newsfirstkannada.com

VIDEO: ಇವರಿಗೆ ಇದೆ ‘ಜಲ’ಯೋಗ.. ನೀರಿನ ಮೇಲೆ 80ಕ್ಕೂ ಅಧಿಕ ಯೋಗಾಸನ ಮಾಡ್ತಾರೆ ಅಪ್ಪ-ಮಗಳು..!

Share :

21-06-2023

    ನೀರಿನ ಮೇಲೆ ಪದ್ಮಾಸನ, ವೃಕ್ಷಾಸನ ಈಜಿಯಾಗಿ ಮಾಡ್ತಾರೆ

    ತಂದೆ-ಮಗಳ ಜೊತೆ ಯೋಗಾಸನ ಕಲಿಯಲು ಬರ್ತಾರೆ ಜನ

    ಬೆಳಗಾವಿ ತಂದೆ, ಮಗಳ ಯೋಗಾಸನ ಸಖತ್ ಫೇಮಸ್

ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂಭ್ರಮ. ಯೋಗಾಸನದ ವಿವಿಧ ಭಂಗಿಗಳು ಈಗ ಟ್ರೆಂಡ್​ ಆಗಿದೆ. ಉತ್ತಮ ಆರೋಗ್ಯಕ್ಕಾಗಿ, ದೇಹವನ್ನು ಸ್ಲಿಮ್​ ಆಗಿರಿಸಲು ಎಲ್ಲರೂ ಯೋಗದ ಮೊರೆ ಹೋಗಿದ್ದಾರೆ. ಬೇಕಾದಷ್ಟು ಆಸನಗಳನ್ನು ಈಗಾಗಲೇ ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ತಂದೆ, ಮಗಳು ವಿನೂತನ ರೀತಿಯಲ್ಲಿ ನೀರಿನ ಮೇಲೆ ಯೋಗ ಮಾಡುತ್ತಾರೆ. ಇದನ್ನು ನೋಡಿದ ಜನರು ಆಚ್ಚರಿ ಜೊತೆಗೆ ನಾವು ಕೂಡ ಈ ರೀತಿ ಮಾಡಬಹುದೇ ಎಂದು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.

ಬೆಳಗಾವಿ ನಿವಾಸಿಗಳಾದ ಅರ್ಜುನ್ ಮಿರಜಕರ್​ ಹಾಗೂ ಇವರ ಮಗಳು ಶ್ರೀದೇವಿ ಅರ್ಜುನ್ ಅವರು ಈ ವಿಶಿಷ್ಟವಾಗಿ ನೀರಿನ ಮೇಲೆ ಯೋಗ ಮಾಡುವರಾಗಿದ್ದಾರೆ. ಎಲ್ಲರೂ ಭೂಮಿ ಮೇಲೆ ಯೋಗಸಾನ ಮಾಡಿದ್ರೆ, ಇವರಿಬ್ಬರು ನೀರಿನ ಮೇಲೆ ಯೋಗಾಸನ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇವರಿಬ್ಬರು ಯೋಗ ಶಿಕ್ಷಕರಾಗಿದ್ದು ಹಲವರಿಗೆ ಆಸನಗಳನ್ನು ಹೇಳಿಕೊಡುತ್ತಿದ್ದಾರೆ. ಅಲ್ಲದೇ ನೀರಿನ 70 ರಿಂದ 80 ಯೋಗಾಸನಗಳನ್ನು ಮಾಡುವ ಇವರು 20 ವರ್ಷಗಳಿಂದ ನೆಲ ಮತ್ತು ಜಲದ ಮೇಲೆ ಯೋಗ ಮಾಡುತ್ತಿದ್ದಾರೆ.

ಪದ್ಮಾಸನ, ವೃಕ್ಷಾಸನ, ಚಕ್ರಾಸನ, ಗೋಮುಖಾಸನ, ಮರ್ಕಟಾಸನ, ವೀರಭದ್ರಾಸನ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಆಸನಗಳನ್ನು ನೀರಿನ ಮೇಲೆ ಸರಾಗವಾಗಿ ಮಾಡುತ್ತಾರೆ. ಹಿಗಾಗಿಯೇ ರಾಜ್ಯದ ವಿವಿಧ ಜಿಲ್ಲೆಯ ಹಳ್ಳಿ ಜನರಿಗೆ ಯೋಗಾ ಶಿಬಿರದಲ್ಲಿ ಆಸನಗಳನ್ನು ಹೇಳಿಕೊಡುತ್ತಿರುತ್ತಾರೆ. ಇದರಿಂದ ಇವರು ಜಲಯೊಗ ಸಾಧಕರೆಂದು ಖ್ಯಾತಿ ಪಡೆದಿದ್ದಾರೆ.

ಈ ಬಗ್ಗೆ ನ್ಯೂಸ್​ಫಸ್ಟ್ ಜೊತೆ ಮಾತನಾಡಿದ ಜಲಯೋಗ ಶಿಕ್ಷಕ ಅರ್ಜುನ್ ಮಿರಜಕರ್, ಯೋಗ ಮಾಡುವುದರಿಂದ ದೇಹದ ಅಂಗಾಂಶಗಳಲ್ಲಿ ಚೈತನ್ಯ ಹೆಚ್ಚಿ ನರ ನಾಡಿಯಲ್ಲಿ ಶಕ್ತಿ ಬರುತ್ತದೆ. ಯೋಗಾ ಮಾಡಿದ್ರೆ ರೋಗ ದೂರ ಇರುತ್ತದೆ. ಅದರಂತೆ ನೀರಲ್ಲಿ ಯೋಗ ‌ಮಾಡುವುದರಿಂದ ಮೈಮನಸ್ಸು ಹಗುರ ಆಗುತ್ತೆ. ಮಾನಸಿಕ ನೆಮ್ಮದಿಗಾಗಿ ಯೋಗದಲ್ಲಿ ತೊಡಗಿಕೊಂಡರೆ ಒಳ್ಳೆಯದು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಇವರಿಗೆ ಇದೆ ‘ಜಲ’ಯೋಗ.. ನೀರಿನ ಮೇಲೆ 80ಕ್ಕೂ ಅಧಿಕ ಯೋಗಾಸನ ಮಾಡ್ತಾರೆ ಅಪ್ಪ-ಮಗಳು..!

https://newsfirstlive.com/wp-content/uploads/2023/06/BGM_WATER_YOGA.jpg

Load More