/newsfirstlive-kannada/media/post_attachments/wp-content/uploads/2025/06/DK.jpg)
17 ವರ್ಷ ತಂಡದ ಆಟಗಾರರು ಬದಲಾದರು, ಕೋಚ್ಗಳು ಬದಲಾದರು ಹಣೆ ಬರಹ ಕಿಂಚಿತ್ತು ಬದಲಾಗಿರಲಿಲ್ಲ. ಕಪ್ ಗೆಲ್ಲೋ ಕನಸು ಕನಸಾಗಿಯೇ ಉಳಿದಿತ್ತು. ಇದೀಗ ಈ ಎಲ್ಲವೂ ಬದಲಾಗಿದೆ. ಇದಕ್ಕೆ ಕೇವಲ ಆಟಗಾರರ ಮಾತ್ರವೇ ಕಾರಣವಲ್ಲ. ತೆರೆ ಹಿಂದಿನ ಈ ಸೂತ್ರದಾರನೂ ಕಾರಣ. ಈತನಿದಲ್ಲಿ ಕಪ್ ಗೆಲ್ಲೋದು ಫಿಕ್ಸ್!
ಆ್ಯಂಡಿ ಫ್ಲವರ್.. ಆರ್ಸಿಬಿ ಹೆಡ್ ಕೋಚ್ ಮಾತ್ರವಲ್ಲ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಸೀಬು ಬದಲಿಸಿದ ಲೆಜೆಂಡ್. 2023 ಆಗಸ್ಟ್ 4.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಆಗಿ ನಾಮಕರಣವಾದ ದಿನ. ಈತನ ಎಂಟ್ರಿಯೊಂದಿಗೆ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಶುರುವಾಗಿದ್ದೆ ಹೊಸ ಪರ್ವ. ಸೀಸನ್-17ರಲ್ಲಿ ರಣರಂಗಕ್ಕಿಳಿದ ಆ್ಯಂಡಿ ಫ್ಲವರ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆರಂಭದಲ್ಲಿ ವೈಫಲ್ಯ ಅನುಭವಿಸಿದರೂ ನಂತರ ರಾಯಲ್ ಆಟವಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ಗೆ ಎಂಟ್ರಿ ನೀಡ್ತು. ಈ ವರ್ಷ ಆ ರೀತಿ ಆಗಲು ಆ್ಯಂಡಿ ಫ್ಲವರ್ ಬಿಡಲಿಲ್ಲ.
ಇದನ್ನೂ ಓದಿ: ಕೊಹ್ಲಿಯ ಈ ನಡೆ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್.. ಘಟನೆ ನಡೆದ 2 ದಿನದಲ್ಲೇ ಇಂಥ ನಿರ್ಧಾರ ಯಾಕೆ?
ಆ್ಯಂಡಿ ಫ್ಲವರ್ ಇದ್ದಲ್ಲಿ ಟ್ರೋಫಿಗೆ ಬರವೇ ಇಲ್ಲ
ಆ್ಯಂಡಿ ಫ್ಲವರ್, ಮೂಲತಃ ಜಿಂಬಾಬ್ವೆಯವರೇ ಆಗಿದ್ರೂ ಕ್ರಿಕೆಟ್ ಎಂಬ ಜಂಟಲ್ಮ್ಯಾನ್ ಗೇಮ್ನ ಚತುರ ಅನ್ನೋದರಲ್ಲಿ ಎರಡು ಮಾತಿಲ್ಲ. ಎದುರಾಳಿ ಚಾಕಚಕ್ಯತೆಯನ್ನ ಅರೆಯುವಲ್ಲಿ ನಿಸ್ಸೀಮನಾಗಿರುವ ಫ್ಲವರ್, ಕೋಚ್ ಆಗಿ ತಂಡಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನೇ ವಹಿಸಿದ್ದಾರೆ. ಇದಕ್ಕೆಲ್ಲಾ ಬೆಸ್ಟ್ ಎಕ್ಸಾಂಪಲ್ ಆ್ಯಂಡಿ ಫ್ಲವರ್ ಟ್ರ್ಯಾಕ್ ರೆಕಾರ್ಡ್.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ತಂಡಗಳ ಪರ ಕೆಲ್ಸ ಮಾಡಿರುವ ದಿಗ್ಗಜ ಫ್ಲವರ್, 2008ರಿಂದ 2014ರವರೆಗೆ ಇಂಗ್ಲೆಂಡ್ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ವಿಶ್ವಕಪ್ ಗೆಲ್ಲದ ಕೊರಗಿನಲ್ಲಿದ್ದ ಕ್ರಿಕೆಟ್ ಜನಕರಿಗೆ, 2010ರಲ್ಲಿ T20 ವಿಶ್ವಕಪ್ ಗೆಲ್ಲಿಸಿಕೊಟ್ಟರು.
ಕೇವಲ ಇಂಗ್ಲೆಂಡ್ ತಂಡದ ಮಾರ್ಗದರ್ಶಕರಾಗಿ ಮಾತ್ರವೇ ಆ್ಯಂಡಿ ಸಕ್ಸಸ್ ಕಂಡಿಲ್ಲ. ಪ್ರತಿ ಲೀಗ್ಗಳಲ್ಲೂ ಸಕ್ಸಸ್ ಕಂಡಿದ್ದಾರೆ. ಒಂದು ಮಾತಲ್ಲಿ ಹೇಳುವುದಾದ್ರೆ ಆ್ಯಂಡಿ ಫ್ಲವರ್ ಇದ್ದಲ್ಲಿ, ಟ್ರೋಫಿಗೆ ಬರ ಎಲ್ಲಿ ಅಂತಾನೇ ಹೇಳಬೇಕು. ಕೋಚ್ ಆ್ಯಂಡಿ ಫ್ಲವರ್ ಮಾರ್ಗದರ್ಶನದ ಅಡಿ ಸಾಲು ಸಾಲು ಕಪ್ಗಳಿಗೆ ಟೀಮ್ಗಳು ಮುತ್ತಿಟ್ಟಿದ್ದೇ ಆಗಿದೆ.
ಆ್ಯಂಡಿ ಫ್ಲವರ್ ಗೆದ್ದಿರುವ T20 ಲೀಗ್ಸ್
2021ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆ್ಯಂಡಿ ಮಾರ್ಗದರ್ಶನದಲ್ಲಿ ಮುಲ್ತಾನ್ ಸುಲ್ತಾನ್ ಚಾಂಪಿಯನ್ ಆಗಿದೆ. 2022ರಲ್ಲಿ ಇಂಗ್ಲೆಂಡ್ನ ದಿ ಹಂಡ್ರೆಡ್ ಲೀಗ್‌ನಲ್ಲಿ ಟ್ರೆಂಟ್ ರಾಕೆಟ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2023ರ ಇಂಟರ್ನ್ಯಾಷನಲ್ ಲೀಗ್‌ನಲ್ಲಿ ಗಲ್ಫ್ ಜೈಂಟ್ಸ್ ಚಾಂಪಿಯನ್ ಪಟ್ಟಕ್ಕೆ ಮುತ್ತಿಟ್ಟಿತ್ತು. 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಪಟ್ಟಕ್ಕೇರಿತ್ತು.
ಇದನ್ನೂ ಓದಿ: ಹೃದಯಗೆದ್ದ ಕನ್ನಡಿಗರು.. ಐಪಿಎಲ್ನಲ್ಲಿ ಕರ್ನಾಟಕ ಪ್ಲೇಯರ್ಗಳದ್ದೇ ಪರಾಕ್ರಮ..!
2020, 2021 ಕೆರಿಬಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಆ್ಯಂಡಿ ಫ್ಲವರ್ ಮಾರ್ಗದರ್ಶನದ ಸೇಂಟ್ ಲೂಸಿಯಾ, ಸತತ 2 ವರ್ಷ ರನ್ನರ್ ಆಫ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. 2022, 2023ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮುಲ್ತಾನ್ ಸುಲ್ತಾನ್ ರನ್ನರ್ಸ್ ಆಗಿತ್ತು.
ಅಬುದಾಬಿಯ ಟಿ10 ಲೀಗ್‌ನಲ್ಲಿ ಮರಾಠಾ ಅರೇಬಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಸಾಧನೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಪರವೂ ಕೆಲಸ ಮಾಡಿರುವ ಫ್ಲವರ್, ಟೆಸ್ಟ್ ಹಾಗೂ ಏಕದಿನ ಮಾದರಿಯ ಕ್ರಿಕೆಟನಲ್ಲೂ ಅಪಾರ ಸಾಧನೆ ಮಾಡಿದ್ದಾರೆ. 2009, 2010/11, 2013ರ ಆ್ಯಶಸ್ ಟೆಸ್ಟ್ ಸರಣಿಗಳಲ್ಲಿ ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿಯಾಗಿದ್ದ ಆ್ಯಂಡಿ, 2023ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, 2023ರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸಪೋರ್ಟ್ ಸ್ಟಾಫ್ ಆಗಿದ್ರು.
ಐಪಿಎಲ್ನಲ್ಲೂ ಚಾಫು ಮೂಡಿಸಿದ್ದ ಆ್ಯಂಡಿ
2020 ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆಗಿ ಎಂಟ್ರಿ ನೀಡಿದ್ದ ಆ್ಯಂಡಿ ಫ್ಲವರ್, 2 ವರ್ಷಗಳ ಕಾಲ ಪಂಜಾಬ್ ತಂಡದಲ್ಲಿದ್ರು. ಆ ಬಳಿಕ 2022, 2023ರಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ತಂಡದ ಕೋಚ್ ಕಾರ್ಯ ನಿರ್ವಹಿಸಿದರು. ಪ್ಲೇ ಆಫ್ಗೂ ತಂಡವನ್ನು ಕೊಡೊಂಯ್ದಿದ್ದರು. ಈ ನಂತರ ಆರ್ಸಿಬಿ ಸೇರಿದ ಆ್ಯಂಡಿ ಸೀಸನ್-17ರಿಂದ ಬಲಿಷ್ಠ ಆರ್ಸಿಬಿ ತಂಡ ಕಟ್ಟುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದರು. ಅದಕ್ಕೆ ತಕ್ಕಂತೆಯೇ ಮೆಗಾ ಹರಾಜಿನಲ್ಲಿ ತಂಡವನ್ನು ಕಟ್ಟಿದರು. ವಿದೇಶಿಗರನ್ನೇ ಹೆಚ್ಚು ನಂಬಿಕೊಳ್ತಿದ್ದ ಆರ್ಸಿಬಿಗೆ ಇಂಡಿಯನ್ ಫ್ಲೇವರ್ ನೀಡಿದರು. ಇದು ಸಹಜವಾಗಿಯೇ ಆರ್ಸಿಬಿಯನ್ನು ಮತ್ತಷ್ಟು ಬಲಿಷ್ಠವಾಗಿಸಿತ್ತು. 18 ವರ್ಷಗಳ ಕೊರಗಿಗೆ ನೋವಿಗೆ ಬ್ರೇಕ್ ಬೀಳುವಂತೆ ಮಾಡ್ತು.
ಇದನ್ನೂ ಓದಿ: ಗೋಯೆಂಕ ಮತ್ತೆ ಗರಂ.. ಪಂತ್ ಒಬ್ಬರೇ ಅಲ್ಲ LSGಯಲ್ಲಿ ಮೂವರ ತಲೆದಂಡ ಪಕ್ಕಾ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ