newsfirstkannada.com

ಇಡೀ ಭಾರತದಲ್ಲೇ ದಾಖಲೆ ಮಟ್ಟಕ್ಕೆ ಮಾರಾಟವಾದ ಬೆಳಗಾವಿ ರೈತನ ಅರಿಶಿಣ.. 1 ಕ್ವಿಂಟಾಲ್​ಗೆ ಎಷ್ಟು ಸಾವಿರ..?

Share :

Published March 22, 2024 at 10:05am

Update March 22, 2024 at 10:14am

  ಕೇವಲ ಮೂರು ಎಕರೆಯಲ್ಲಿ ಶೈಲಂ ತಳಿಯ ಅರಿಶಿಣ ಬೆಳೆದರು

  ಅರಿಶಿಣ ಬೆಳೆ ಭಾರೀ ಬೆಲೆಗೆ ಮಾರಾಟವಾಗಿದ್ದಕ್ಕೆ ರೈತ ಖುಷ್

  ಈಗಾಗಲೇ ಮಾರಾಟವಾದ 18 ಕ್ವಿಂಟಾಲ್​ಗೆ ಲಕ್ಷ ಲಕ್ಷ ಜೇಬಿಗೆ

ಬೆಳಗಾವಿ: ಕರ್ನಾಟಕದ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತನೊಬ್ಬ ಬೆಳೆದ ಅರಿಶಿಣ ಇಡೀ ಭಾರತದಲ್ಲಿ ದಾಖಲೆ ಮಟ್ಟಕ್ಕೆ ಮಾರಾಟವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇದರಿಂದ ರೈತ ಫುಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಕೋಹಳ್ಳಿ ಗ್ರಾಮದ ರೈತ ಸೈಬಣ್ಣ ಭೂಪತಿ ಪೂಜಾರಿ ಅವರ ಅರಿಶಿನ ಭಾರತದಲ್ಲಿ ಅಚ್ಚರಿಯ ದರಕ್ಕೆ ಮಾರಾಟವಾಗಿದೆ. ಪ್ರತಿ ಕ್ವಿಂಟಲ್​ಗೆ ಬರೋಬ್ಬರಿ 41,101 ರೂಪಾಯಿಯ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಮೂರು ಎಕರೆ ಅರಿಶಿಣ ಬೆಳೆದ ರೈತ ಪ್ರತಿ ಎಕರೆಗೆ 25-28 ಕ್ವಿಂಟಲ್ ಅರಿಶಿನ ಇಳುವರಿ ಬಂದಿದ್ದು ಶ್ರಮಕ್ಕೆ ವರದಾನವಾಗಿದೆ.

ರೈತನು ಶೈಲಂ ತಳಿಯ ಅರಿಶಿನ ಬಿಜ ನಾಟಿ ಮಾಡಿ ಸಮರ್ಪಕ ನೀರು ಔಷಧೋಪಚಾರದೊಂದಿಗೆ ಉತ್ತಮ ಇಳುವರಿಗೆ ಕಂಡಿದ್ದಾರೆ. ಈಗಾಗಲೇ 18 ಕ್ವಿಂಟಲ್ ಅರಿಶಿನ ಮಾರಾಟವಾಗಿದ್ದು 7ಲಕ್ಷ ರೂ. ನಿವ್ವಳ ಲಾಭ ಪಡೆದಿದ್ದಾರೆ. ಪ್ರತಿ ಎಕ್ಕರೆಗೆ 30 ಸಾವಿರ ಖರ್ಚು ಮಾಡಿದ ಇವರು ಮೂರು ಎಕ್ಕರೆ ಅರಿಶಿನದಿಂದ ಅಂದಾಜು 30 ಲಕ್ಷ ಆದಾಯದ ನಿರೀಕ್ಷೆಯ ಗುರಿ ಇಟ್ಟುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಡೀ ಭಾರತದಲ್ಲೇ ದಾಖಲೆ ಮಟ್ಟಕ್ಕೆ ಮಾರಾಟವಾದ ಬೆಳಗಾವಿ ರೈತನ ಅರಿಶಿಣ.. 1 ಕ್ವಿಂಟಾಲ್​ಗೆ ಎಷ್ಟು ಸಾವಿರ..?

https://newsfirstlive.com/wp-content/uploads/2024/03/BGM_ARISHINA.jpg

Load More