/newsfirstlive-kannada/media/post_attachments/wp-content/uploads/2025/01/bgm-death.jpg)
ಇಂದು ಮೌನಿ ಅಮಾವಾಸ್ಯೆ. ಮಹಾಕುಂಭಮೇಳದಲ್ಲಿ ಶಾಹಿಸ್ನಾನ ಮಾಡಿದ್ರೆ ಮೋಕ್ಷಪ್ರಾಪ್ತಿ ಆಗುತ್ತದೆ ಅನ್ನೋದು ಮೂಲ ನಂಬಿಕೆ. ಹೀಗಾಗಿ ಅಮೃತಸ್ನಾನ ಮಾಡಲು ಅಸಂಖ್ಯಾ ಭಕ್ತಗಣ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ:ಕಾಲ್ತುಳಿತ ಒಂದೇ ಅಲ್ಲ.. 72 ಗಂಟೆ ಟ್ರಾಫಿಕ್ನಲ್ಲಿ ಸಿಲುಕಿದ ಜನ.. ಏನೆಲ್ಲ ಸಮಸ್ಯೆ ಆಗ್ತಿದೆ..?
ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಯಾತ್ರಿಕರು ಹರಿದು ಬಂದಿದ್ದರಿಂದ ಕಾಲ್ತುಳಿತಕ್ಕೆ ಕಾರಣವಾಗಿದೆ. ಅಲ್ಲದೇ ಇದೇ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ತಾಯಿ ಹಾಗೂ ಮಗಳು ಬಲಿಯಾಗಿದ್ದಾರೆ. ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠನ ಹಾಗೂ ಮೇಘಾ ಹತ್ತರವಾಠ ಎಂಬುವವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. 13 ಜನರ ಜೊತೆ ಮಹಾ ಕುಂಭಮೇಳಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ