/newsfirstlive-kannada/media/post_attachments/wp-content/uploads/2024/12/BGM-SOLDIER-martyred.jpg)
ರೈತ ಜನರಿಗಾಗಿ ಹಗಲು ರಾತ್ರಿ ದುಡೀತಾನೆ. ಯೋಧ ಜನರನ್ನ ಕಾಪಾಡೋದಕ್ಕೆ ಪ್ರಾಣ ಒತ್ತೆ ಇಡ್ತಾನೆ. ಜನರ ಸೇವೆ ಜನಾರ್ಧನ ಸೇವೆ ಅಂತಾ ಬದುಕೋ ಇವರಿಗೆ ಜನಪ್ರತಿನಿಧಿಗಳು ಗೌರವ ಕೊಟ್ಟಿಲ್ಲ ಅಂದ್ರೂ ಪರವಾಗಿಲ್ಲ ಅವರ ಗೌರವಕ್ಕೆ ಧಕ್ಕೆ ತರಬಾರದು ಆದ್ರೆ ಬೆಳಗಾವಿಯಲ್ಲಿ ಅಂತಹದೊಂದು ಘಟನೆ ನಡೆದು ಹೋಗಿದೆ.
/newsfirstlive-kannada/media/post_attachments/wp-content/uploads/2024/12/BGM-SOLDIER-martyred-1.jpg)
ಹೇಶ್.ಎನ್ ವಾಲಿ, ಜಸ್ಟ್​​ 24 ವರ್ಷವಷ್ಟೇ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದವರು. ಜಮ್ಮು-ಕಾಶ್ಮೀರ ಲೇಹ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್​​​ ವೀರಮರಣವನ್ನಪ್ಪಿದ್ದಾರೆ. ಡಿಸೆಂಬರ 14 ರಂದು ರಸ್ತೆ ಮೇಲೆ ಬಿದ್ದಿರೋ ಹಿಮವನ್ನ ಹಿಟಾಚಿ​ ಮೂಲಕ ತೆಗೆಯುವಾಗ ಪಕ್ಕದ ಗುಡ್ಡದಿಂದ ಬೃಹತ್​ ಬಂಡೆಗಳು ಉರುಳಿವೆ. ಉರುಳಿದ ಬಂಡೆಗಳು ಹಿಟಾಚಿ ಅಷ್ಟೇ ಅಲ್ಲ, ಯೋಧನ ದೇಹವನ್ನ ಛಿದ್ರ ಮಾಡಿದೆ. ಮೃತ ದೇಹದಲ್ಲಿ ಸಿಕ್ಕಿದ್ದು ಬರೀ ಕಾಲುಗಳು..
ದೇಶ ಕಾಯೋ ಯೋಧನ ಸಾವಿಗೆ ಬೆಲೆನೇ ಇಲ್ವಾ?
ನಿನ್ನೆ ಬೆಳಗ್ಗೆ ಯೋಧನ ಪಾರ್ಥಿವ ಶರೀರ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಪಾರ್ಥಿವ ಶರೀರವನ್ನ ಬೆಳಗಾವಿ ಜಿಲ್ಲಾಧಿಕಾರಿಗಳು ಸ್ವೀಕರಿಸಿದ್ರು. ಮಾಜಿ ಸೈನಿಕರು ಮೃತ ಯೋಧನಿಗೆ ಗೌರವ ನಮನ ಸಲ್ಲಿಸಿ, ಘೋಷಣೆ ಮೊಳಗಿಸಿದ್ರು. ಮೃತ ಯೋಧನ ನೆನೆದು ಗ್ರಾಮಸ್ಥರು ಕಣ್ಣೀರು ಹಾಕಿದ್ರು. ಕುಟುಂಬಸ್ಥರ ಎದೆ ಒಡೆದೋಗಿದೆ.. ಈ ದುಃಖದ ಹೊತ್ತಲ್ಲಿ ಯಾವ ಜನಪ್ರತಿನಿಧಿ ಕಾಣಲೇ ಇಲ್ಲ.
ಬೆಳಗಾವಿಯಲ್ಲೇ ಇದ್ರೂ ಇತ್ತ ತಿರುಗಿ ನೋಡದ ರಾಜಕಾರಣಿಗಳು
ಇಡೀ ರಾಜ್ಯದ ರಾಜಕೀಯ ನಾಯಕರು ಬೆಳಗಾವಿ ಅಧಿವೇಶನದಲ್ಲಿ ಬೀಡು ಬಿಟ್ಟಿದೆ. ಆದ್ರೆ, ಯಾವೊಬ್ಬ ನಾಯಕ ಕೂಡ ಇತ್ತ ತಿರುಗೀ ಕೂಡ ನೋಡಿಲ್ಲ. ರಾಜಕೀಯ ಕೆಸರೆಚಾಟದಲ್ಲಿ ಬ್ಯುಸಿಯಾಗಿರೋ ರಾಜಕಾರಣಿಗಳು, ರೈತರು ಮತ್ತು ಸೈನಿಕರ ಮೇಲಿನ ಪ್ರೀತಿ ಅನುಕಂಪ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಈ ಬಲಿದಾನಕ್ಕೆ ಇದೆಂಥ ಅಗೌರವ ಅನ್ನೋ ಬೇಸರವನ್ನ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟ ಹೊರಹಾಕಿದೆ.
ಇದನ್ನೂ ಓದಿ:ಗಡಿ ಮೀರಿದ ಪ್ರೀತಿಗೆ ದೇಶ-ಭಾಷೆಯ ಹಂಗಿಲ್ಲ; ಕರ್ನಾಟಕ ಸೊಸೆಯಾದ ಅಮೆರಿಕಾ ಯುವತಿ
ಇದೇ 2025 ಫೆಬ್ರುವರಿಯಲ್ಲಿ ಮಹೇಶನ ಮದುವೆ ಕೂಡಾ ನಿಶ್ಚಿಯವಾಗಿತ್ತು. ಆದ್ರೆ, ವಿಧಿ ಲಿಖಿತ ಬೇರೆನೆ ಆಗಿತ್ತು. ಆದ್ರೆ ನಮ್ಮ ನೆಲದ ಸೈನಿಕನ ಕೊನೇ ಟೈಂನಲ್ಲಿ ಜೊತೆಯಲ್ಲಿ ಯಾವ ನಾಯಕರು ಇಲ್ಲ ಅನ್ನೋದೆ ಬೇಸರದ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us