ಸಾಹುಕಾರ್ ದೆಹಲಿ ಪ್ರವಾಸದ ಗುಟ್ಟು ರಟ್ಟು.. ಹೈಕಮಾಂಡ್​ ಮುಂದೆ ಇಟ್ಟ ಬೇಡಿಕೆಗಳು ಏನೇನು?

author-image
Ganesh
Updated On
ಸಾಹುಕಾರ್ ದೆಹಲಿ ಪ್ರವಾಸದ ಗುಟ್ಟು ರಟ್ಟು.. ಹೈಕಮಾಂಡ್​ ಮುಂದೆ ಇಟ್ಟ ಬೇಡಿಕೆಗಳು ಏನೇನು?
Advertisment
  • ಸಿದ್ದರಾಮಯ್ಯರನ್ನ ಬದಲಿಸಿದ್ರೆ ಸರ್ಕಾರ ಉಳಿಯೋದು ಡೌಟು!
  • ಡಿ.ಕೆ. ಶಿವಕುಮಾರ್ ಸಿಎಂ ಆದ್ರೆ ಸರ್ಕಾರ ಉಳಿಯುವುದಿಲ್ಲ
  • ಯಾರ ಒತ್ತಡಕ್ಕೂ ಮಣಿಯದೆ ಬದಲಾವಣೆಗೆ ಕೈಹಾಕಬೇಡಿ

ಕಾಂಗ್ರೆಸ್​ನಲ್ಲಿ ಸಿಎಂ ಸೀಟ್​ಗಾಗಿ ನಡೀತಿರುವ ಶೀತಲ ಸಮರ ಕುತೂಹಲ ಘಟ್ಟಕ್ಕೆ ತಲುಪಿದೆ. ನವೆಂಬರ್​​ ಕ್ರಾಂತಿ ಅನ್ನೋ ಚರ್ಚೆ ನಡುವೆ ಹೈಕಮಾಂಡ್ ಮುಂದೆ ಸತೀಶ್​ ಜಾರಕಿಹೊಳಿ ಸಿಎಂ ಬದಲಾವಣೆಗೆ ಕೈ ಹಾಕದಂತೆ ಒತ್ತಾಯ ಮಾಡಿದ್ದಾರೆ ಅನ್ನೋದು ಕಾಂಗ್ರೆಸ್​ ಮೂಲಗಳಿಂದ ತಿಳಿದು ಬಂದಿದೆ.

ಡಿಕೆಶಿ ಸಿಎಂ ಆಗ್ಬಾರ್ದು ಅಂದ್ರಾ ಜಾರಕಿಹೊಳಿ?

ಸಿದ್ದರಾಮಯ್ಯರನ್ನ ಬಿಟ್ರೆ ಬೇರೆಯವರು ಸಿಎಂ ಸ್ಥಾನ ನಿಭಾಯಿಸೋದು ಕಷ್ಟ. ಒಂದ್ವೇಳೆ ಡಿ.ಕೆ. ಶಿವಕುಮಾರ್ ಸಿಎಂ ಆದ್ರೆ ಸರ್ಕಾರ ಉಳಿಯುವುದಿಲ್ಲ. ಸರ್ಕಾರ ಬಲಿಯಾಗುವುದು ನಿಶ್ಚಿತ. ಯಾಕಂದ್ರೆ ಬಹುತೇಕ ಶಾಸಕರ ಒಲವು ಸಿಎಂ ಸಿದ್ದರಾಮಯ್ಯರ ಮೇಲಿದೆ. ಹೀಗಾಗಿ ಡಿಕೆಶಿಗೆ ನೀಡಿದಲ್ಲಿ ಸರ್ಕಾರ ಉಳಿಯುವುದು ಕನಸಿನ ಮಾತು. ಸದ್ಯ ಯಾವುದೇ ಗೊಂದಲವಿಲ್ಲದಂತೆ ಸಿದ್ದರಾಮಯ್ಯ ಸರ್ಕಾರವನ್ನ ನಡೆಸ್ತಿದ್ದಾರೆ. ಹೀಗಾಗಿ ಯಾರ ಒತ್ತಡಕ್ಕೂ ಮಣಿಯದೆ ಬದಲಾವಣೆಗೆ ಕೈಹಾಕಬೇಡಿ. ಸಿದ್ದರಾಮಯ್ಯನವರೇ ಮುಂದುವರಿಯುವುದು ಸೂಕ್ತ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: CM ಸ್ಥಾನಕ್ಕಾಗಿ RAC ಟಿಕೆಟ್, ಟ್ರಾಫಿಕ್ ಜಾಮ್ ಆದ್ರೆ ನಂಗೂ ಸಿಗಬಹುದು- ದೆಹಲಿ ಭೇಟಿ ಬೆನ್ನಲ್ಲೇ ಸತೀಶ್ ನಿಗೂಢ ಹೇಳಿಕೆ

publive-image

ಕೆಪಿಸಿಸಿ ಅಧ್ಯಕ್ಷರನ್ನ ಬದಲಿಸುವಂತೆ ಸಾಹುಕಾರ್ ಪಟ್ಟು

ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡದಂತೆ ಹೈಕಮಾಂಡ್​ ಬಳಿ ಒತ್ತಾಯಿಸಿರುವ ಸತೀಶ್​ ಜಾರಕಿಹೊಳಿ, ಕೆಪಿಪಿ ಅಧ್ಯಕ್ಷರನ್ನು ಬದಲಿಸುವಂತೆ ಕೆ.ಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆಗೆ ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಪಟ್ಟಕ್ಕಾಗಿ ಪಟ್ಟು!

3 ವರ್ಷಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ಹೀಗಾಗಿ ರಾಜ್ಯದಲ್ಲಿ ಇನ್ನು ಮುಂದೆ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಈಗಿಂದಲೇ ಪಕ್ಷ ಸಂಘಟನೆ ಪರಿಣಾಮಕಾರಿಯಾಗಿ ಆಗಬೇಕು. ಡಿ.ಕೆ. ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದಾರೆ. ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿದ್ದಾರೆ. ಆದ್ದರಿಂದ ಕೆಪಿಸಿಸಿ ಸಾರಥ್ಯ ಪರಿಣಾಮಕಾರಿಯಾಗಿ ನಿಭಾಯಿಸಲು ಆಗ್ತಿಲ್ಲ. ಇದರಿಂದಾಗಿ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರುತ್ತಿದೆ. ಪಕ್ಷ ಸಂಘಟನೆ ಆಗದ ಕಾರಣ ಕಾರ್ಯಕರ್ತರಲ್ಲಿ ಬೇಸರವಿದೆ. ಹೀಗಾಗಿ ಅಧ್ಯಕ್ಷರನ್ನ ಬದಲಿಸಿ ಎಂದು ಒತ್ತಿ ಹೇಳಿದ್ದಾರೆ. ನೀವು ಅಧ್ಯಕ್ಷ ಸ್ಥಾನಕ್ಕೆ ಯಾರಿಗಾದರೂ ಅವಕಾಶ ನೀಡಿ, ನನಗೆ ಅಧ್ಯಕ್ಷ ಸ್ಥಾನ ನೀಡಿ ಎಂದು ಪರೋಕ್ಷವಾಗಿ ಕೆಪಿಸಿಸಿ ಕುರ್ಚಿ ಮೇಲೆ ಟೆವಲ್​ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

publive-image

ಒಟ್ಟಾರೆ.. ನವೆಂಬರ್​​ ಕ್ರಾಂತಿ ಅನ್ನೋ ಚರ್ಚೆ ನಡುವೆ ಸತೀಶ್​ ಹೂಡ್ತಿರುವ ತಂತ್ರಗಾರಿಕೆ ಮಾತ್ರ ಅನುಮಾನದ ಕಣ್ಣುಗಳಿಗೆ ಚಮಕ್​ ಅಂತು ನೀಡ್ತಿದೆ.. ಕಾಂಗ್ರೆಸ್​ನಲ್ಲಿ ಶಿಂಧೆ ಪಾತ್ರ ನಿರ್ವಹಣೆ ಇಲ್ಲ ಎಂದಿರುವ ಬೆಳಗಾವಿ ಸಾಹುಕಾರ್​, ಅಧ್ಯಕ್ಷ ಆಗೋದು ಸಿಎಂ ಆಗೋದು ಇಲ್ಲೇ ಅಂತ ಮಾರ್ಮಿಕವಾಗಿ ನುಡಿದಿರೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಹನಿಟ್ರ್ಯಾಪ್ ಆಗಿಲ್ಲ, ಸುಪಾರಿ ಪಡೆದು ಕೊಲೆಯತ್ನ -ಪೆನ್​ಡ್ರೈ ಸಮೇತ ದೂರು ಕೊಟ್ಟ ರಾಜಣ್ಣ ಪುತ್ರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment