newsfirstkannada.com

ರೋಹಿತ್​ಗೆ ಬೇಕಿತ್ತು ಪಂತ್.. ರಾಹುಲ್​ಗೆ ಚಾನ್ಸ್​ ಸಿಕ್ಕಿರುವ ಹಿಂದಿದೆ ಓರ್ವ ಸೂತ್ರಧಾರನ ಕೈವಾಡ..!

Share :

Published August 3, 2024 at 2:15pm

    ಶ್ರೀಲಂಕಾ ವಿರುದ್ಧದ ಮೊದಲ ODIನಲ್ಲಿ KL ರಾಹುಲ್

    ರಾಹುಲ್ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆದಿರುವ ಬಗ್ಗೆ ಚರ್ಚೆ

    ಪಂತ್ vs ರಾಹುಲ್ ಬೇಕು ಅನ್ನೋ ವಾದದಲ್ಲಿ ಗೆದ್ದಿದ್ದು ಯಾರು?

ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದ ಅಂತ್ಯದ ಬೆನ್ನಲ್ಲೇ ಹೆಡ್ ಕೋಚ್ ಗೌತಮ್ ಗಂಭೀರ್ ಟೀಮ್ ಇಂಡಿಯಾದ ರಿಯಲ್ ಬಾಸ್​ ಆಗ್ಬಿಟ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಶ್ರೀಲಂಕಾ ಎದುರಿನ ಏಕದಿನ ಪಂದ್ಯದ ಪ್ಲೇಯಿಂಗ್​ ಇಲೆವೆನ್​​ ಆಯ್ಕೆ. ಕ್ಯಾಪ್ಟನ್​ ರೋಹಿತ್​ ಮಾತಲ್ಲ, ಕೋಚ್​ ಗಂಭೀರ್​ ಮಾತೇ ಟೀಮ್​ ಇಂಡಿಯಾದಲ್ಲಿ ವೇದ ವಾಕ್ಯವಾದಂತಿದೆ.

ರಿಷಭ್​​ ಪಂತ್ ವರ್ಸಸ್ ಕೆ.ಎಲ್.ರಾಹುಲ್​. ಇಬ್ಬರಲ್ಲಿ ಯಾರು ವಿಕೆಟ್ ಕೀಪರ್ ಆಗಿ ಆಡ್ತಾರೆ ಅನ್ನೋ ಪ್ರಶ್ನೆ ಶ್ರೀಲಂಕಾ ಎದುರಿನ ಏಕದಿನ ಪಂದ್ಯಕ್ಕೂ ಮುನ್ನ ಸಖತ್​ ಸದ್ದು ಮಾಡಿತ್ತು. ಕ್ಯಾಪ್ಟನ್ ರೋಹಿತ್ ಶರ್ಮಾ ಅಂಡ್ ಗೌತಮ್ ಗಂಭೀರ್​ಗೂ ಈ ಒಂದು ಆಯ್ಕೆ ಬಿಗ್ ಟಾಸ್ಕ್ ಆಗಿತ್ತು. ಈ ಸೆಲೆಕ್ಷನ್​​​ ಜಟಾಪಟಿಯಲ್ಲಿ ಕೊನೆಗೆ ಗೆದ್ದಿದ್ದು ಮಾತ್ರ ಕನ್ನಡಿಗ ಕೆ.ಎಲ್.ರಾಹುಲ್.

ಇದನ್ನೂ ಓದಿ:ಒಂದೇ ವರ್ಷಕ್ಕೆ ಬೇಡವಾದ ಪಾಂಡ್ಯ.. ಮುಂಬೈ ಇಂಡಿಯನ್ಸ್​ನಿಂದ ಶಾಕಿಂಗ್ ನಿರ್ಧಾರ..!

ಹೌದು, ನಿನ್ನೆಯ ಪಂದ್ಯದಲ್ಲಿ ಫಸ್ಟ್ ಚಾಯ್ಸ್​ ವಿಕೆಟ್ ಕೀಪರ್​ ರಿಷಭ್​ ಪಂತ್​ರನ್ನೇ ಓವರ್ ಟೇಕ್ ಮಾಡಿದ ಕೆ.ಎಲ್.ರಾಹುಲ್, ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡರು. ಇದರ ಹಿಂದಿನ ಸೂತ್ರಧಾರಿ ಹೆಡ್ ಕೋಚ್ ಗೌತಮ್ ಗಂಭೀರ್​​​​​​​​​​..

ಗಂಭೀರ್​​ಗೆ ಬೇಕು ರಾಹುಲ್​..
ಕೆ.ಎಲ್.ರಾಹುಲ್ ಆ್ಯಂಡ್ ರಿಷಭ್ ಪಂತ್​ ನಡುವಿನ ಮೆಗಾ ಫೈಟ್​ ಆಯ್ಕೆ ಕಷ್ಟಕರವಾಗಿತ್ತು ನಿಜ. ಈ ಕಷ್ಟಕರ ಆಯ್ಕೆಯಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್, ಕೆ.ಎಲ್.ರಾಹುಲ್​ ಪರವಾಗಿ ನಿಂತರೆ. ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್ ಪರವಾಗಿ ವಕಾಲತ್ತು ವಹಿಸಿದ್ದರು. ಟಿ20 ವಿಶ್ವಕಪ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್​ ನೀಡಿದ್ದ ರಿಷಭ್ ಪಂತ್, ಅಟ್ಯಾಕಿಂಗ್ ಮೈಂಡ್​ಸೆಟ್ ಪ್ಲೇಯರ್. ಹೀಗಾಗಿ 5ನೇ ಕ್ರಮಾಂಕದಲ್ಲಿ ಗೇಮ್​ ಚೇಂಜರ್​​ ಪಂತ್​​ನ ಆಡಿಸೋ ಲೆಕ್ಕಚಾರ ರೋಹಿತ್​​​ದಾಗಿತ್ತು. ಇವರಿಬ್ಬರ ಜಗಳದಲ್ಲಿ ಬಡವಾಗಿದ್ದು ರಿಷಭ್ ಪಂತ್ . ಇದೇ ಉತ್ತರ ಮತ್ತೊಂದು ಸಂದೇಶವನ್ನೇ ನೀಡ್ತಿದೆ.

ಇದನ್ನೂ ಓದಿ:‘14 ಬಾಲ್​ಗೆ 1 ರನ್ ಬೇಕಿತ್ತು.. ಆದರೂ ಗೆಲ್ಲಲು ಆಗಲಿಲ್ಲ’ ರೋಹಿತ್ ಶರ್ಮಾ ಆಕ್ರೋಶ

ಕೆ.ಎಲ್.ರಾಹುಲ್ ಫಸ್ಟ್​ ಚಾಯ್ಸ್ ಕೀಪರ್?
​​​​​ರಿಷಭ್ ಪಂತ್ ಟೀಮ್ ಇಂಡಿಯಾದ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗಿದ್ದರು. ಆದ್ರೀಗ ಕೆ.ಎಲ್.ರಾಹುಲ್ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಎಂಬ ಸಂದೇಶ ಗಂಭೀರ್ ನೀಡಿದಂತಿದೆ. ಇದಕ್ಕೆ ಕಾರಣ ಪಂತ್ ಅಲಭ್ಯತೆಯಲ್ಲಿ ಏಷ್ಯಾಕಪ್ ಹಾಗೂ ವಿಶ್ವಕಪ್​ನಲ್ಲಿ ರಾಹುಲ್, ನೀಡಿದ್ದ ಉತ್ತಮ ಪ್ರದರ್ಶನವೇ ಆಗಿದೆ. ಹೀಗಾಗಿ ಮುಂದಿನ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲೂ ವಿಕೆಟ್ ಕೀಪರ್ ಹೊಣೆಗಾರಿಕೆ ಕೆ.ಎಲ್.ರಾಹುಲ್ ನೀಡುವ ಸಂದೇಶವೇ ಇದಾಗಿದ್ಯಾ ಎಂಬ ಅನುಮಾನ ಬರದೇ ಇರಲ್ಲ.

ಕನ್ನಡಿಗ ರಾಹುಲ್​​ಗೆ ಗಂಭೀರ್ ಸಂಪೋರ್ಟ್​ ಯಾಕೆ..?
ಕನ್ನಡಿಗ ಕೆ.ಎಲ್.ರಾಹುಲ್​ ಪರ ಹೆಡ್ ಕೋಚ್ ಗೌತಮ್ ಗಂಭೀರ್​ ಬ್ಯಾಟ್ ಬೀಸಲು ಕಾರಣ. ಕೆ.ಎಲ್.ರಾಹುಲ್​​​​ ಕಳೆದೊಂದು ವರ್ಷದಿಂದ ಏಕದಿನ ಫಾರ್ಮೆಟ್​ನಲ್ಲಿ ನೀಡ್ತಿರುವ ಪರ್ಫಾಮೆನ್ಸ್ ಮಾತ್ರವೇ ಅಲ್ಲ. ಐಪಿಎಲ್​ನ ಲಕ್ನೋ ಸೂಪರ್ ಜೈಂಟ್ಸ್​ ಫ್ರಾಂಚೈಸಿಯ ಕನೆಕ್ಷನ್ ಕೂಡ ಆಗಿದೆ. 2 ವರ್ಷಗಳ ಕಾಲ ಲಕ್ನೋ ಫ್ರಾಂಚೈಸಿಯ ಮೆಂಟರ್ ಆಗಿದ್ದ ಗೌತಮ್ ಗಂಭೀರ್, ಕೆ.ಎಲ್​.ರಾಹುಲ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಈ ಅವಧಿಯಲ್ಲಿ ಕೆ.ಎಲ್.ರಾಹುಲ್ ಅಂತ ಆಟಗಾರ ಲಕ್ನೋಗೆ ಸಿಕ್ಕಿದ್ದು ಅದೃಷ್ಟ ಎಂದು ಗುಣಗಾನ ಮಾಡಿದ್ದು ಇದೆ. ಇದೇ ಕನೆಕ್ಷನ್, ಟೀಮ್ ಇಂಡಿಯಾದಲ್ಲೂ ಮುಂದುವರಿಯುತ್ತಿದ್ಯಾ ಎಂಬ ಅನುಮಾನ ಹುಟ್ಟಿಸಿದೆ.

ಕೋಚ್ ಮುಂದೆ ತಲೆಬಾಗಿದ್ರಾ ರೋಹಿತ್ ಶರ್ಮಾ?
ಇಂಥದ್ದೊಂದು ಪ್ರಶ್ನೆ ನಿಜಕ್ಕೂ ಕಾಡೇ ಕಾಡುತ್ತೆ. ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಹೆಡ್ ಕೋಚ್ ಜಸ್ಟ್​ ಸಲಹೆಯನ್ನ ಮಾತ್ರವೇ ನೀಡ್ತಾರೆ. ಕ್ಯಾಪ್ಟನ್ ನಿರ್ಣಯವೇ ಅಂತಿಮವಾಗಿರುತ್ತೆ. ಆದ್ರೀಗ ಇದು ಸುಳ್ಳಾಗಿದೆ. ಹೆಡ್ ಕೋಚ್ ಗಂಭೀರ್ ಮುಂದೆ ರೋಹಿತ್ ಸೈಲೆಂಟ್ ಆಗಿದ್ದಾರೆ. ಇದು ಸಹಜವಾಗೇ ರಾಹುಲ್ ದ್ರಾವಿಡ್​​ ಅವಧಿಯಲ್ಲಿ ಸಿಕ್ಕ ಫ್ರೀಡಂ, ಗಂಭೀರ್ ಎಂಟ್ರಿ ಬಳಿಕ ಸಿಕ್ತಿಲ್ವಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಟೀಮ್ ಇಂಡಿಯಾದ ರಿಯಲ್ ಬಾಸ್ ಆದ್ರಾ​​​​​​​​​​​ ಗಂಭೀರ್?
ಟೀಮ್ ಇಂಡಿಯಾದಲ್ಲಿನ ಬೆಳವಣಿಗೆಗಳು ಇಂಥದ್ದೇ ಪ್ರಶ್ನೆಯನ್ನ ಹುಟ್ಟಿಹಾಕಿದೆ. ಅಸಿಸ್ಟೆಂಟ್ ಕೋಚ್​ಗಳ ಆಯ್ಕೆಯಲ್ಲಿ ಷರತ್ತು ವಿಧಿಸಿದ್ದ ಗೌತಮ್ ಗಂಭೀರ್, ಶ್ರೀಲಂಕಾ ಎದುರಿನ ಸರಣಿಯ ತಂಡದ ಪ್ರಕಟದಲ್ಲೂ ಗಂಭೀರ್​​​​​​​, ಮಾತಿಗೇ ಸೆಲೆಕ್ಷನ್ ಕಮಿಟಿ ಗ್ರೀನ್ ಸಿಗ್ನಲ್ ನೀಡಿತ್ತು. ಕ್ಯಾಪ್ಟನ್ಸಿ ವಿಚಾರದಲ್ಲೂ ಗಂಭೀರ್​ ಒಲವಿನಂತೆ ನಡೆದುಕೊಂಡಿತ್ತು. ಆದ್ರೀಗ ರೋಹಿತ್ ಶರ್ಮಾ ನಾಯಕತ್ವದಲ್ಲೂ ಗೌತಮ್ ಗಂಭೀರ್ ಹಸ್ತಕ್ಷೇಪ ಸ್ಪಷ್ಟವಾಗಿ ಕಾಣ್ತಿದೆ. ಈ ಎಲ್ಲಾ ಬೆಳವಣಿಗೆಗಳು ನೋಡಿದ್ರೆ, ಟೀಮ್ ಇಂಡಿಯಾದ ರಿಯಲ್ ಬಾಸ್ ಗಂಭೀರ್ ಆದ್ರಾ ಎಂಬ ಅನುಮಾನ ಮೂಡದೇ ಇರಲ್ಲ.

ಇದನ್ನೂ ಓದಿ:‘ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ..’ ಪಿಎಸ್​ಐ ಪರಶುರಾಮ್ ಪತ್ನಿ ಕಣ್ಣೀರು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್​ಗೆ ಬೇಕಿತ್ತು ಪಂತ್.. ರಾಹುಲ್​ಗೆ ಚಾನ್ಸ್​ ಸಿಕ್ಕಿರುವ ಹಿಂದಿದೆ ಓರ್ವ ಸೂತ್ರಧಾರನ ಕೈವಾಡ..!

https://newsfirstlive.com/wp-content/uploads/2024/08/KL-RAHUL.jpg

Load More