ದೇವರ ಮೇಲೆ ಬಹಳ ನಂಬಿಕೆ.. ಟ್ರಾವೆಲ್ ಎಂದರೆ ಇಷ್ಟ; ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಯುವತಿ ದಾರುಣ ಅಂತ್ಯ

author-image
Veena Gangani
Updated On
ದೇವರ ಮೇಲೆ ಬಹಳ ನಂಬಿಕೆ.. ಟ್ರಾವೆಲ್ ಎಂದರೆ ಇಷ್ಟ; ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಯುವತಿ ದಾರುಣ ಅಂತ್ಯ
Advertisment
  • ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 30 ಭಕ್ತರು ದಾರುಣ ಅಂತ್ಯ
  • 144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳದಲ್ಲಿ 4 ಕನ್ನಡಿಗರು ಬಲಿ
  • ದೇಶ ವಿದೇಶ ಸುತ್ತಬೇಕು ಅಂತ ಅಂದುಕೊಂಡು ಕುಂಭಮೇಳದಲ್ಲಿ ಸಾವು

ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಕೋಟ್ಯಾಂತರ ಜನರು ಒಂದೇ ಕಡೆ ಸೇರಿಕೊಂಡಿದ್ದಕ್ಕೆ ದೊಡ್ಡ ದುರಂತವೇ ಸಂಭವಿಸಿದೆ. ಹೌದು, ಬುಧವಾರ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಸಂಗಮದಲ್ಲಿ ಉಂಟಾದ ಕಾಲ್ತುಳಿತದಿಂದ 30 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲಿ 4 ಮಂದಿ ಬೆಳಗಾವಿ ಮೂಲವರು ಕೂಡ ಉಸಿರು ಚೆಲ್ಲಿದ್ದಾರೆ.

ಇದನ್ನೂ ಓದಿ:ಪ್ರಯಾಗರಾಜ್​​​ ಕಾಲ್ತುಳಿತದಲ್ಲಿ 17 ಜನ ಜೀವ ಬಿಟ್ಟ ಕೇಸ್​ಗೆ ಟ್ವಿಸ್ಟ್​​; ಮೊದಲೇ ಸೂಚನೆ ನೀಡಿದ್ದ ಕಮಿಷನರ್​​!

publive-image

ಹೌದು, ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಸೇರಿದ್ದಾಗ ಈ ಘಟನೆ ಸಂಭವಿಸಿದೆ. ಭಕ್ತರ ನೂಕುನುಗ್ಗಲಿಗೆ ಸಂಗಮ್‌ನಲ್ಲಿ ನಿರ್ಮಾಣಮಾಡಿದ್ದ ತಡೆಗೋಡೆ ಮುರಿದುಹೋಗಿದ್ದಕ್ಕೆ ಮಹಾ ಅವಘಡವೊಂದು ಸಂಭವಿಸಿ ಹೋಗಿದೆ. ಮೌನಿ ಅಮಾವಾಸ್ಯೆಯ ದಿನ 10 ಕೋಟಿಗೂ ಅಧಿಕ ಜನರು ಸೇರಿದ ಕಾರಣ ಕಾಲ್ತುಳಿತ ಸಂಭವಿಸಿ ಸುಮಾರು 30 ಭಕ್ತಾದಿಗಳು ಅಸುನೀಗಿದ್ದಾರೆ.

publive-image

ಮಹಾ ಕುಂಭಮೇಳಕ್ಕೆ ಹೋಗಲು ಬೆಳಗಾವಿಯ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ 60 ಯಾತ್ರಾರ್ಥಿಗಳು ಪ್ರಯಾಗ್ ರಾಜ್‌ಗೆ ಪ್ರಯಾಣ ಬೆಳೆಸಿದ್ದರು. ಇವರಲ್ಲಿ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠನ ಹಾಗೂ ಮೇಘಾ ಹತ್ತರವಾಠ, ಬೆಳಗಾವಿಯ ನಗರದ ಶೆಟ್ಟಿಗಲ್ಲಿ ನಿಚಾಸಿ ಅರುಣ ಗೋರ್ಪಡೆ, ಶಿವಾಜಿ ನಗರದ ನಿವಾಸಿ ಮಹಾದೇವಿ ಕೂಡ ಬಲಿಯಾಗಿದ್ದಾರೆ. ಇದೇ ದುರಂತದಲ್ಲಿ ಹೆಂಡತಿ ಜ್ಯೋತಿ ಹಾಗೂ ಮಗಳು ಮೇಘಾಳನ್ನು ಕಳೆದುಕೊಂಡ ತಂದೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

publive-image

ಇನ್ನೂ, ಇದೇ ಮಹಾ ಕುಂಭಮೇಳದಲ್ಲಿ ಮೃತಪಟ್ಟ ಮೇಘಾಗೆ ಟ್ರಾವೆಲ್ ಮಾಡೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಇತ್ತು. ಅಲ್ಲದೇ ಮೇಘಾಳಿಗೆ ದೇವರು ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದಳು. ಆಗಾಗ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ಫೋಟೋಗಳನ್ನು ಮೇಘಾ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. ಪ್ರವಾಸ ಹಾಗೂ ದೇವರ ಮೇಲೆ ಅವಳಿಗಿದ್ದ ಭಕ್ತಿಯೇ ಆಸಕ್ತಿಯನ್ನು ಎತ್ತಿ ಹೇಳುತ್ತೆ. ಇದಕ್ಕೂ ಮೊದಲು ಮೇಘಾ ನಾನಾ ರಾಜ್ಯಗಳ ಪ್ರವಾಸ ಮಾಡಿದ್ದಳು. ಇವಳ ಪ್ರವಾಸಕ್ಕೆ ಪೋಷಕರಿಂದಲೂ ಸಂಪೂರ್ಣ ಬೆಂಬಲವಿತ್ತು. ಆದ್ರೆ, ಕುಂಭಮೇಳಕ್ಕೆ ಹೋಗುತ್ತೇನೆ ಅಂತ ಪೋಷಕರಿಗೆ ಹೇಳಿದ್ದಳಂತೆ. ಆದ್ರೆ ಇದಕ್ಕೆ ಮಾತ್ರ ಪೋಷಕರು ಬೇಡ ಅಂತ ಹೇಳಿದ್ದಂತೆ.

publive-image

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಮೇಘಾ ತಂದೆ, 13 ಜನರ ಜೊತೆ ನನ್ನ ಹೆಂಡತಿ, ಮಗಳು ಹೋಗಿದ್ದರು. ನೆನ್ನೆ ರಾತ್ರಿ ಕೂಡ ನನ್ನ ಜೊತೆಗೆ ಮಾತಾಡಿದ್ರೂ, ಆದ್ರೆ ನ್ಯೂಸ್​ ನೋಡಿ ನನಗೆ ಶಾಕ್​ ಆಯ್ತು. ನಿನ್ನೆ ರಾತ್ರಿ ತುಂಬಾ ಮಾತಾಡಿದ್ರೂ, ಆದ್ರೆ ಬೆಳಗ್ಗೆ ಈ ವಿಚಾರ ಗೊತ್ತಾಗಿದೆ. ನನಗೆ ಮಗಳಿಗೆ ಈ ಕುಂಭಮೇಳಕ್ಕೆ ಹೋಗುವ ಆಸೆ ಇತ್ತು. ಆದ್ರೆ ನಾವು ಬೇಡ ಅಂತ ಹೇಳಿದ್ವಿ. 144 ವರ್ಷಗಳ ನಂತರ ಬರೋ ಕುಂಭಮೇಳಕ್ಕೆ ಹೋಗ್ತೀನಿ ಅಂತ ಹಠ ಮಾಡ್ತಾ ಇದ್ಳು. ಯಾವುದೇ ಪರಿಸ್ಥಿತಿ ಇದ್ರೂ ಒಬ್ಬಳೆ ಹೋಗ್ತೀನಿ ಅಂತ ಹೇಳಿದ್ದಳು. ಹೀಗಾಗಿ ಎಲ್ಲ ಅರೇಂಜ್​ ಮಾಡಿ ಕಳಿಸಿಕೊಟ್ಟಿದ್ದೆ. ಆಕೆಯ ಜೊತೆಗೆ ನಾನು ಹೋಗಿ ಬರಬೇಕಿತ್ತು. ಆದ್ರೆ ಆಫೀಸ್​ ಕೆಲಸ ಇತ್ತು. ಅದಕ್ಕಾಗಿ ನಾನು ಹೋಗಲಿಲ್ಲ ಎಂದಿದ್ದಾರೆ. ಏನೇ ಹೇಳಿ ಲಕ ಲಕ ಅಂತ ದೇಶ ವಿದೇಶ ಸುತ್ತಬೇಕು ಅಂತ ಆಸೆ ಇಟ್ಟುಕೊಂಡು ಮಹಾ ಕುಂಭಮೇಳಕ್ಕೆ ಹೋಗಿದ್ದ ಮೇಘಾಳದ್ದು ಇದು ಕೊನೆ ಪ್ರವಾಸವಾಗಿದೆ. ಜೀವನದ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದವಳು ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾಳೆ. ಮಗಳ ಜೊತೆ ತಾಯಿಯೂ ಮೃತಪಟ್ಟಿರುವುದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment