ಭಿಕ್ಷುಕನ ಕೈಯಲ್ಲಿ ಐಫೋನ್​ 16 ಪ್ರೋ ಮ್ಯಾಕ್ಸ್! ಬೆಚ್ಚಿ ಬಿದ್ದ ಇಂಟರ್​ನೆಟ್​ ಜಗತ್ತು!

author-image
Gopal Kulkarni
Updated On
ಭಿಕ್ಷುಕನ ಕೈಯಲ್ಲಿ ಐಫೋನ್​ 16 ಪ್ರೋ ಮ್ಯಾಕ್ಸ್! ಬೆಚ್ಚಿ ಬಿದ್ದ ಇಂಟರ್​ನೆಟ್​ ಜಗತ್ತು!
Advertisment
  • ಸಾವಿರಾರು ಜನರ ಕನಸನ್ನು ಕೈಯಲ್ಲಿ ಹಿಡಿದುಕೊಂಡ ಭಿಕ್ಷುಕ
  • ಅಜ್ಮೀರ್ ಭಿಕ್ಷುಕನ ಬಳಿ ಇದೆ ಐಫೋನ್​ 16 ಪ್ರೋ ಮ್ಯಾಕ್ಸ್!
  • ದುಡ್ಡು ಎಲ್ಲಿಂದ ಬಂತು ಅಂದ್ರೆ, ಭಿಕ್ಷೆಯಿಂದಲೇ ಎಂದು ಉತ್ತರ

ಐಫೋನ್ 16 ಖರೀದಿ ಮಾಡಲು ಏನೆಲ್ಲಾ ಕಷ್ಟ ಪಡಬೇಕು. ಎಷ್ಟೆಲ್ಲಾ ದುಡಿಯಬೇಕು ಎಂದು ಚಿಂತಿಸುವ ಹೊತ್ತಿನಲ್ಲಿಯೇ ಅಜ್ಮಿರ್​ನಲ್ಲಿ ಒಬ್ಬ ಭಿಕ್ಷಕ ಎಲ್ಲರನ್ನು ಕಕ್ಕಾಬಿಕ್ಕಿಯಾಗಿ ಮಾಡುವಂತೆ ಮಾಡಿದ್ದಾನೆ. ಕೈಯಲ್ಲಿ ಐಫೋನ್ 16 ಮ್ಯಾಕ್ಸ್ ಪ್ರೋ ಹಿಡಿದುಕೊಂಡೇ ಭಿಕ್ಷೆ ಬೇಡುತ್ತಿದ್ದಾನೆ ಇದನ್ನು ಕಂಡ ಇಂಟರ್​ನೆಟ್ ಜಗತ್ತು ಅಕ್ಷರಶಃ ಬೆಚ್ಚಿ ಬಿದ್ದಿದೆ. ಅಲ್ರಯ್ಯಾ. ಒಂದು ಐಫೋನ್16  ಪ್ರೋ ಮ್ಯಾಕ್ಸ್​ ಪಡೆಯಲು ನಾವು ಹಲವಾರು ತಿಂಗಳು ದುಡಿಯಬೇಕು. ಈ ಭಿಕ್ಷುಕ ಇಷ್ಟೊಂದು ಸಲೀಸಾಗಿ ಖರೀದಿ ಮಾಡಿ ಅದನ್ನು ಹಿಡಿದುಕೊಂಡೇ ಭಿಕ್ಷೆ ಬೇಡುತ್ತಿದ್ದಾನಲ್ಲ ಎಂದು ಬೆಕ್ಕಸ ಬೆರಗಾಗಿದ್ದಾರೆ.

ಹೀಗೆ ಐಫೋನ್ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದವನ ಹೆಸರು ಶೇಖ್ ಎಂದು ಗುರುತಿಸಲಾಗಿದೆ. ಈತ ಐಫೋನ್ 16 ಪ್ರೋ ಮ್ಯಾಕ್ಸ್ ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶೇಷ ಚೇತನ ಆಗಿರುವ ಈ ಭಿಕ್ಷುಕನನ್ನು ಅನೇಕರ ಸಂದರ್ಶನ ಮಾಡಿದ್ದಾರೆ ತನ್ನ ಸಂದರ್ಶನದಲ್ಲಿ ನಾನು 1.70 ಲಕ್ಷ ರೂಪಾಯಿ ಕ್ಯಾಶ್ ಕೊಟ್ಟು ಐಫೋನ್ ಸ್ಟೋರ್​ನಲ್ಲಿ ಈ ಐಫೋನ್​ 16 ಮ್ಯಾಕ್ಸ್ ಪ್ರೋ ಖರೀದಿಸಿದ್ದೀನಿ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಗೋಮೂತ್ರದ ಪ್ರಯೋಜನಗಳನ್ನು ಹೊಗಳಿದ ಮದ್ರಾಸ್​ನ ಐಐಟಿ ನಿರ್ದೇಶಕ; ಹೊತ್ತಿಕೊಂಡ ವಿವಾದ

ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಸಂದರ್ಶಕ ಕೇಳಿದಕ್ಕೆ, ಭಿಕ್ಷೆ ಬೇಡಿದ್ದರಿಂದಲೇ ಬಂದಿದ್ದು ಎಂದು ಹೇಳಿದ್ದಾನೆ. ಇಂಟರ್​ನೆಟ್​ನಲ್ಲಿ ಇದನ್ನು ನೋಡಿದ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಲಕ್ಷಾಂತರ ಜನರು ಈ ಒಂದು ಫೋನ್ ಖರೀದಿ ಮಾಡಲು ಅನೇಕ ರೀತಿಯ ಶ್ರಮ ಪಡುತ್ತಾರೆ. ಸಿಕ್ಕಾಪಟ್ಟೆ ಓದಿ ಒಳ್ಳೆ ಜಾಬ್​ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಒಳ್ಳೆಯ ಸ್ಯಾಲರಿಗಾಗಿ ಕಂಪನಿಯಿಂದ ಕಂಪನಿ ಚೆಂಜ್ ಮಾಡುತ್ತಾರೆ. ಕಾರಣ ಈ ಒಂದು ಕನಸಿಗಾಗಿ. ಆದ್ರೆ ಈ ಬೆಗ್ಗರ್ ಇದ್ಯಾವುದನ್ನು ಮಾಡದೇ ಲಕ್ಷಾಂತರ ಜನರ ಕನಸನ್ನು ಕೈಯಲ್ಲಿ ಹಿಡಿದುಕೊಂಡು ಅಲೆದಾಡುತ್ತಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ.


">January 19, 2025

ಇನ್ನು ಕೆಲವರು ಇದರಂತಹ ಅದ್ಭುತ ಬ್ಯುಸಿನೆಸ್ ಇನ್ನೊಂದು ಇಲ್ಲ. ಹೂಡಿಕೆ ಇಲ್ಲಾ, ಕೆಲಸ ಮಾಡಬೇಕು ಎಂಬ ಧಾವಂತವಿಲ್ಲ, ಸೆಕ್ಯೂರಿಟಿಯ ಬಗ್ಗೆ ಚಿಂತೆಯಿಲ್ಲ.ಒತ್ತಡವಿಲ್ಲ. ಜೀವನ ಪೂರ್ತಿ ಮಜವೋ ಮಜ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮಧ್ಯವರ್ಗದ ಜನರ ಬದುಕಿಗಿಂತ ಭಿಕ್ಷಕರ ಬದುಕೇ ಸಾವಿರ ಪಾಲು ಮೇಲು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment