Advertisment

ಗೃಹಲಕ್ಷ್ಮಿಯ ಹಣದಿಂದ ಈ ಮಹಿಳೆ ಏನು ಮಾಡಿದರು ಗೊತ್ತಾ.. ಸಿಎಂ, ಡಿಸಿಎಂಗೆ ಧನ್ಯವಾದ ಹೇಳಿದ ಸಕ್ಕುಬಾಯಿ

author-image
Bheemappa
Updated On
ಗೃಹಲಕ್ಷ್ಮಿಯ ಹಣದಿಂದ ಈ ಮಹಿಳೆ ಏನು ಮಾಡಿದರು ಗೊತ್ತಾ.. ಸಿಎಂ, ಡಿಸಿಎಂಗೆ ಧನ್ಯವಾದ ಹೇಳಿದ ಸಕ್ಕುಬಾಯಿ
Advertisment
  • ರಾಜ್ಯದ ಹಲವಾರು ಮಹಿಳೆಯರಿಗೆ ನೆರವಾಗಿರುವ ಗೃಹಲಕ್ಷ್ಮಿ ಹಣ
  • ಹಣಕಾಸಿನ ಸಮಸ್ಯೆ, ಜೊತೆಗೆ ಆ ನೋವಿನಿಂದ ಬಳಲುತ್ತಿದ್ದ ಮಹಿಳೆ
  • ರಾಜ್ಯ ಸರ್ಕಾರದ ಯೋಜನೆ ಬಗ್ಗೆ ಮಹಿಳೆಯಿಂದ ಭಾರೀ ಮೆಚ್ಚುಗೆ

ಬೆಳಗಾವಿ: ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Advertisment

ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದ ಮಹಿಳೆ ಸಕ್ಕುಬಾಯಿ ಕರದಿನ ಹಲವು ತಿಂಗಳುಗಳಿಂದ ಬಲಗಣ್ಣಿಗೆ ಸಮಸ್ಯೆಯನ್ನ ಎದುರಿಸುತ್ತಿದ್ದರು. ಆರ್ಥಿಕ ಸಮಸ್ಯೆ ಇದ್ದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಕಣ್ಣಿಗೆ ಪೊರೆ ಬಂದ ಕಾರಣ ನೋವಿನಲ್ಲೇ ದಿನ ಕಳೆದಿದ್ದರು. ಆದರೆ ತನಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 10 ತಿಂಗಳುಗಳ ಕಾಲ ತೆಗೆದಿರಿಸಿದ್ದಾರೆ. ಹೀಗಾಗಿ ಒಟ್ಟು 20 ಸಾವಿರ ರೂಪಾಯಿಗಳು ಸಂಗ್ರಹವಾಗಿವೆ.

ಇದನ್ನೂ ಓದಿ: ಜೈಲಿಂದ ಬಂದ ಬೆನ್ನಲ್ಲೇ ಅನ್ಯಾಯ ಎಸಗಿದವ್ರ ವಿರುದ್ಧ ಆಕ್ರೋಶ.. ವಿರೋಧಿಗಳಿಗೆ HD ರೇವಣ್ಣ ಖಡಕ್​ ಸಂದೇಶ

ರಾಮದುರ್ಗ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆ ನಂತರ ಸಂಪೂರ್ಣವಾಗಿ ಕಣ್ಣಿನ ದೋಷ ನಿವಾರಣೆಯಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 26 ಸಾವಿರ ರೂಪಾಯಿ ಖರ್ಚು ಬಂದಿದ್ದು ಇದರಲ್ಲಿ 20 ಸಾವಿರ ಹಣ ಗೃಹಲಕ್ಷ್ಮಿ ಯೋಜನೆಯದ್ದಾಗಿದ್ರೆ ಇನ್ನು 6 ಸಾವಿರ ಹೇಗೋ ಸಂಗ್ರಹಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸದ್ಯ ಇದರಿಂದ ಸಂತಸಗೊಂಡಿರುವ ಮಹಿಳೆ ಸಕ್ಕುಬಾಯಿ ಸಿಎಂ, ಡಿಸಿಎಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment