/newsfirstlive-kannada/media/post_attachments/wp-content/uploads/2024/01/SIDDU-DKS-1.jpg)
ಬೆಳಗಾವಿ: ಬರೋಬ್ಬರಿ ವರ್ಷದ ಬಳಿಕ ಇಡೀ ಸರ್ಕಾರ ರಾಜ್ಯದ ಶಕ್ತಿ ಕೇಂದ್ರ ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್ ಆಗುತ್ತಿದೆ. 10 ದಿನಗಳ ಕಾಲ ಕುಂದಾನಗರಿ ಪವರ್ ಸೆಂಟರ್ ಆಗಿರಲಿದೆ. ವಿಧಾನಸಭೆ ಬೈಎಲೆಕ್ಷನ್ ಬಳಿಕ ನಡೆಯುತ್ತಿರುವ ಅಧಿವೇಶನ ಇದಾಗಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಹುರುಪು-ಹುಮ್ಮಸ್ಸಿನಲ್ಲಿ ತೇಲುತ್ತಲೇ ಇದೆ.
ಸದನದಲ್ಲಿ ಸರ್ಕಾರ & ವಿಪಕ್ಷಗಳ ಸಮರಕ್ಕೆ ವೇದಿಕೆ ಸಜ್ಜು!
ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಅಗ್ನಿ ಪರೀಕ್ಷೆ. ಸರಣಿ ಹೋರಾಟಗಳ ಇತಿಹಾಸ ಹೊಂದಿರುವ ಬೆಳಗಾವಿಯಲ್ಲಿ ಸಿದ್ದು ಸರ್ಕಾರದ ಎರಡನೇ ಅಧಿವೇಶನ ಇದು. ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ವಿಪಕ್ಷ ಬಿಜೆಪಿ-ಜೆಡಿಎಸ್ ಸನ್ನದ್ಧತೆಯಲ್ಲಿದ್ರು, ಹೆಚ್ಡಿಕೆ, ಬೊಮ್ಮಾಯಿ, ಕಾರಜೋಳ ಸೇರಿ ಹಲವು ಸದನ ಶೂರರ ಕೊರತೆ ಕಾಡ್ತಿದೆ. ಆದ್ರೂ ಜಂಟಿ ಹೋರಾಟದ ಮೂಲಕ ಆಡಳಿತ ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿವೆ.
ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ರೆಡಿಯಾಗಿಲ್ಲ ರೂಪುರೇಷೆ!
ಬೈಎಲೆಕ್ಷನ್ ಸೋತ ನಂತರ ಉಭಯ ಪಕ್ಷಗಳ ನಾಯಕರು ಮುಖಾಮುಖಿ ಆಗಿಲ್ಲ. ಈಗ ಬೆಳಗಾವಿ ಅಧಿವೇಶನ ಬಂದಿದೆ. ಸದನದ ಒಳಗೂ, ಹೊರಗೂ ಹೋರಾಟಕ್ಕೆ ಸಜ್ಜಾಗಬೇಕಿದ್ದ ಮೈತ್ರಿ ಪಡೆ, ಆ ಸೋಲಿನ ಮುಖಭಂಗದಿಂದ ಹೊರಗೇ ಬಂದಿಲ್ಲ. ಸದನದಲ್ಲಿ ಹೇಗೆ ಹೋರಾಟ ಮಾಡಬೇಕು? ಸರ್ಕಾರವನ್ನ ಹೇಗೆ ಕಟ್ಟಿಹಾಕ್ಬೇಕು. ಇದ್ಯಾವುದ್ರ ಬಗ್ಗೆ ತೀರ್ಮಾನಿಸಿಲ್ಲ. ಇಂಟ್ರಸ್ಟಿಂಗ್ ಅಂದ್ರೆ ಸರ್ಕಾರ ವಿರುದ್ಧ ಬೇಕಾದಷ್ಟು ಅಸ್ತ್ರಗಳಿವೆ.
ಮೈತ್ರಿ ಪಡೆಯಲ್ಲಿ ಅಸ್ತ್ರಗಳು!
ಸರ್ಕಾರ ವಿರುದ್ಧ ಮುಡಾ ಹಗರಣ ಇದೆ. ಈ ಸಂಬಂಧ ಇಡಿ, ಲೋಕಾಯುಕ್ತ ತನಿಖೆ ಆಗ್ತಿದೆ. ಪ್ರಕರಣ ನೇರವಾಗಿ ಸಿಎಂ ಕುಟುಂಬವೇ ಸಿಲುಕಿದೆ. ಇನ್ನು, ವಕ್ಫ್ನಿಂದ ರೈತರು ಮತ್ತು ದೇವಾಲಯಗಳಿಗೆ ಜಾರಿಯಾದ ನೋಟಿಸ್ ದೊಡ್ಡ ಸಂಚಲನವೇ ಸೃಷ್ಟಿ ಆಗಿದೆ. ಇತ್ತ, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸರಣಿ, ರಾಜ್ಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ಯಥಾ ಪ್ರಕಾರ ಗ್ಯಾರಂಟಿಗಳ ಅನುಷ್ಠಾನದಲ್ಲಿ ಲೋಪದ ಜೊತೆ ಅಭಿವೃದ್ಧಿ ಸಂಪೂರ್ಣ ಕುಸಿದಿದೆ ಅನ್ನೋದು ಕಾಂಗ್ರೆಸ್ನ ಶಾಸಕರೇ ಹೇಳಿಕೊಳ್ತಿದ್ದಾರೆ. ಇನ್ನು, ಈ ಮಹದಾಯಿ, ಕೃಷ್ಣ ಮೇಲ್ಕಂಡೆ ಯೋಜನೆ ಯಾವುದೇ ಸರ್ಕಾರವಿದ್ರೂ ಅಷ್ಟೇ. ಚರ್ಚೆ ಆಗುತ್ತೆ ಕೆಲಸ ಆಗಲ್ಲ.
ಸುವರ್ಣಸೌಧದೊಳಗೆ ಅನುಭವ ಮಂಟಪದ ವೈಭವ
ಒಟ್ಟು 10 ದಿನಗಳ ಕಾಲ ನಡೆಯುವ ಅಧಿವೇಶನ ಸಿದ್ಧತೆ ಅಂತಿಮ ಹಂತದಲ್ಲಿದೆ. ಸ್ಪೀಕರ್ ಯು.ಟಿ.ಖಾದರ್ ಎಲ್ಲವನ್ನೂ ಪರಿಶೀಲನೆ ಮಾಡಿದ್ದಾರೆ. ಬೆಳಗ್ಗೆ 11ಕ್ಕೆ ಅಧಿವೇಶನವು ವಿದ್ಯುಕ್ತವಾಗಿ ಆರಂಭವಾಗಲಿದೆ. ಇದಕ್ಕೂ ಮೊದಲು ಐತಿಹಾಸಿಕ ಅನುಭವ ಮಂಟಪ ಸ್ಮರಣೆಯ ಬೃಹತ್ ತೈಲ ವರ್ಣದ ಚಿತ್ರ ಅನಾವರಣ ಆಗಲಿದೆ.
ಇದನ್ನೂ ಓದಿ:ಕ್ಯಾಪ್ಸನ್ಸಿ ನಿರೀಕ್ಷೆಯಲ್ಲಿದ್ದ ಪಂತ್ಗೆ ಬಿಗ್ ಶಾಕ್ ಕೊಟ್ಟ ಲಕ್ನೋ; 27 ಕೋಟಿ ಸುರಿದಿದ್ದೇಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ