/newsfirstlive-kannada/media/post_attachments/wp-content/uploads/2024/04/GOA_DEATH.jpg)
ಪಣಜಿ: ಕೆಲವು ದಿನಗಳಿಂದ ಊಟ ಮಾಡದೇ ದಿನಕ್ಕೆ ಒಂದೇ ಒಂದು ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ಅಪೌಷ್ಟಿಕತೆಯಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಗೋವಾದ ಮರ್ಗಾವ್​​ನಲ್ಲಿ ನಡೆದಿದೆ. ಮೃತರ ತಾಯಿ ಕೂಡ ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ರಾಡ್‌ನಿಂದ ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ.. ವೋಟಿಂಗ್ ಮುಗೀತಿದ್ದಂತೆ ಹಾಸನ ಜಿಲ್ಲೆಯಲ್ಲಿ ಏನಾಯಿತು?
ಮೃತರನ್ನು ಎಂಜಿನಿಯರ್ ಮೊಹಮ್ಮದ್ ಜುಬೇರ್ ಖಾನ್ (29) ಸಹೋದರ ಅಫಾನ್ ಖಾನ್ (27) ಎಂದು ಗುರುತಿಸಲಾಗಿದೆ. ತಾಯಿ ರುಕ್ಸಾನಾ ಖಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಆರ್ಥಿಕವಾಗಿ ಚೆನ್ನಾಗಿದ್ದು ಬಟ್ಟೆ ವ್ಯಾಪಾರಿಗಳಾಗಿದ್ದರು. ಅಲ್ಲದೇ ಮೊಹಮ್ಮದ್ ಜುಬೇರ್ ಖಾನ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ರೆ, ಸಹೋದರ ಅಫಾನ್ ಬಿಕಾಂ ಪದವೀದರ ಆಗಿದ್ದರು. ಆದರೆ ಉಪವಾಸದ ಬಗ್ಗೆ ಸರಿಯಾದ ಅರಿವು ಇರಲಿಲ್ಲ ಎನ್ನಲಾಗಿದೆ. ದಿನಕ್ಕೆ ಒಂದೇ ಒಂದು ಖರ್ಜೂರ ತಿನ್ನುತ್ತಿದ್ದರು. ಇದು ಅಪೌಷ್ಟಿಕತೆಗೆ ಕಾರಣವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಉಪವಾಸದ ಬಗ್ಗೆ ಭಿನ್ನಾಭಿಪ್ರಾಯ ಇದ್ದಿದ್ದರಿಂದ ಇವರ ತಂದೆ ಬೇರೆಯಾಗಿ ವಾಸಿಸುತ್ತಿದ್ದರು. ಸಂಬಂಧಿಯೊಬ್ಬರು ಕೆಲಸದ ನಿಮಿತ್ತ ಅವರ ಮನೆಗೆ ಭೇಟಿ ನೀಡಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಒಳಗಿನಿಂದ ಮನೆಗೆ ಲಾಕ್ ಮಾಡಿದ್ದರು. ಒಂದು ಕೋಣೆಯಲ್ಲಿ ಒಂದು ಶವ ಇನ್ನೊಂದು ರೂಮ್​ನಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ಹಾಸಿಗೆಯ ಮೇಲೆ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಮನೆಯಲ್ಲಿ ಯಾವುದೇ ಆಹಾರ ಅಥವಾ ನೀರು ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನಿಯಮಿತವಾಗಿ ಉಪವಾಸ ಮತ್ತು ಅನಿಯಮಿತ ಆಹಾರ ಪದ್ಧತಿ ಅವರಲ್ಲಿ ಇದ್ದಿದ್ದರಿಂದ ತೀವ್ರ ಕ್ಯಾಚೆಕ್ಸಿಯಾ ಮತ್ತು ಅಪೌಷ್ಟಿಕತೆ (severe cachexia and malnourishment)ಯಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us