ಹುಟ್ಟು ಹಬ್ಬಕ್ಕೂ ಮೊದಲೇ ​ಸರ್ಪ್ರೈಸ್ ಕೊಟ್ಟ ಗೋಲ್ಡನ್ ಸ್ಟಾರ್.. ಗಣೇಶನ ಹೊಸ ಅವತಾರ ನೋಡಲೇಬೇಕು..! Photos

author-image
Veena Gangani
Updated On
ಹುಟ್ಟು ಹಬ್ಬಕ್ಕೂ ಮೊದಲೇ ​ಸರ್ಪ್ರೈಸ್ ಕೊಟ್ಟ ಗೋಲ್ಡನ್ ಸ್ಟಾರ್.. ಗಣೇಶನ ಹೊಸ ಅವತಾರ ನೋಡಲೇಬೇಕು..! Photos
Advertisment
  • ನಾಳೆ ಸ್ಯಾಂಡಲ್​ವುಡ್​ ನಟ ಗೋಲ್ಡನ್ ಸ್ಟಾರ್ ಗಣೇಶ್​ ಹುಟ್ಟುಹಬ್ಬ.
  • ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಸ್ಟಾರ್​ ನಟ ಗಣೇಶ್​
  • ಸ್ಟೈಲಿಶ್ ಲುಕ್​ನಲ್ಲಿ ಫೋಟೋಗೆ ಪೋಸ್​ ಕೊಟ್ಟ ಗೋಲ್ಡನ್ ಸ್ಟಾರ್

ನಾಳೆ ಸ್ಯಾಂಡಲ್​ವುಡ್​ ನಟ ಗೋಲ್ಡನ್ ಸ್ಟಾರ್ ಗಣೇಶ್​ ಹುಟ್ಟು ಹಬ್ಬ. ಆದ್ರೆ ಈ ವರ್ಷ ನಟ ಗಣೇಶ್ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಳ್ತಿಲ್ಲ. .

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಗುಡ್​​ನ್ಯೂಸ್​; LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ..!

publive-image

ಈ ಬಗ್ಗೆ ಖುದ್ದು ನಟ ಗಣೇಶ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜುಲೈ 2 ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ಣುಂಬಿಕೊಂಡು ಸಂಭ್ರಮಿಸುವ ದಿನ. ಆದರೆ ಈ ಬಾರಿ ನಾನು ‘ಪಿನಾಕ’ ಹಾಗೂ ‘Your Sincerely ರಾಮ್​’ ಚಿತ್ರಗಳ ಹೊರಾಂಗಣ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಿರುವ ಕಾರಣ ಜುಲೈ 2ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೆ, ಕಷ್ಟದಲ್ಲಿರುವವರಿಗೆ ನೇರವಾಗುವ ಮೂಲಕ ತಾವುಗಳು ಇದ್ದಲ್ಲಿದಂಲೇ ನನಗೆ ಆಶಿಸಿ ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ. ಆದ್ರೆ, ಹುಟ್ಟು ಹಬ್ಬಕ್ಕೂ ಮುನ್ನ ಫ್ಯಾನ್ಸ್​ಗೆ ಹೊಸ ಫೋಟೋಶೂಟ್ ಮೂಲಕ ಗಿಫ್ಟ್ ಕೊಟ್ಟಿದ್ದಾರೆ ಗೋಲ್ಡನ್ ಸ್ಟಾರ್.

publive-image

ನಟ ಗಣೇಶ್ ಸ್ಟೈಲಿಶ್ ಲುಕ್​ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ವಿಶೇಷ ಎಂದರೆ ನಟನ ಫೋಟೋವನ್ನು ನಿತ್ಯಾ ಪ್ರಕಾಶ್ ಅವರು ಕ್ಲಿಕ್ಕಿಸಿದ್ದಾರೆ.

publive-image

ನಿತ್ಯಾ ಪ್ರಕಾಶ್ ಅವರು ಗೋಲ್ಡನ್ ಮೂವೀಸ್​​ನಲ್ಲಿ ಶಿಲ್ಪಾ ಗಣೇಶ್ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗಣೇಶ್ ಹೊಸ ಫೋಟೋಶೂಟ್​ಗೆ ನಿತ್ಯಾ ಪ್ರಕಾಶ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ.

publive-image

ಕೃಷ್ಣಂ ಪ್ರಣಯ ಸಖಿ ಚಿತ್ರದ ಬಳಿಕ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟ ಗಣೇಶ್ ಬ್ಯುಸಿಯಾಗಿದ್ದಾರೆ. ಪಿನಾಕ, ಯುವರ್ ಸಿನ್ಸಿಯರ್ಲಿ ರಾಮ್, ಭರ್ಜರಿ ಚೇತನ್ ನಿರ್ದೇಶನದ ಚಿತ್ರಗಳಲ್ಲಿ ನಟ ಗಣೇಶ್ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.

publive-image

ಸದ್ಯ ಫ್ಯಾನ್ಸ್​ಗೆ ಸಿಗದೇ ಹೋದ್ರೂ ಹೊಸ ಫೋಟೋ ಶೂಟ್ ಮೂಲಕ ಗಣಪನ ದರ್ಶನ ಕೊಟ್ಟಿದ್ದಾರೆ.
ಸದ್ಯಕ್ಕೆ ಅರಸು ಅಂತಾರೆ, ಭರ್ಜರಿ ಚೇತನ್ ಹಾಗೂ ಶ್ರೀನಿವಾಸ್ ರಾಜು ನಿರ್ದೇಶನದ ಸಿನಿಮಾಗಳು ಲೈನ್​ ಅಪ್​ನಲ್ಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment