ಕನ್ನಡ ಮಾತಾಡಿದ್ದಕ್ಕೆ ಹಲ್ಲೆ ಕೇಸ್​ಗೆ ಬಿಗ್​ ಟ್ವಿಸ್ಟ್.. ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್; ಇದು ನ್ಯಾಯನಾ?

author-image
admin
Updated On
ಕನ್ನಡ ಮಾತಾಡಿದ್ದಕ್ಕೆ ಹಲ್ಲೆ ಕೇಸ್​ಗೆ ಬಿಗ್​ ಟ್ವಿಸ್ಟ್.. ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್; ಇದು ನ್ಯಾಯನಾ?
Advertisment
  • ಮರಾಠಿ ಪುಂಡರಿಂದ ಕಂಡಕ್ಟರ್​ ಮೇಲೆ ನಡೆದಿದ್ದ ಹಲ್ಲೆ ಕೇಸ್​
  • ಅಪ್ರಾಪ್ತೆಯಿಂದ ಕಂಡಕ್ಟರ್​ ಮೇಲೆ ಪೋಕ್ಸೋ FIR ದಾಖಲು
  • ಕರ್ನಾಟಕದಲ್ಲಿ ಕರವೇ, ಮಹಾರಾಷ್ಟ್ರದಲ್ಲಿ ಶಿವಸೇನೆ ಪ್ರತಿಭಟನೆ

ಬೆಳಗಾವಿ: ಗಡಿ ಜಿಲ್ಲೆಯಲ್ಲಿ ಮತ್ತೊಮ್ಮೆ ಕನ್ನಡಿಗರ ಸ್ವಾಭಿಮಾನ ಕುದಿಯುವಂತ ವಾತಾವರಣ ನಿರ್ಮಾಣವಾಗಿದೆ. ಮರಾಠಿ ಪುಂಡರಿಂದ ಕಂಡಕ್ಟರ್​ ಮೇಲೆ ನಡೆದಿದ್ದ ಹಲ್ಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​ ಸಿಕ್ಕಿದ್ದು, ಬಸ್​ ಕಂಡಕ್ಟರ್​ ಮೇಲೆ ಪೋಕ್ಸೋ ಕೇಸ್​ ದಾಖಲು ಮಾಡಿರೋದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಿನ್ನೆ ಬೆಳಗಾವಿಯ ಮಾರಿಹಾಳ ಬಳಿ ಬಸ್ ಕಂಡಕ್ಟರ್‌ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದರು. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಮರಾಠಿ ಪುಂಡರನ್ನ ಬಂಧಿಸಿದ್ದರು. ಇದೀಗ ಅದೇ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯಿಂದ ಕಂಡಕ್ಟರ್​ ಮೇಲೆ ಪೋಕ್ಸೋ ಕೇಸ್​ ದಾಖಲಾಗಿದೆ.

publive-image

ಕಂಡಕ್ಟರ್ ಮೇಲಿನ ಈ ಹಲ್ಲೆ ಕೇಸ್​ನಿಂದ ಕರ್ನಾಟಕ & ಮಹಾರಾಷ್ಟ್ರ ಗಡಿಯಲ್ಲಿ ದ್ವೇಷದ ವಾತಾವರಣವೇ ಭುಗಿಲೆದ್ದಿದೆ. ಕರ್ನಾಟಕದಲ್ಲಿ ಕರವೇ, ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕನ್ನಡ ಮಾತಾಡಿದ್ದಕ್ಕೆ KSRTC ಕಂಡಕ್ಟರ್ ಮೇಲೆ ಹಲ್ಲೆ.. ಕರ್ನಾಟಕ ಸೇನೆಯಿಂದ ಪಾಠ 

ಕೊಲ್ಹಾಪುರದಲ್ಲಿ ಠಾಕ್ರೆ ಬಣದ ಶಿವಸೇನೆ ಬೆಂಬಲಿಗರು ಕರ್ನಾಟಕ ರಸ್ತೆ ಸಾರಿಗೆ ಬಸ್‌ಗಳ ಮೇಲೆ ಭಗವಾ ಧ್ವಜವನ್ನು ಕಟ್ಟಿ ಪುಂಡಾಟ ಮೆರೆದಿದ್ದಾರೆ. ಅತ್ತ ಶಿವಸೇನೆ ಕರ್ನಾಟಕಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲು ಪಟ್ಟು ಹಿಡಿದಿದ್ರೆ, ಇತ್ತ ಕರವೇ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಪೋಕ್ಸೋ ಕೇಸ್​ ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

publive-image

ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಂಡಕ್ಟರ್ ಮೇಲೆ ​ಹಲ್ಲೆ ಮಾಡಿದವರನ್ನ ಜೈಲಿಗೆ ಕಳಿಸಿದ್ದಾರೆ. ಹೀಗೆ ಪುಂಡಾಟಿಕೆ ಮಾಡಿದ್ರೆ ಗೃಹ ಸಚಿವರಿಗೆ ಆರೋಪಿಗಳನ್ನು ಗಡಿಪಾರು ಮಾಡಲು ಹೇಳ್ತೀನಿ. ಬೆಳಗಾವಿಯಲ್ಲಿ ಇಂತ ಪುಂಡಾಟಗಳು ನಡೆಯುತ್ತಲೇ ಇರುತ್ತೆ. ಈ ಬಗ್ಗೆ ನಾವೆಲ್ಲಾ ಧ್ವನಿ ಎತ್ತಬೇಕು ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment