ್ ಮಾಡಿದೆ.
ಪಾಕ್ ಆಕ್ರಮಿತ ಕಾಶ್ಮೀರದ 9 ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿದ ನಂತರ ಸಂಭವಿಸಿದ ವಿನಾಶದ ಪ್ರಮಾಣವನ್ನು ಭಾರತೀಯ ಸೇನೆಯು ಹೊಸ ಉಪಗ್ರಹ ಚಿತ್ರಗಳ ಮೂಲಕ ಬಹಿರಂಗಪಡಿಸಿವೆ.
ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳಲ್ಲಿ ನಿರ್ಣಾಯಕ ಸ್ಥಳಗಳಲ್ಲಿ ದಾಳಿಯಾಗಿರುವುದನ್ನು ತೋರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ