newsfirstkannada.com

ಅಬ್ಬಾ.. ಭಿಕ್ಷೆ ಬೇಡಿಯೇ 2 ಪ್ಲೋರ್ ಮನೆ, ಹೊಲ, ಬೈಕ್ ಖರೀದಿಸಿದ ಮಹಿಳೆ! ಈಕೆಯ ಆಸ್ತಿ ಎಷ್ಟು ಗೊತ್ತಾ?

Share :

Published February 13, 2024 at 1:27pm

    ಕೇವಲ 45 ದಿನಗಳಲ್ಲಿ ಈಕೆಯ ಸಂಪಾದನೆ ಕೇಳಿ ಅಧಿಕಾರಿಗಳು ಶಾಕ್

    ಭಿಕ್ಷೆ ಬೇಡುವಾಗ ಅಧಿಕಾರಿಗಳ ಕೈಗೆ ತಗ್ಲಾಕಿಕೊಂಡ ಇಂದಿರಾಬಾಯಿ

    ಭಿಕ್ಷಾಟನೆಯಿಂದ ಕುಟುಂಬ ನಿರ್ವಹಣೆ ಜೊತೆ ಲಕ್ಷ.. ಲಕ್ಷ ಸಂಪಾದನೆ

ಭೋಪಾಲ್​: ಸ್ವಂತ ಮಕ್ಕಳನ್ನೇ ಭಿಕ್ಷಾಟನೆಗೆ ದೂಡಿದ ಆಧಾರದ ಮೇಲೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಮಹಿಳೆಯೊಬ್ಬರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಲಾಗಿದೆ. ಆದರೆ ವಿಚಾರಣೆ ವೇಳೆ ಆ ಮಹಿಳೆಯ ಆಸ್ತಿ, ಸಂಪಾದನೆ ಕೇಳಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಭಿಕ್ಷಾಟನೆ ಮಾಡಿಯೇ ಕೇವಲ 6 ವಾರಗಳಲ್ಲಿ ಎರಡೂವರೆ ಲಕ್ಷ ರೂಪಾಯಿ ಸಂಪಾದಿಸಿದ್ದಾಳೆ ಎಂದರೆ ಇನ್ನು ಎಷ್ಟು ಆಸ್ತಿ ಮಾಡಿರಬಹುದು ಎಂಬುದು ಇಲ್ಲಿನ ಕುತೂಹಲವಾಗಿದೆ.

ಇಂದೋರ್​ ನಗರದ ಇಂದಿರಾಬಾಯಿ ಎನ್ನುವ ಮಹಿಳೆ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ಫೆ.9 ರಂದು ಭಿಕ್ಷಾಟನೆ ಮಾಡುವಾಗ ಮಗಳೊಂದಿಗೆ ಅಧಿಕಾರಿಗಳ ಕೈಗೆ ತಗ್ಲಾಕಿಕೊಂಡಿದ್ದಳು. ಆದರೆ ಈ ವೇಳೆ ಗಂಡ ಹಾಗೂ ಇನ್ನಿಬ್ಬರು ಮಕ್ಕಳು ಓಡಿ ಹೋಗಿದ್ದಾರೆ. ಇದೀಗ ತಾಯಿ ಜೊತೆ ಸಿಕ್ಕಿದ್ದ 7 ವರ್ಷದ ಮಗಳನ್ನು ಎನ್​​ಜಿಒವೊಂದಕ್ಕೆ ಒಪ್ಪಿಸಲಾಗಿದೆ. ಈಕೆಗೆ 5 ಮಕ್ಕಳಿದ್ದು ಎಲ್ಲರನ್ನ ಭಿಕ್ಷೆ ಬೇಡುವಂತೆ ಒತ್ತಾಯ ಮಾಡುತ್ತಿದ್ದಳು. ಹೀಗಾಗಿಯೇ ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವರ್ಷಕ್ಕೆ 20 ಕೋಟಿ ರೂ.ಗಳ ಆದಾಯ

ಇಂದಿರಾಬಾಯಿ ಸಾಮಾನ್ಯವಾದ ಮಹಿಳೆಯೇನು ಅಲ್ಲ. ಕೇವಲ ಭಿಕ್ಷಾಟನೆಯಿಂದಲೇ ಕುಟುಂಬ ನಿರ್ವಹಣೆ ಜೊತೆ ಲಕ್ಷ.. ಲಕ್ಷ ಸಂಪಾದನೆ ಮಾಡುತ್ತಾಳೆ. ತನ್ನ ಹುಟ್ಟೂರಾದ ರಾಜಸ್ಥಾನದ ಕೋಟಾದಲ್ಲಿ 2 ಹಂತಸ್ತಿನ ಮನೆ ಕಟ್ಟಿಕೊಂಡಿದ್ದಾಳೆ. ವ್ಯವಸಾಯ ಮಾಡಲು ಜಮೀನು ಖರೀದಿಸಿದ್ದಾಳೆ. ಗಂಡನಿಗೆ ಬೈಕ್​, ಸ್ಮಾರ್ಟ್​ ಫೋನ್ ಕೊಡಿಸಿದ್ದಾಳೆ. ಅಲ್ಲದೇ ತಾನು 20 ಸಾವಿರ ಮೌಲ್ಯದ ಮೊಬೈಲ್​ ಅನ್ನು ಬಳಸುತ್ತಿದ್ದಾಳೆ. ಕೇವಲ 45 ದಿನಗಳಲ್ಲಿ 2 ಲಕ್ಷದ 50 ಸಾವಿರ ರೂ.ಗಳನ್ನ ಸಂಪಾದನೆ ಮಾಡಿದ್ದಾಳೆ. ಯಾಕೆ ಭಿಕ್ಷೆ ಬೇಡುತ್ತೀಯಾ ಎಂದು ಇಂದಿರಾಳನ್ನು ಪ್ರಶ್ನೆ ಮಾಡಿದ್ರೆ, ಹಸಿವಿನಿಂದ ನರಳುವುದಕ್ಕಿಂತ, ಕಳ್ಳತನ ಮಾಡುವುದಕ್ಕಿಂತ ಭಿಕ್ಷೆ ಬೇಡುವುದೇ ಒಳ್ಳೆಯದು ಎಂದು ಉತ್ತರಿಸುತ್ತಾಳೆ. ಇನ್ನು ಅಧಿಕಾರಿಗಳು ಇಂದೋರ್​ ನಗರದಲ್ಲಿ ಇಲ್ಲಿವರೆಗೆ 7 ಸಾವಿರ ಭಿಕ್ಷುಕರನ್ನು ವಶಕ್ಕೆ ಪಡೆದುಕೊಂಡಿದ್ದು ಇದರಲ್ಲಿ ಶೇ.50 ರಷ್ಟು ಮಕ್ಕಳಿದ್ದಾರೆ. ಇವರು ವರ್ಷಕ್ಕೆ 20 ಕೋಟಿ ರೂಗಳನ್ನು ಆದಾಯ ಗಳಿಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇವಾಲಯಕ್ಕೆ ಒಂದು ದಿನಕ್ಕೆ 1.75 ಲಕ್ಷ ಭಕ್ತರು ಬರ್ತಾರೆ!

ಇಂದೋರ್​ನ ಲವ-ಕುಶ ವೃತ್ತದಲ್ಲಿ ತನ್ನ ಹಿರಿಯ ಮಕ್ಕಳನ್ನ, ಮಹಾಕಾಲ್ ದೇವಸ್ಥಾನದಿಂದ ಉಜ್ಜಯಿನಿ ಕಡೆಗೆ ಹೋಗುವ ಮಾರ್ಗದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆಂದು ತಾನೆ ಇರುತ್ತಾಳೆ. ಮಹಾಕಾಲ್ ದೇವಾಲಯ ನಿರ್ಮಾಣಕ್ಕಿಂತ ಮೊದಲು ದಿನಕ್ಕೆ 2ವರೆ ಸಾವಿರ ಭಕ್ತರು ಬರುತ್ತಿದ್ದರು. ಆದರೆ ದೇವಾಲಯ ನಿರ್ಮಾಣವಾದ ಮೇಲೆ 1.75 ಲಕ್ಷ ಭಕ್ತರು ಒಂದು ದಿನಕ್ಕೆ ಬರುತ್ತಾರೆ. ಹೀಗಾಗಿ ಏಕಾಏಕಿ ಸಂಪಾದನೆ ಹೆಚ್ಚಾಗಿದೆ ಎಂದು ಸ್ವತಹ ಇಂದಿರಾ ಹೇಳಿದ್ದಾಳೆ.

ಫೆ.9 ರಂದು ಇಂದಿರಾಳನ್ನು ಸೆರೆ ಹಿಡಿದಾಗ ಅವಳ ಬಳಿ 19,600 ರೂಪಾಯಿ ಹಾಗೂ ಮಗಳ ಬಳಿ 600 ರೂಪಾಯಿ ಪತ್ತೆಯಾಗಿದೆ. ಬಂಧನಕ್ಕೂ ಮುನ್ನಾ 45 ದಿನಗಳಲ್ಲಿ 2 ಲಕ್ಷ 50 ಸಾವಿರ ಸಂಪಾದನೆಯಾಗಿದೆ. ಭಿಕ್ಷಾಟನೆಯಿಂದಲೇ ಹೊಲ, ಮನೆ, ಟಿವಿ, ಫೋನ್, ಬೈಕ್ ಎಲ್ಲ ಖರೀದಿ ಮಾಡಿರುವುದಾಗಿ ಅಧಿಕಾರಿಗಳ ಬಳಿ ಹೇಳಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಭಿಕ್ಷೆ ಬೇಡಿಯೇ 2 ಪ್ಲೋರ್ ಮನೆ, ಹೊಲ, ಬೈಕ್ ಖರೀದಿಸಿದ ಮಹಿಳೆ! ಈಕೆಯ ಆಸ್ತಿ ಎಷ್ಟು ಗೊತ್ತಾ?

https://newsfirstlive.com/wp-content/uploads/2024/02/MP_INDORE_WOMEN.jpg

Load More