newsfirstkannada.com

ಕುಂದಾನಗರಿಯಲ್ಲೊಂದು ಬೆಳಕಿಗೆ ಬಂದ ನಾಚಿಕೆಗೇಡು ಪ್ರಕರಣ.. ನ್ಯಾಯ ಕೊಡುವ ಪೊಲೀಸರಿಂದಲೇ ದಲಿತರಿಗೆ ಅನ್ಯಾಯ!

Share :

Published February 29, 2024 at 6:53am

Update February 29, 2024 at 6:56am

    ಜಾತಿ ನಿಂದನೆ ಕೇಸ್ ದಾಖಲಾದ್ರೂ ಕ್ರಮ‌ಕೈಗೊಳ್ಳದ ಪೋಲಿಸರು

    ನ್ಯೂಸ್ ಫಸ್ಟ್​​ಗೆ ಪೊಲೀಸ್ ಪೇದೆ ಮಾತನಾಡಿದ ಆಡಿಯೋ ಲಭ್ಯ

    ಶಶಿಕಾಂತ್​ ಲಕ್ಷ್ಮಣ್ ಅಕ್ಕನ್ನವರ್​ರವರ ಕುಟುಂಬಕ್ಕೆ ಅನ್ಯಾಯ

ಬೆಳಗಾವಿಯಲ್ಲಿ ಕೆಲ ತಿಂಗಳುಗಳ ಸಮಾಜವೇ ತಲೆ ತಗ್ಗಿಸುವಂತೆ ಘಟನೆ ನಡೆದಿತ್ತು. ಈ ದುಷ್ಕೃತ್ಯದ ನಡೆದ ಬಳಿಕ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ನ್ಯಾಯ ಕೊಡಬೇಕಾದ ಪೊಲೀಸರೇ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿರುವ ಕೂಗು ಕೇಳಿ ಬಂದಿದೆ.

ಬೆಳಗಾವಿಯಲ್ಲಿ ಕೆಲ ತಿಂಗಳುಗಳ ಹಿಂದೆ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಘಟನೆ ನಡೆದಿತ್ತು. ನಡುರಸ್ತೆಯಲ್ಲೇ ಮಹಿಳೆಯನ್ನ ವಿವಸ್ತ್ರಗೊಳಿಸಿದ ಅಮಾನುಷ್ಯ ಕೃತ್ಯ ಬೆಳಕಿಗೆ ಬಂದಿತ್ತು. ಇದೀಗ ಕುಂದಾನಗರಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿರೋ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಹಾರೂಗೇರಿ ಠಾಣೆಯಲ್ಲಿ ನಡೆಯುತ್ತಿದೆಯಾ ಅಂಧಾ ಕಾನೂನು?

ಕುಂದಾನಗರಿ ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ನಡೆಯುತ್ತಿದೆಯಾ ಅಂಧಾ ಕಾನೂನು? ಎಂಬ ಪ್ರಶ್ನೆ ಮೂಡಿದೆ. ನ್ಯಾಯ ಕೊಡಿಸಬೇಕಾದ ಪೊಲೀಸರಿಂದಲೇ ದಲಿತ ಕುಟುಂಬಕ್ಕೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ.

ರಾಯಬಾಗ ತಾ. ಖಣದಾಳ ಗ್ರಾಮದಲ್ಲಿ ಘಟನೆ

ಶಶಿಕಾಂತ್​ ಲಕ್ಷ್ಮಣ್ ಅಕ್ಕನ್ನವರ್​ರವರ ಕುಟುಂಬಕ್ಕೆ ಅನ್ಯಾಯ ನಡೆದಿರೋ ಘಟನೆ ಬೆಳಗಾವಿಯ ರಾಯಬಾಗ ತಾ. ಖಣದಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಶಶಿಕಾಂತ್​ ಲಕ್ಷ್ಮಣ್ ಅಕ್ಕನ್ನವರ ಎಂಬ ದಲಿತ ಕುಟುಂಬಕ್ಕೆ ಮುತ್ನಾಳ್‌ ಕುಟುಂಬದವರಿಂದ ಅನ್ಯಾಯವಾಗಿದೆ. ಖಣದಾಳ ಗ್ರಾಮದ ಮುತ್ನಾಳ್ ಕುಟುಂಬದ‌ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಜಾತಿ ನಿಂದನೆ ಕೇಸ್ ದಾಖಲಾದ್ರೂ ಪೋಲಿಸರು ಕ್ರಮ‌ಕೈಗೊಂಡಿಲ್ಲನೊಂದವರಿಗೆ ನ್ಯಾಯ ಕೊಡುವ ಬದಲು ಆರೋಪಿಗಳ ಪರ ಪೊಲೀಸರ ವಕಾಲತ್ತು ವಹಿಸುತ್ತಿದ್ದಾರೆ.

2003ರಲ್ಲಿ ಲಕ್ಷ್ಮಣ ಅಕ್ಕನ್ನವರ್ ಅವರು ರಾಯಭಾಗ ತಾಲೂಕಿನ ಕಣದಾಳ ಗ್ರಾಮದಲ್ಲಿ 4.12 ಗುಂಟೆ ಜಮೀನು ಖರೀದಿಸಿದ್ದರು. ಈ ಜಮೀನು ವಿವಾದ ಕುರಿತು ಅಕ್ಕನ್ನವರ ಹಾಗೂ ಮುತ್ನಾಳ್ ಕುಟುಂಬದ ನಡುವೆ ವಿವಾದ ಶುರುವಾಗಿತ್ತು. 2012ರ ಏಪ್ರೀಲ್ 25 ರಂದು ಜಮೀನಿನ ಗುಡಿಸಲಿಗೆ ಆರೋಪಿಗಳು ಬೆಂಕಿ ಹಚ್ಚಿದ್ದರು. ಹೀಗೆ ಆವತ್ತಿನಿಂದ ಎರಡು ಕುಟುಂಬಗಳ ನಡುವೆ ಗಲಾಟೆ ಆಗುತ್ತಲೇ ಬಂದಿದೆ. ಹಾರೂಗೇರಿ ಪೋಲಿಸ್ ಠಾಣೆ ಕಾನ್ ಸ್ಟೇಬಲ್ ಸಿದ್ಧಪ್ಪ ಬಿಕ್ಕೇರಿ ಹಾಗೂ ಆರೋಪಿ ಪರ ವ್ಯಕ್ತಿ ಸತ್ಯಪ್ಪ ಬಡಶೆಟ್ಟಿ ನಡುವೆ 2023 ಡಿಸೆಂಬರ್ 1 ರಂದು ನಡೆದ ಸಂಭಾಷಣೆ ಆಡಿಯೋ ನ್ಯೂಸ್‌ಫಸ್ಟ್‌ಗೆ ಲಭ್ಯವಾಗಿದೆ.

ಆರೋಪಿಗಳ ಪರ ನಿಂತ್ರಾ ಪೊಲೀಸರು?

ಸಿದ್ದಪ್ಪ ಪೊಲೀಸ್​ – ತಹಶೀಲ್ದಾರ್ ಸಾಹೇಬ್ರು ಎರಡೂ ಪಾರ್ಟಿಗೆ ಪೆಂಡಿಂಗ್ ಇಡು ಆಂತ ಹೇಳಿದಾರು ಅಂತ ಹೇಳೇನಿ
ಸತ್ಯಪ್ಪ ಬಡಶೆಟ್ಟಿ – ಹುಂ…
ಸಿದ್ದಪ್ಪ ಪೊಲೀಸ್ – ಸಾಹೇಬ್ರು ಇಲ್ಲೇ ಹೆಡ್ ಕ್ವಾಟರ್ಸ್​ದಾಗ ಅದಾರು..
ಸತ್ಯಪ್ಪ ಬಡಶೆಟ್ಟಿ – ಹುಂ…
ಸಿದ್ದಪ್ಪ ಪೊಲೀಸ್ – ಏನೂ ಬೇಡ ದಬ್ಬಾಸಿ ಕಬ್ಬ ಕಡೀರಿ.. ಅವಳ ತು** ಕಡೀರಿ.. ಕಡಿದ ನಂತ್ರ ಅವನು ಬರ್ಲಿ ಸ್ಟೇಷನ್​ತಕ.. ನೀವು ಬರಕತ್ರಿ.. ಈಗ ಬಂದ್ ಮಾಡ್ತೀನಿ ಅಂದ..
ಸತ್ಯಪ್ಪ ಬಡಶೆಟ್ಟಿ – ಹುಂ
ಸಿದ್ದಪ್ಪ ಪೊಲೀಸ್ – ಎಸ್ಪಿಗೆ ಮಾತಾಡ್ತೀನಿ ಅಲ್ಲಿ ಇಲ್ಲಿ ಅಂದ.. ಮಾತಾಡುತ್ತಿದ್ರ ಮಾತಾಡು ಅಂದೆ
ಸತ್ಯಪ್ಪ ಬಡಶೆಟ್ಟಿ – ಹುಂ
ಸಿದ್ದಪ್ಪ ಪೊಲೀಸ್ – ಈಗ ತಹಶೀಲ್ದಾರ್ ಸಾಹೇಬ್ರು ಕ್ಲಿಯರ್ ಹೇಳಿದ್ರೋ ಇಲ್ಲ ನಿಮಗ.. ಕಡೀರಿ ಅಂತ
ಸತ್ಯಪ್ಪ ಬಡಶೆಟ್ಟಿ – ಹೌದ್ರೀ.
ಸಿದ್ದಪ್ಪ ಪೊಲೀಸ್ – ಬರ್ರೀ ನೀವು ತಲೆಕೆಡಿಸಿಕೋಬೇಡ್ರಿ.
ಸತ್ಯಪ್ಪ ಬಡಶೆಟ್ಟಿ – ತಹಶೀಲ್ದಾರ್ ಸಾಹೇಬ್ರಿಗೂ, ಸ್ಟೇಷನ್ ಸಾಹೇಬ್ರೂ ಈಗ ಪೋನ್ ಹಚ್ಚಿನ್ರಲ್ಲಾ ಈಗ..
ಸಿದ್ದಪ್ಪ ಪೊಲೀಸ್ – ತಹಶೀಲ್ದಾರ್ ಸಾಹೇಬ್ರಿಗೆ ಹಚ್ಚಿದ್ರೇನ್ರಿ?
ಸತ್ಯಪ್ಪ ಬಡಶೆಟ್ಟಿ – ಇವರಿಗೆ ಇವರಿಗೆ….
ಸಿದ್ದಪ್ಪ ಪೊಲೀಸ್ – ನಮ್ಮ ಸಾಹೇಬ್ರಿಗೆ ಎನಂದ್ರು?
ಸತ್ಯಪ್ಪ ಬಡಶೆಟ್ಟಿ – 112 ಕರೆಸಾರೀ. ಕಬ್ಬ ಕಡ್ಯಾಕತ್ತಾರ, ಮತ್ತ ಮೊಮೀನ್ ಸರ್ ಬಂದಿದ್ದಾರೆ ಆಂತ ಹೇಳಿದೆ..
ಸಿದ್ದಪ್ಪ ಪೊಲೀಸ್ – ಏನಂದ್ರು?
ಸತ್ಯಪ್ಪ ಬಡಶೆಟ್ಟಿ – ಮಾತಾಡ್ತೀನಿ ಅಂದ್ರು….
ಸಿದ್ದಪ್ಪ ಪೊಲೀಸ್ – ಮಾತಾಡ್ಲಿ.. ಮಾತಾಡ್ಲಿ.. ಏನ್ ಕೇಸ್ ಆಗತೈತಿ ಆಗ್ಲಿ.. ಯಾವ ಬೋ** ಮಗಾ ಬರ್ತಾನೋ ಬರ್ಲಿ.. ನಿಮ್ಮ ಅವ್ವರ್ ತು** ಅಂತ ನಿಂತು ಜಾಡಸ ಅಂತ ಹೇಳ್ರಿ..
ಸತ್ಯಪ್ಪ ಬಡಶೆಟ್ಟಿ – ಪೊಲೀಸ್ ಸ್ಟೇಷನ್​ಗೆ ಹೋಗ್ತಾರೆ..
ಸಿದ್ದಪ್ಪ ಪೊಲೀಸ್ – ಏನೂ ಶಂ** ಆಗೋದಿಲ್ಲ.. ಏನೂ ಶಂ** ಆಗೋದಿಲ್ಲ.. ದೈರ್ಯ ಮಾಡ್ರಿ… ಏನ್ ಹರಕೋತ್ತೀರಿ ಹರಕೋ ಅಂತ ಅನ್ರಿ…. ಇಲ್ನೋಡ್ರಿ ಇದರೊಳಗ ಪೈಟ್ ಮಾಡಿದ್ರೆ ಮಾತ್ರ ಉಳಿತಾರ ಇವರು… ವಕೀಲನ ಹಚ್ಚಿ ಎರಡೂ ಪರ್ಟಿಗೂ ಕೇಸ್ ಆದ್ರ ಆಗಲಿ ಶಂ** ಆಗೋದಿಲ್ಲ. ಅತಿಕ್ರಮಣ ಒಂದ್ ಕೇಸ್ ಆಗತೈತಿ ಅಷ್ಟೇ….
ಸತ್ಯಪ್ಪ ಬಡಶೆಟ್ಟಿ ಅತಿಕ್ರಮಣ ತಹಶೀಲ್ದಾರ್ ಹಿಂಗ ರ್ಲಾ
ಸಿದ್ದಪ್ಪ ಪೊಲೀಸ್ – ಮತ್ತಾ ತಹಶೀಲ್ದಾರ್​ನ ತಲಿಲ್ಲಾ.. ಮತ್ತಾ ಎಲ್ಲಿದ್ರೂ ಪೊಲೀಸ್​ ಸ್ಟೇಷನ್​ಗೆ ಬರತೈತಿ… ನಾನು ಹೇಳ್ತೀನಿ ನೀವು ಸಣ್ಣಾಂಗ ಚಾಲೂ ಮಾಡ್ರಿ…
ಸತ್ಯಪ್ಪ ಬಡಶೆಟ್ಟಿ – ಈಗ ಚಾಲೂನ ಐತಿ ಏರಾಕತಾರ್ರೀ…
ಸಿದ್ದಪ್ಪ ಪೊಲೀಸ್ – ಆಯ್ತು ದಬ್ಬಾಯಿಸಿ ಎರಸ್ರೀ….
ಸತ್ಯಪ್ಪ ಬಡಶೆಟ್ಟಿ – 112 ದವರು ಅದಾರ ನೀವ್ ಮಾತಾಡ್ತೀರೇನ್ರಿ…
ಸಿದ್ದಪ್ಪ ಪೊಲೀಸ್ – ನಾನು ಮಾತಾಡಿದ್ದೀನಿ ಈಗ, ಎರಡೂ ಪಾರ್ಟಿ ಪೊಲೀಸ್ ಠಾಣೆಗೆ ಹೋಗ್ರಿ ಅಂತ ಹೇಳಿ ಬರಲು ಹೇಳಿದ್ದೀನಿ ಅವರಿಗೆ.
ಸತ್ಯಪ್ಪ ಬಡಶೆಟ್ಟಿ – ಹುಂ..
ಸಿದ್ದಪ್ಪ ಪೊಲೀಸ್ – ಅಷ್ಟೇ ಅವರ ಮುಂದ ಹುಂ.. ಅನ್ರಿ ಹಿಂದಿಂದ ಚಾಲು ಮಾಡ್ರಿ..
ಸತ್ಯಪ್ಪ ಬಡಶೆಟ್ಟಿ – ಆಯ್ತು..
ಸಿದ್ದಪ್ಪ ಪೊಲೀಸ್ – ಇನ್ನೊಂದು ಎಲ್ಲರಾ ನಾವ್ ಸಪೋರ್ಟ್ ಅದೀವಿ ಅಂತ ಒಟ್ಟಾ ಗೊತ್ತಾಗಬಾರದು.
ಸತ್ಯಪ್ಪ ಬಡಶೆಟ್ಟಿ – ಆಯ್ತು

ಒಟ್ಟಾರೆ ದೇಶ ಎಷ್ಟೇ ಮುಂದುವರೆದ್ರೂ ಕೆಲವು ಕಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮಾತ್ರ ನಿಲ್ಲುತ್ತಿಲ್ಲ. ಅದರಲ್ಲೂ ಬೆಳಗಾವಿಯಲ್ಲಿ ಒಂದಲ್ಲ ಒಂದು ಈ ರೀತಿಯ ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಇದೀಗ ಕಡಿವಾಣ ಹಾಕಬೇಕಾದ ಪೊಲೀಸರೇ ದಲಿತರ ಮೇಲೆ ದರ್ಪ ತೋರಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಂದಾನಗರಿಯಲ್ಲೊಂದು ಬೆಳಕಿಗೆ ಬಂದ ನಾಚಿಕೆಗೇಡು ಪ್ರಕರಣ.. ನ್ಯಾಯ ಕೊಡುವ ಪೊಲೀಸರಿಂದಲೇ ದಲಿತರಿಗೆ ಅನ್ಯಾಯ!

https://newsfirstlive.com/wp-content/uploads/2024/02/Belagavi-2.jpg

Load More