Advertisment

ಆಟವಾಡುತ್ತ ನೀರಿನ ಸಂಪ್​ಗೆ ಬಿದ್ದ ಕಂದಮ್ಮ.. ಅನ್ಯಾಯವಾಗಿ ಸಾವನ್ನಪ್ಪಿದ 2 ವರ್ಷದ ಮಗು

author-image
AS Harshith
Updated On
ಆಟವಾಡುತ್ತ ನೀರಿನ ಸಂಪ್​ಗೆ ಬಿದ್ದ ಕಂದಮ್ಮ.. ಅನ್ಯಾಯವಾಗಿ ಸಾವನ್ನಪ್ಪಿದ 2 ವರ್ಷದ ಮಗು
Advertisment
  • ಮನೆಯಲ್ಲಿ ನೀರು ತುಂಬಿಸೋಕೆ ಮಾಡಿದ್ದ ಸಂಪ್
  • ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆಯೇ ಕಣ್ಮರೆ
  • ಎಷ್ಟೇ ಹುಡುಕಿದರು ಸಿಗದ ಮಗು ಸಂಪ್​ನಲ್ಲಿ ಪತ್ತೆ

ಬೆಳಗಾವಿ: ಆಟವಾಡುತ್ತ ಸಂಪ್​ಗೆ ಬಿದ್ದು 2 ವರ್ಷದ ಕಂದಮ್ಮ ಸಾವನ್ನಪ್ಪಿದ ಘಟನೆ ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ. ಮನೆಯಲ್ಲಿ ನೀರು ತುಂಬಿಸೋಕೆ ಮಾಡಿದ್ದ ಸಂಪ್ ಬಿದ್ದು ಮಗು ಸಾವನ್ನಪ್ಪಿದೆ.

Advertisment

ಸಾಯೀಶಾ ಸಂದೀಪ್ ಬಡವನಾಚೆ(2) ಸಾವನ್ನಪ್ಪಿದ ಮಗು. ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿಯಾಗಿತ್ತು. ಕಣ್ಮರೆಯಾಗಿದ್ದ ಮಗುವಿಗಾಗಿ ಪೋಷಕರಿಗೆ ಹುಡುಕಾಟ ಆರಂಭಿಸಿದರು. ಎಷ್ಟೆ ಹುಡುಕಿದರು ಮಗು ಸಿಕ್ಕಿರಲಿಲ್ಲ. ಕೊನೆಗೆ ಪೋಷಕರು ಸಂಪ್ ಓಪನ್ ಮಾಡಿದ್ದಾರೆ.

ಇದನ್ನೂ ಓದಿ: ಅತ್ತಿಗೆಯಿಂದ ದೂರ ಇರು.. ಬುದ್ಧಿವಾದ ಹೇಳಿದ್ದಕ್ಕೆ ಮೈದುನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಕಿರಾತಕ

ಸಂಪ್ ಓಪನ್ ಮಾಡ್ತಿದ್ದಂತೆ ಮಗು ಸಾಯೀಶಾ ಸಂಪ್ ನಲ್ಲಿ ಬಿದ್ದಿರೋದು ಬೆಳಕಿಗೆ ಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ಮಗು ಪೋಷಕರು ಕರೆದೊಯ್ದಿದ್ದಾರೆ.

Advertisment

ಆದರೆ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ತೀರಿ ಹೋಗಿದ್ದರ ಬಗ್ಗೆ ವೈದ್ಯೆ ಸ್ಪಷ್ಟಪಡಿಸಿದ್ದಾರೆ. ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment