ಯುದ್ಧಕ್ಕೆ ಕರೆದರೆ ನಾನು ರೆಡಿ- ಮತ್ತೆ ದೇಶ ಕಾಯಲು ಹೋಗ್ತೀನಿ ಎಂದ ಬೆಳಗಾವಿ ನಿವೃತ್ತ ಯೋಧ

author-image
Ganesh
ಯುದ್ಧಕ್ಕೆ ಕರೆದರೆ ನಾನು ರೆಡಿ- ಮತ್ತೆ ದೇಶ ಕಾಯಲು ಹೋಗ್ತೀನಿ ಎಂದ ಬೆಳಗಾವಿ ನಿವೃತ್ತ ಯೋಧ
Advertisment
  • ಭಾರತ-ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ವಾತಾವರಣ
  • ‘ಯುದ್ಧ ನಡೆದರೆ ದೇಶ ಕಾಯಲು ನಾನು ಹೋಗ್ತೀನಿ’
  • ರಜೆ ಮೇಲೆ ಬಂದಿರೋ ಯೋಧರಿಗೆ ದಿಢೀರ್ ಬುಲಾವ್

ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಸೃಷ್ಟಿಯಾಗಿದೆ. ಹೀಗಾಗಿ ನಮ್ಮನ್ನ ಸೇನೆ ಏನಾದರೂ ವಾಪಸ್​​ ಕರೆದರೆ ನಾವು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧ ಎಂದು ಬೆಳಗಾವಿಯ ನಿವೃತ್ತ ಯೋಧರೊಬ್ಬರು ಹೇಳಿದ್ದಾರೆ.

ಪಾಕಿಸ್ತಾನ ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ಕ್ಷಿಪಣಿ, ಡ್ರೋಣ್, ಶೆಲ್​​ಗಳ ಮೂಲಕ ದಾಳಿ ನಡೆಸ್ತಿದೆ. ಪರಿಣಾಮ ದೇಶದಲ್ಲಿ ಯುದ್ಧದ ವಾತಾವರಣ ನಿರ್ಮಾಣ ಆಗಿದೆ. ಇದೇ ಕಾರಣಕ್ಕೆ ಬೆಳಗಾವಿಯ ನಿವೃತ್ತ ಯೋಧ ಸುಬೇದಾರ್ ಅಶೋಕ ಕುಂದರಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧವಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೂಲಕ ಹುಟ್ಟೂರು ತಲುಪಿದ ಮುರಳಿ ನಾಯಕ್ ಪಾರ್ಥಿವ ಶರೀರ.. ಹುತಾತ್ಮ ಯೋಧನಿಗೆ ಅಂತಿಮ ನಮನ

ಬೆಳಗಾವಿಯ ಗೋಕಾಕ್ ತಾಲೂಕಿನ ಹುದಲಿ ಗ್ರಾಮದ ಆಶೋಕ್​ ಕುಂದರಗಿ ಮೂವತ್ತು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಸೇನೆಯಿಂದ ನಿವೃತ್ತಿಯಾಗಿದ್ದು, ಇತ್ತ ಗಡಿಯಲ್ಲಿ ಯುದ್ಧ ಭೀತಿ ನಿರ್ಮಾಣಗೊಂಡಿದೆ.

ಮತ್ತೊಂದು ಕಡೆ ರಜೆ ಮೇಲೆ ಊರಿಗೆ ಬಂದಿದ್ದ ಸೈನಿಕರಿಗೆ ದಿಢೀರ್ ವಾಪಸ್ ಬರಲು ಸೇನೆ ಸೂಚನೆ ನೀಡಿದೆ. ಅದರಂತೆ ಸೇನೆ ನಮ್ಮನ್ನೂ ಕರೆದರೆ ಕರ್ತವ್ಯಕ್ಕೆ ಹಾಜರಾಗೋದಾಗಿ ನಿವೃತ್ತ ಸುಬೇದಾರ್ ಅಶೋಕ ಕುಂದರಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೇ 8, 9 ರಂದು ಭಾರತ ನಡೆಸಿದ ಪ್ರತೀಕಾರದ ದಾಳಿಯ ವಿಡಿಯೋ ಹಂಚಿಕೊಂಡ ಸೇನೆ -VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment