RCB VS PBKS ಫೈನಲ್ ಮ್ಯಾಚ್ ಆರಂಭಕ್ಕೂ ಮೊದಲೇ ಶಾಕಿಂಗ್ ನ್ಯೂಸ್..

author-image
Veena Gangani
Updated On
RCB VS PBKS ಫೈನಲ್ ಮ್ಯಾಚ್ ಆರಂಭಕ್ಕೂ ಮೊದಲೇ ಶಾಕಿಂಗ್ ನ್ಯೂಸ್..
Advertisment
  • ಬೆಳಗ್ಗೆಯಿಂದಲೇ ಅಹಮದಾಬಾದ್‌ನಲ್ಲಿ ತುಂತುರು ಮಳೆ
  • IPL-18ರ ಆವೃತ್ತಿಯ ಫೈನಲ್‌ಗೆ ಕ್ಷಣಗಣನೆ ಆರಂಭ
  • ಹೈವೋಲ್ಟೇಜ್ ಮ್ಯಾಚ್​ಗೆ ಮಳೆರಾಯ ಅಡ್ಡಿಯಾಗ್ತಾನಾ?

ಅಹಮದಾಬಾದ್‌: ಐಪಿಎಲ್-18ರ ಆವೃತ್ತಿಯ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಅಂತಿಮ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ಇದನ್ನೂ ಓದಿ:RCBಗೆ ಶುಭ ಹಾರೈಸಿದ ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ.. ತಂಡದ ಬಗ್ಗೆ ಏನು ಹೇಳಿದರು?

publive-image

ಹೌದು, ಇಂದು ಸಂಜೆ 7.30ಕ್ಕೆ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಸೆಣಸಾಡಲಿದ್ದು, ರಣರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಅಹಮದಾಬಾದ್​​ನಲ್ಲಿ ಮಳೆಯ ಸಿಂಚನವಾಗಿದೆ.


">June 3, 2025

publive-image

ಇಂದು ಬೆಳಗ್ಗೆಯಿಂದಲೇ ಅಹಮದಾಬಾದ್‌ನಲ್ಲಿ ತುಂತುರು ಮಳೆಯಾಗುತ್ತಿತ್ತು. ಸಂಜೆಯಾಗುತ್ತಿದ್ದಂತೆ ಮಳೆ ಜೋರಾಗಿದ್ದು, ಹೀಗಾಗಿ ಮೈದಾನಕ್ಕೆ ಕವರ್‌ಗಳನ್ನು ಹಾಕಲಾಗಿದೆ. ಆದ್ರೆ ಇಂದು ಹೈವೋಲ್ಟೇಜ್ ಮ್ಯಾಚ್​ಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಹಾಗೇನಾದರೂ ಭಾರೀ ಮಳೆಯಾದರೇ ಬುಧವಾರಕ್ಕೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment