newsfirstkannada.com

ಪುತ್ರ ಮೃಣಾಲ್​ಗೆ ಒಲಿಯಲಿಲ್ಲ ಲಕ್ಷ್ಮಿ ಕೃಪಾಕಟಾಕ್ಷ.. ಜಗದೀಶ್​ ಶೆಟ್ಟರ್​ಗೆ ಗೆಲುವಿನ ಸಂತಸ.. ಎಷ್ಟು ಮತಗಳ ಅಂತರ?

Share :

Published June 4, 2024 at 1:53pm

Update June 4, 2024 at 2:53pm

    ಜಗದೀಶ್​ ಶೆಟ್ಟರ್​ ವಿರುದ್ಧ ಮೃಣಾಲ್​ ಹೆಬ್ಬಾಳ್ಕರ್​ ಸ್ಪರ್ಧೆ

    ಲಕ್ಷ್ಮಿ ಹೆಬ್ಬಾಳ್ಕರ್​ ಮಗ ಮೃಣಾಲ್​ ಹೆಬ್ಬಾಳ್ಕರ್​ಗೆ ಸೋಲು

    ಬೆಳಗಾವಿಯಲ್ಲಿ ಮೃಣಾಲ್​ಗೆ ಒಲಿಯಲಿಲ್ಲ ಲಕ್ಷ್ಮಿ ಕೃಪಾಕಟಾಕ್ಷ

ಭಾರೀ ಕುತೂಹಲ ಕೆರಳಿಸಿದ್ದ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್​ನಿಂದ ಬಿಜೆಪಿಗೆ ಪಾಲಾಯನಗೈದ ಶೆಟ್ಟರ್​ ಗೆಲುವಿನ ಕನಸು ನನಸಾಗಿದೆ. ಇನ್ನು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿಸಿದೆ.

ಬೆಳಗಾವಿ ಕ್ಷೇತ್ರ ಪ್ರಬಲ ಪೈಪೋಟಿಯಿಂದ ಕೂಡಿರಲಿದೆ ಎಂದು ನಿರೀಕ್ಷಿಸಿಲಾಗಿತ್ತು. ಕಾರಣ ಜಗದೀಶ್​ ಶೆಟ್ಟರ್​ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್​ ಮಗ ಮೃಣಾಲ್​ ಹೆಬ್ಬಾಳ್ಕರ್​​ ಸ್ಪರ್ಧಿಸಿದ್ದರು. ಆದರೆ ಮೃಣಾಲ್ ವಿರುದ್ಧ ಶೆಟ್ಟರ್​ 1,51,677 ಮತಗಳ ಅಂತರದಿಂದ ಗೆದ್ದಿದ್ದಾರೆ.

ಇನ್ನು 16ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆ 1,33,838 ಮತಗಳ ಮುನ್ನಡೆಯಾಗಿತ್ತು. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆ ಶೆಟ್ಟರ್​ 1,51,677 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ:ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾಗಿದೆ, ವಿದೇಶಿ ಶಕ್ತಿಗಳ ಕೈವಾಡವಿದೆ; HD ಕುಮಾರಸ್ವಾಮಿ ಹೊಸ ಬಾಂಬ್​

ಬಿಜೆಪಿ- 7,12,370
ಕಾಂಗ್ರೆಸ್- 5,6,0693
ಮುನ್ನಡೆ- 1,51,677

ಕಾಂಗ್ರೆಸ್​ಗೆ ಸೋಲು

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿದೆ. ಕ್ಷೇತ್ರದ ಮತದಾರರು ಅತೀ ಹೆಚ್ಚು ಬಿಜೆಪಿ ಪರ ಮತ ಹಾಕಿದ್ದಾರೆ. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆ 113495 ಮತಗಳು ಸಿಕ್ಕಿವೆ. ಕಾಂಗ್ರೆಸ್ ಮೃಣಾಲ್‌ ಹೆಬ್ಬಾಳ್ಕರ್ ಗೆ 67403 ಮತಗಳನ್ನು ಹಾಕಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ 46,092 ಲೀಡ್‌ ಪಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುತ್ರ ಮೃಣಾಲ್​ಗೆ ಒಲಿಯಲಿಲ್ಲ ಲಕ್ಷ್ಮಿ ಕೃಪಾಕಟಾಕ್ಷ.. ಜಗದೀಶ್​ ಶೆಟ್ಟರ್​ಗೆ ಗೆಲುವಿನ ಸಂತಸ.. ಎಷ್ಟು ಮತಗಳ ಅಂತರ?

https://newsfirstlive.com/wp-content/uploads/2024/01/Jagadish-Shettar-Bjp.jpg

Load More