/newsfirstlive-kannada/media/post_attachments/wp-content/uploads/2025/01/JOBS_BEL.jpg)
ತಾಂತ್ರಿಕ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೆ ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್) ಸಂಸ್ಥೆಯಿಂದ ಗುಡ್​ನ್ಯೂಸ್ ಇದೆ. ವರ್ಷದ ಆರಂಭದ ತಿಂಗಳಲ್ಲೇ ಹಲವಾರು ಉದ್ಯೋಗಗಳನ್ನು ಸಂಸ್ಥೆ ಆಹ್ವಾನ ಮಾಡಿದೆ. ಈಗಾಗಲೇ ಅರ್ಜಿ ಆರಂಭವಾಗಿವೆ. ಇವಕ್ಕೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 300ಕ್ಕೂ ಅಧಿಕ ಉದ್ಯೋಗಗಳಿದ್ದು ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ ಆಗಿದೆ. ಅಲ್ಲದೇ ಬಿಇಎಲ್ ಸಂಸ್ಥೆಯು ಪ್ರತಿಷ್ಠಿತಿ ಸಂಸ್ಥೆಯಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಎಲ್ಲ ಸರ್ಕಾರಿ ಸೌಕರ್ಯಗಳು ಸರಿಯಾದ ಸಮಯಕ್ಕೆ ಲಭ್ಯ ಆಗುತ್ತವೆ.
ಉದ್ಯೋಗ ಆಕಾಂಕ್ಷಿಗಳ ಅರ್ಹತೆ, ಖಾಲಿ ಹುದ್ದೆಗಳೆಷ್ಟು, ಆಯ್ಕೆ ಪ್ರಕ್ರಿಯೆ ಹೇಗಿದೆ, ಪರೀಕ್ಷೆಯ ಮಾದರಿ ಮತ್ತು ಇತರ ವಿವರ ಇಲ್ಲಿ ನೀಡಲಾಗಿದೆ. ಉದ್ಯೋಗಗಳ ವರ್ಗೀಕರಣ- ಸಾಮಾನ್ಯ (ಯುಆರ್) 143, ಇಡಬ್ಲುಎಸ್ 35, ಒಬಿಸಿ 94, ಎಸ್​ಸಿ 52 ಹಾಗೂ ಎಸ್​ಟಿ 26 ಉದ್ಯೋಗಗಳು ಇವೆ.
ಉದ್ಯೋಗದ ಹೆಸರು- ಪ್ರೊಬೇಷನರಿ ಇಂಜಿನಿಯರ್ ಹುದ್ದೆ
ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್​)- 200 ಉದ್ಯೋಗ
ಪ್ರೊಬೇಷನರಿ ಇಂಜಿನಿಯರ್ (ಮೆಕನಿಕಲ್​)- 150 ಉದ್ಯೋಗ
ಒಟ್ಟು ಎಷ್ಟು ಉದ್ಯೋಗಗಳು- 350 ಇವೆ
ಇದನ್ನೂ ಓದಿ: ಉದ್ಯೋಗಕ್ಕೆ ಅರ್ಜಿ ಆಹ್ವಾನ ಮಾಡಿರುವ TRAI ಸಂಸ್ಥೆ.. ಈ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
/newsfirstlive-kannada/media/post_attachments/wp-content/uploads/2025/01/JOB_BEL.jpg)
ಆಯ್ಕೆ ಪ್ರಕ್ರಿಯೆ- ಕಂಪ್ಯೂಟರ್ ಬೇಸ್ ಟೆಸ್ಟ್​, ಸಂದರ್ಶನ, ವೈದ್ಯಕೀಯ ಪರೀಕ್ಷೆ
ಮಾಸಿಕ ವೇತನ- 40,000 ದಿಂದ 1,40,000 ರೂಪಾಯಿಗಳು
ಬಿಇಎಲ್ ಸಂಸ್ಥೆಯ ವೆಬ್​ಸೈಟ್- https://bel-india.in/
ಶೈಕ್ಷಣಿಕ ಅರ್ಹತೆ
ಬಿಇ, ಬಿಟೆಕ್, ಬಿಎಸ್​ಸಿ, (ಎಲೆಕ್ಟ್ರಾನಿಕ್ಸ್​ ಆ್ಯಂಡ್ ಕಮ್ಯುನಿಕೇಶನ್, ಮೆಕನಿಕಲ್)
ಅರ್ಜಿ ಶುಲ್ಕ-
ಸಾಮಾನ್ಯ (ಯುಆರ್), ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- ಜಿಎಸ್​ಟಿ ಸೇರಿ 1180 ರೂಪಾಯಿ
ಎಸ್​ಸಿ, ಎಸ್​ಟಿ, ವಿಶೇಷ ಚೇತನರು, ಮಾಜಿ ಸೈನಿಕರಿಗೆ ವಿನಾಯತಿ ಇದೆ
ವಯೋಮಿತಿ- 25 ವರ್ಷಗಳು
ಪ್ರಮುಖ ದಿನಾಂಕಗಳು ಹೀಗಿವೆ
ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ- 10 ಜನವರಿ 2025
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 10 ಜನವರಿ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 31 ಜನವರಿ 2025
ಸಂಸ್ಥೆಯು ಪರೀಕ್ಷೆ ನಡೆಸುವ ತಿಂಗಳು- ಮಾರ್ಚ್​ 2025
ಅರ್ಜಿ ಸಲ್ಲಿಕೆಯ ದಿನಾಂಕ- https://test.cbexams.com/EDPSU/BEL/Apps/Registration/RegStep.aspx
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us