newsfirstkannada.com

ಆ 2 ಓವರ್​​ಗಳಲ್ಲಿ ಪಂದ್ಯದ ಗತಿಯೇ ಬದಲಾಯ್ತು.. RCB ವಿರೋಚಿತ ಸೋಲಿಗೆ 5 ಕಾರಣಗಳು..!

Share :

Published April 22, 2024 at 12:05pm

Update April 22, 2024 at 12:29pm

    ಸತತ 6ನೇ ಸೋಲಿಗೆ ಗುರಿಯಾದ ಆರ್​​ಸಿಬಿ

    ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಆರ್​​ಸಿಬಿ ಎಡವಿದ್ದೆಲ್ಲಿ?

    ಬೌಲರ್ಸ್​​ ಟ್ರ್ಯಾಕ್​ಗೆ ಬರೋ ಲಕ್ಷಣಾನೇ ಇಲ್ಲ ಗುರು..!

ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಆರ್​​ಸಿಬಿ ಮುಗ್ಗರಿಸಿದೆ. ವಿರೋಚಿತ ಸೋಲುಂಡರೂ ಆರ್​​ಸಿಬಿಯ ಪ್ಲೇ ಆಫ್​ನ ಪ್ರವೇಶದ ಹಾದಿ ದುರ್ಗಮವಾಗಿದೆ. ಮಸ್ಟ್​ ವಿನ್​ ಗೇಮ್​​​​​ನಲ್ಲಿ ಆರ್​​ಸಿಬಿ ಎಡವಿದ್ದೆಲ್ಲಿ? ಡುಪ್ಲೆಸಿ ಪಡೆಯ ಸೋಲಿಗೆ ಕಾರಣ ಏನು?

ಸೋಲಿನ ಸುಳಿಯಿಂದ ಹೊರ ಬರುತ್ತೆ ಅನ್ನೋ ಅಭಿಮಾನಿಗಳ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಕೊಲ್ಕತ್ತಾದ ಈಡನ್​ ಗಾರ್ಡನ್​ನಲ್ಲೂ ಮುಗ್ಗರಿಸಿರುವ ಆರ್​​ಸಿಬಿ ಸೋಲಿಗೆ ಶರಣಾಗಿದೆ. ರಣರೋಚಕ ಅಂತ್ಯ ಕಂಡ ಪಂದ್ಯ ಸೋಲು, ಆರ್​​ಸಿಬಿ ಪಾಲಿಗೆ ಪ್ಲೇ ಆಫ್ ಬಾಗಿಲನ್ನ ಬಹುತೇಕ ಮುಚ್ಚಿದೆ. ಆಫ್​ಫೀಲ್ಡ್​ನಲ್ಲಿ ಭರ್ಜರಿ ತಯಾರಿ ನಡೆಸಿ ಕಣಕ್ಕಿಳಿದ ಆರ್​​ಸಿಬಿ ಆನ್​ಫೀಲ್ಡ್​ನಲ್ಲಿ ಮತ್ತದೇ ತಪ್ಪುಗಳನ್ನ ರಿಪೀಟ್​ ಮಾಡ್ತು. ಪ್ರಮುಖವಾಗಿ ಈ 5 ಕಾರಣಗಳು ಸತತ 6ನೇ ಸೋಲಿಗೆ ಗುರಿ ಮಾಡಿದ್ವು.

ಇದನ್ನೂ ಓದಿ:ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಕಾರಣ ನಂ.1: ತ್ರಿಮೂರ್ತಿ ವೇಗಿ​ಗಳ ಹೀನಾಯ ಪರ್ಫಾಮೆನ್ಸ್
ಈ ಸೀಸನ್​ ಐಪಿಎಲ್​ನಲ್ಲಿ ಆರ್​​ಸಿಬಿ ಬೌಲರ್ಸ್​ ಟ್ರ್ಯಾಕ್​ಗೆ ಬರೋ ಲಕ್ಷಣಗಳೇ ಕಾಣ್ತಿಲ್ಲ. ನಿನ್ನೆ ಈಡನ್​ ಗಾರ್ಡನ್​ನಲ್ಲೂ ವೇಗಿಗಳು ಹೀನಾಯ ಪ್ರದರ್ಶನ ನೀಡಿದ್ರು. ಲಾಕಿ ಫರ್ಗ್ಯೂಸನ್​, ಯಶ್​ ದಯಾಳ್​, ಮೊಹಮ್ಮದ್​ ಸಿರಾಜ್​ ಸರಾಗವಾಗಿ ರನ್​ ಬಿಟ್ಟುಕೊಟ್ರು. ಇವರ ವೈಫಲ್ಯದ ಲಾಭ ಪಡೆದ ಕೆಕೆಆರ್​​​ ಮೇಲುಗೈ ಸಾಧಿಸಿತು.

ಕಾರಣ ನಂ.2: ಪವರ್​​ ಪ್ಲೇನಲ್ಲಿ ಪವರ್​ಲೆಸ್​ ಬೌಲಿಂಗ್​
ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ದುಕೊಂಡ ಕ್ಯಾಪ್ಟನ್​ ನಿರ್ಧಾರವನ್ನ ಬೌಲರ್ಸ್​ ಸಮರ್ಥಿಸಲೇ ಇಲ್ಲ. ಮೊದಲ 6 ಓವರ್​ಗಳಲ್ಲೇ 3 ವಿಕೆಟ್​ ಕಬಳಿಸಿದ್ರು ಅದ್ರ ಜೊತೆಗೆ ಸಿಕ್ಕಾಪಟ್ಟೆ ರನ್​ ಲೀಕ್​ ಮಾಡಿದ್ರು. ಕಳಪೆ ಬೌಲಿಂಗ್​ನ ಅಡ್ವಾಂಟೇಜ್​ ತೆಗೆದುಕೊಂಡ ಕೆಕೆಆರ್​ 6 ಓವರ್​​ಗಳಲ್ಲೇ ಗಳಿಸಿದ್ದು, ಬರೋಬ್ಬರಿ 75 ರನ್​.

ಇದನ್ನೂ ಓದಿಕೆಲಸ ಹುಡುಕುತ್ತಿರೋ ಯುವಕರಿಗೆ ಗುಡ್​ನ್ಯೂಸ್​, Apple ಸಂಸ್ಥೆಯಿಂದ ಭರ್ಜರಿ ಪ್ಲಾನ್..!

ಕಾರಣ ನಂ.3: ಡೆತ್​ ಓವರ್​​ಗಳಲ್ಲಿ ದಂಡನೆಗೆ ಒಳಗಾದ ಬೌಲರ್ಸ್​
ಪವರ್​ ಪ್ಲೇನಲ್ಲಿ ಫೇಲ್​ ಆದ ಆರ್​​ಸಿಬಿ ಮಿಡಲ್​ ಓವರ್​ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಡೆತ್​ ಓವರ್​​ಗಳಲ್ಲಿ ಮತ್ತೆ ಬೌಲರ್ಸ್​​ ದಂಡನೆಗೆ ಒಳಗಾದ್ರು. 16ರಿಂದ 20ರವರೆಗಿನ ಅಂತಿಮ ಓವರ್​​ಗಳಲ್ಲಿ ಶ್ರೇಯಸ್​ ಅಯ್ಯರ್​, ರಮಣ್​ ದೀಪ್​ ಸಿಂಗ್​, ಆ್ಯಂಡ್ರೆ ರಸೆಲ್​ ರನ್​ ಕೊಳ್ಳೆ ಹೊಡೆದ್ರು. 4 ಓವರ್​ಗಳಲ್ಲೇ ಕೆಕೆಆರ್ ಬರೋಬ್ಬರಿ​ 73 ರನ್​ಗಳಿಸಿತು. ಪರಿಣಾಮ ಆರ್​​ಸಿಬಿ ಮುಂದೆ ಬಂದಿದ್ದು 223 ರನ್​ಗಳ ಸವಾಲಿನ ಟಾರ್ಗೆಟ್​​.

ಕಾರಣ ನಂ.4: ಕೆರಬಿಯನ್ನರ ಕಮಾಲ್​, ಆರ್​​ಸಿಬಿ ಕಂಗಾಲ್!
ಆರಂಭದಲ್ಲಿ 2 ವಿಕೆಟ್​ ಕಳೆದುಕೊಂಡರೂ ಒಂದು ಹಂತದಲ್ಲಿ ಆರ್​​ಸಿಬಿ ಸುಲಭಕ್ಕೆ ಗೆಲ್ಲುತ್ತೆ ಅನ್ನೋ ನಿರೀಕ್ಷೆ ಹುಟ್ಟಿತ್ತು. ವಿಲ್​ ಜಾಕ್ಸ್​, ರಜತ್​ ಪಟಿದಾರ್​ ಆ ಭರವಸೆಯನ್ನ ಹುಟ್ಟುಹಾಕಿದ್ರು. ಆರ್​​ಸಿಬಿಗೆ 12 ಹಾಗೂ 13ನೇ ಓವರ್​ನಲ್ಲಿ ಕೆರಬಿಯನ್​ ಬೌಲರ್ಸ್​​ ಶಾಕ್​ ನೀಡಿದ್ರು. ಆ್ಯಂಡ್ರೆ ರಸೆಲ್​ 12ನೇ ಓವರ್​ನಲ್ಲಿ ವಿಲ್​ ಜಾಕ್ಸ್​, ರಜತ್​ ಪಟಿದಾರ್​ ವಿಕೆಟ್​ ಕಬಳಿಸಿದ್ರು. ಬಳಿಕ ಸುನಿಲ್​ ನರೇನ್, 13ನೇ ಓವರ್​ನಲ್ಲಿ ಕ್ಯಾಮರೂನ್​ ಗ್ರೀನ್​, ಮಹಿಪಾಲ್​ ಲೋಮ್ರೊರ್​ ವಿಕೆಟ್​ ಉರುಳಿಸಿದ್ರು. ಈ 4 ವಿಕೆಟ್​ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಡ್ತು.

ಇದನ್ನೂ ಓದಿಇಸ್ರೇಲ್​ನ ಭೀಕರ ಯುದ್ಧಕ್ಕೆ ಸಾವನ್ನಪ್ಪಿದ ತಾಯಿ, ಗರ್ಭದಲ್ಲಿದ್ದ ಮಗು ರಕ್ಷಣೆ ಆಗಿದ್ದೇ ದೊಡ್ಡ ಪವಾಡ..!

ಕಾರಣ ನಂ.5: ಚೇಸಿಂಗ್​ ವೇಳೆ ಕೈ ಕೊಟ್ಟ ಸ್ಟಾರ್ ಬ್ಯಾಟರ್ಸ್​
223 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿಗೆ ಚೇಸಿಂಗ್​ ವೇಳೆ ನಂಬಿಕಸ್ಥ ಬ್ಯಾಟರ್​​ ಕೈ ಕೊಟ್ರು. ವಿರಾಟ್​ ಕೊಹ್ಲಿ, ಫಾಫ್​ ಡುಪ್ಲೆಸಿ ಗುಡ್​ ಸ್ಟಾರ್ಟ್​ ಕೊಡುವಲ್ಲಿ ಫೇಲ್​ ಆದ್ರು. ಕ್ಯಾಮರೂನ್​ ಗ್ರೀನ್​, ಸುಯಶ್​​ ಪ್ರಭುದೇಸಾಯಿ, ದಿನೇಶ್​ ಕಾರ್ತಿಕ್​ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಈ 5 ಪ್ರಮುಖ ಕಾರಣಗಳು ಆರ್​​ಸಿಬಿಯನ್ನ ಸೋಲಿಗೆ ಗುರಿ ಮಾಡಿದ್ವು. ಇದ್ರ ಜೊತೆಗೆ ಆರ್​​ಸಿಬಿ ಪ್ಲೇ ಆಫ್​ ಕನಸೂ ಬಹುತೇಕ ಭಗ್ನವಾಯ್ತು.

ಇದನ್ನೂ ಓದಿ: ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​ ಜೊತೆ ಮತ್ತೆ ಟಾಕ್ ಫೈಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆ 2 ಓವರ್​​ಗಳಲ್ಲಿ ಪಂದ್ಯದ ಗತಿಯೇ ಬದಲಾಯ್ತು.. RCB ವಿರೋಚಿತ ಸೋಲಿಗೆ 5 ಕಾರಣಗಳು..!

https://newsfirstlive.com/wp-content/uploads/2024/04/RCB-30.jpg

Load More