ಎಮ್ಮೆ ನಮ್ಮ ಹೆಮ್ಮೆ.. ಗಡಿನಾಡ ದೀಪಾವಳಿಯಲ್ಲೊಂದು ವಿಶಿಷ್ಟ ಆಚರಣೆ!

author-image
AS Harshith
Updated On
ಎಮ್ಮೆ ನಮ್ಮ ಹೆಮ್ಮೆ.. ಗಡಿನಾಡ ದೀಪಾವಳಿಯಲ್ಲೊಂದು ವಿಶಿಷ್ಟ ಆಚರಣೆ!
Advertisment
  • ಕುಂದಾನಗರಿಯಲ್ಲಿ ದೀಪಾವಳಿಗೆ ವಿಶಿಷ್ಟ ಆಚರಣೆ
  • ವರ್ಷವಿಡೀ ಹಾಲುಕೊಡುವ ಎಮ್ಮೆಗಳ ಶೃಂಗಾರ
  • ಶೃಂಗರಿಸಿದ ಎಮ್ಮೆಗಳನ್ನು ಓಟ ಓಡಿಸುವ ಜನರು

ಬೆಳಗಾವಿ: ಬಹುಭಾಷಾ ಸಂಸ್ಕೃತಿ ಹೊಂದಿರುವ ಕುಂದಾನಗರಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಎಮ್ಮೆಗಳ ಓಟವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಎಮ್ಮೆಗಳ ವೈಯ್ಯಾರಕ್ಕೆ ಎಲ್ಲರೂ ರೋಮಾಂಚನಗೊಂಡಿದ್ದಾರೆ.

ದೀಪಾವಳಿ ಬಂತೆಂದರೆ ಸಾಕು ಗೌಳಿಗರು ಎಮ್ಮೆಗಳನ್ನು ಶೃಂಗರಿಸಿ ಹುರಿಗೊಳಿಸುತ್ತಾರೆ. ವರ್ಷವಿಡೀ ಹಾಲುಕೊಡುವ ಎಮ್ಮೆಗಳನ್ನು ಓಟ ಓಡಿಸುತ್ತಾರೆ. ಇದನ್ನು ಕಾಣಲು ಯುವ ಸಮೂಹ ಕ್ಕಿಕ್ಕಿರಿದು ಸೇರುತ್ತಾರೆ.

ಇದನ್ನೂ ಓದಿ: Bengaluru: ಮೂರೇ ದಿನಕ್ಕೆ 77ಕ್ಕೂ ಹೆಚ್ಚು ಪಟಾಕಿ ಕೇಸ್​ ದಾಖಲು! ಗಾಯಗೊಂಡ ಮಕ್ಕಳ ಸಂಖ್ಯೆ ಎಷ್ಟು ಗೊತ್ತಾ?

publive-image

ಅದರಂತೆಯೇ ಇಲ್ಲಿ ಎಮ್ಮೆಗಳಿಗೆ ಕವಡೆ ಸರ, ಕೋಡುಗಳಿಗೆ ಬಣ್ಣ ಬಳಿದು, ಕೊಂಬುಗಳಿಗೆ ನವಿಲು ಗರಿಯ ಸಿಂಗಾರ ಮಾಡುತ್ತಾರೆ. ಮಧುವಣಗಿತ್ತಿಯಂತೆ ಎಮ್ಮೆಯನ್ನು ರೆಡಿ ಮಾಡುತ್ತಾರೆ. ಬಳಿಕ ಅದನ್ನು ಓಡಿಸುತ್ತಾರೆ.

ಬೆಳಗಾವಿ ಚವ್ಹಾಟ ಗಲ್ಲಿ, ಕ್ಯಾಂಪ ಪ್ರದೇಶ, ಟಿಳಕವಾಡಿ, ಗೌಳಿ ಗಲ್ಲಿ, ಗಾಂಧಿ ನಗರ, ಕೋನವಾಳ ಗಲ್ಲಿ ರೋಮಾಂಚಕಾರಿ ಎಮ್ಮೆಗಳ ಓಟವನ್ನು ಓಡಿಸುತ್ತಾರೆ. ಎಮ್ಮೆ ಶೃಂಗಾರವನ್ನು ಕಂಡು ಯುವ ಸಮೂಹ ಮಾತ್ರ ಫಿದಾ ಆಗಿದ್ದಾರೆ.

ಇದನ್ನೂ ಓದಿ: ವೈದ್ಯನ ಕೊ*ಲೆ ಪ್ರಕರಣ ಭೇದಿಸಿದ ಪೊಲೀಸರು: 24 ಗಂಟೆಯಲ್ಲಿ 1600km ಚೇಸ್​ ಮಾಡಿ ಅರೆಸ್ಟ್

ಬೈಕ್​ನ ಸೈಲೆನ್ಸರ್​ ಮೂಲಕ ಕರ್ಕಶ ಶಬ್ಧ ಮಾಡುತ್ತಾ ಮುಂದೆ ಹೋಗುತ್ತಿದ್ದರೆ ಎಮ್ಮೆಗಳು ಹಿಂದೆ ಓಡಿ ಬರೋ ದೃಶ್ಯ ನೋಡುಗರ ಮೈನವಿರೇಳಿಸುತ್ತೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಜನರು ಸಿಳ್ಳೆ, ಚಪ್ಪಾಳೆಗೆ, ರೋಷಾವೇಷದಿಂದ ಓಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment