/newsfirstlive-kannada/media/post_attachments/wp-content/uploads/2024/09/Job-2.jpg)
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ತಾಂತ್ರಿಕ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೆ ಸಂಸ್ಥೆಯು ಗುಡ್ನ್ಯೂಸ್ ಕೊಟ್ಟಿದೆ. ಈಗಾಗಲೇ ಅರ್ಜಿ ಆರಂಭವಾಗಿವೆ. ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳನ್ನು ಬಿಇಎಲ್ ಭರ್ತಿ ಮಾಡುತ್ತಿದೆ. ಸರ್ಕಾರದ ಪ್ರತಿಷ್ಠತಿ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸುವವರು ಇವುಗಳಿಗೆ ಅಪ್ಲೇ ಮಾಡಬಹುದು. ಅರ್ಹತಾ ಮಾನದಂಡಗಳು, ಖಾಲಿ ಹುದ್ದೆಗಳು, ವೇತನ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಮತ್ತು ಇತರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಬೆಂಗಳೂರು ಅಭ್ಯರ್ಥಿಗಳಿಗೆ ಗುಡ್ನ್ಯೂಸ್.. ಭರ್ಜರಿ ಉದ್ಯೋಗ ಆಹ್ವಾನ ಮಾಡಿದ BESCOM
ಉದ್ಯೋಗದ ಹೆಸರು; ಡೆಪ್ಯುಟಿ ಇಂಜಿನಿಯರ್ (Deputy Engineer)
ಒಟ್ಟು ಉದ್ಯೋಗಗಳು ಎಷ್ಟು ಇವೆ; 42 ಹುದ್ದೆಗಳು
ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆ; ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ದಾಖಲೆ ಪರಿಶೀಲನೆ
ಮಾಸಿಕವಾಗಿ ನೀಡುವ ಸಂಬಳ; 40,000 ದಿಂದ 1,40,000 ರೂಪಾಯಿ
ವಯೋಮಿತಿ ಎಷ್ಟು ಇದೆ; 28 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ
ವಿದ್ಯಾರ್ಹತೆ ಏನ್ ಕೇಳಿದ್ದಾರೆ; ಬಿಇ, ಬಿಟೆಕ್, ಬಿಎಸ್ಸಿ, ಎಎಂಐಇ, ಜಿಐಇಟಿಇ
ಸಂಸ್ಥೆಯ ವೆಬ್ಸೈಟ್ ಇದು; www.bel-india.in
ಕೆಲಸಕ್ಕೆ ನೇಮಕವಾದ ಅಭ್ಯರ್ಥಿಗಳನ್ನು ಚೆನ್ನೈ, ಪುಣೆ ಬ್ರ್ಯಾಂಚ್ಗೆ ನೇಮಿಸಲಾಗುವುದು
ಅರ್ಜಿ ಶುಲ್ಕ ಎಷ್ಟು ಇದೆ?.- 472 ರೂಪಾಯಿ ಇದೆ (ಒಬಿಸಿ, ಜನರಲ್, ಇಡಬ್ಲುಎಸ್)
ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಅರ್ಜಿ ಶುಲ್ಕದ ವಿನಾಯತಿ ಇದೆ
ಪ್ರಮುಖ ದಿನಾಂಕ ಹೀಗಿದೆ
ಚೆನ್ನೈನ ಬಿಇಎಲ್ ಘಟಕದ ನೇಮಕಾತಿ 2025 ನೋಂದಣಿ ಪ್ರಕ್ರಿಯೆಯು 15 ಜನವರಿ 2025 ರಂದು ಪ್ರಾರಂಭವಾಗಿದ್ದು 06 ಫೆಬ್ರವರಿ 2025 ಕೊನೆಯ ದಿನಾಂಕ ಆಗಿದೆ. ಪುಣೆ ಘಟಕವು 29 ಜನವರಿ 2025 ರಂದು ಪ್ರಾರಂಭವಾಗಿದ್ದು ಫೆಬ್ರುವರಿ 24 ಕೊನೆಯ ದಿನಾಂಕ ಆಗಿದೆ.
ಲಿಂಕ್ ಮಾಹಿತಿಗಾಗಿ- https://static-cdn.publive.online/newsfirstlive-kannada/media/pdf_files/wp-content/uploads/2025/011.-Web-Advt-Dy-Engr-FTE-Rectt-Jan-2025-1.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ