/newsfirstlive-kannada/media/post_attachments/wp-content/uploads/2025/03/BGM-KIDNAP-CASE.jpg)
ಗೋಕಾಕ್​ನಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ಅಂಬಿ ಕಿಡ್ನಾಪ್ ಕೇಸ್​ಗೆ ಭಾರೀ ಟ್ವಿಸ್ಟ್ ದೊರಕಿದೆ. ಈ ಪ್ರಕರಣದಲ್ಲಿ ಘಟಪ್ರಭಾ ಪೊಲೀಸರು ಗೋಕಾಕ್​ ತಾಲೂಕು ಕಾಂಗ್ರೆಸ್​ ಮಹಿಳಾ ಘಟಕದ ಬ್ಲಾಕ್ ಅಧ್ಯಕ್ಷೆ ಮಂಜುಳಾ ರಾನಗಟ್ಟಿಯನ್ನ ಅರೆಸ್ಟ್ ಮಾಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಆಪ್ತವಲಯದಲ್ಲಿ ಮಂಜುಳಾ ರಾಮನಗಟ್ಟಿ ಗುರುತಿಸಿಕೊಂಡಿದ್ದರು. ಬಸವರಾಜ್ ಅಂಬಿ ಅಪರಹರಣ ಪ್ರಕರಣದಲ್ಲಿ ಮಂಜುಳಾ ಹೆಸರು ತಳುಕು ಹಾಕಿಕೊಂಡಿದ್ದು, ಹಿಂಡಲಗಾ ಜೈಲಿನಲ್ಲಿ ಅವರನ್ನು ಇಡಲಾಗಿದೆ.
ಈ ಒಂದು ಕಿಡ್ನಾಪ್ ಕೇಸ್​​ನಲ್ಲಿ ಸತೀಶ್ ಜಾರಿಹೊಳಿ ಆಪ್ತೆ ಮಂಜುಳಾ ರಾಮನಗಟ್ಟಿಯೇ ಕಿಂಗ್​ಪಿನ್ ಎಂಬ ಆರೋಪ ಕೇಳಿ ಬಂದಿದೆ. ಗೋಕಾಕ್​ನ ಕಣ್ಣೂರು ಪಟ್ಟಣ ನಿವಾಸಿ ಮಂಜುಳಾ, ಬಸವರಾಜ್ ಅಂಬಿ ಕಿಡ್ನಾಪ್ ಬಳಿಕ ನಾಪತ್ತೆಯಾಗಿದ್ದು, ಕಲಬುರಗಿಯಲ್ಲಿ ತಲೆಮರೆಸಿಕೊಂಡಿದ್ದರು. ಘಟಪ್ರಭಾ ಪೊಲೀಸರಿಂದ ಮಂಜುಳಾ ಸೇರಿ ಮೂವರನ್ನು ಅರೆಸ್ಟ್ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2025/03/BASAVARAJ-AMBI.jpg)
ಇದನ್ನೂ ಓದಿ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ; ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ನಾಲ್ವರು
ಪರಶುರಾಮ ಕಾಂಬಳೆ, ಯಲ್ಲೇಶ್ ವಾಲೀಕರ್​ನನ್ನೂ ಕೂಡ ಬಂಧಿಸಿರುವ ಪೊಲೀಸರು ಉದ್ಯಮಿ ಅಪಹರಣ ಕೇಸ್​ನಲ್ಲಿ ಒಟ್ಟು ಈವರೆಗೆ 7 ಜನರನ್ನು ಬಂಧಿಸಲಾಗಿದೆ.
/newsfirstlive-kannada/media/post_attachments/wp-content/uploads/2025/03/BGM-KIDNAP-CASE-2.jpg)
ಗೋಕಾಕ್ ತಾಲಕೂ ಕಾಂಗ್ರೆಸ್ ಮಹಿಳಾ ಘಟಕದ ಬ್ಲಾಕ್ ಅಧ್ಯಕ್ಷೆಯಾಗಿದ್ದ ಮಂಜುಳಾ ಸಚಿವ ಸತೀಶ್ ಜಾರಕಿಹೊಳಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.
/newsfirstlive-kannada/media/post_attachments/wp-content/uploads/2025/03/BGM-KIDNAP-CASE-1.jpg)
ಇದನ್ನೂ ಓದಿ:ಕರಾವಳಿಗೆ ಮತ್ತೆ ಉಷ್ಣ ಅಲೆ ಎಚ್ಚರಿಕೆ; ಕಾರವಾರದಲ್ಲಿ ಗರಿಷ್ಠ ತಾಪಮಾನ ದಾಖಲು
ತಮ್ಮ ಪುತ್ರ ಈಶ್ವರ್ ರಾಮನಗಟ್ಟಿ ಮೂಲಕ ಉದ್ಯಮಿಯನ್ನು ಕಿಡ್ನಾಪ್ ಮಾಡಿಸಿದ್ದಾರೆ ಎಂಬ ಅರೋಪ ಸದ್ಯ ಕೇಳಿ ಬಂದಿದೆ. ಫೆ.20 ರಂದು ದಂಡಾಪುರ ಕ್ರಾಸ್ ಬಳಿ ಸಿನಿಮೀಯ ರೀತಿಯಲ್ಲಿ ಉದ್ಯಮಿ ಬಸವರಾಜ್ ಅಂಬಿ ಕಿಡ್ನಾಪ್ ಆಗಿದ್ದರು. ಕಿಡ್ನಾಪ್ ಆರೋಪ ಹೊತ್ತಿರುವ ಮಂಜುಳಾ ರಾಮನಗಟ್ಟಿಯ ಮೇಲೆ ಈಗ ಮತ್ತೊಂದು ಆರೋಪ ಕೇಳಿ ಬಂದಿದೆ. ಕಿಡ್ನಾಪ್ ಬಳಿಕ ಉದ್ಯಮಿಯ ಬಳಿ 5 ಕೋಟಿ ರೂಪಾಯಿ ಕೊಡುವಂತೆ ಮಂಜುಳಾ ಹಾಗೂ ಆಕೆಯ ಟೀಮ್ ಬೇಡಿಕೆ ಇಟ್ಟಿತ್ತಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us