ಬೆಳಗಾವಿಯಲ್ಲಿ ಮಾಜಿ ಶಾಸಕನ ದುರಂತ.. ಆಟೋ ಚಾಲಕ ಅರೆಸ್ಟ್; ಸಣ್ಣ ವಿಚಾರಕ್ಕೆ ದೊಡ್ಡ ಅನಾಹುತ!

author-image
admin
Updated On
ಬೆಳಗಾವಿಯಲ್ಲಿ ಮಾಜಿ ಶಾಸಕನ ದುರಂತ.. ಆಟೋ ಚಾಲಕ ಅರೆಸ್ಟ್; ಸಣ್ಣ ವಿಚಾರಕ್ಕೆ ದೊಡ್ಡ ಅನಾಹುತ!
Advertisment
  • ಗೋವಾ ಪೋಂಡಾ ಕ್ಷೇತ್ರದ ಮಾಜಿ ಶಾಸಕರ ದುರಂತ ಅಂತ್ಯ
  • ಮಧ್ಯಾಹ್ನ 12 ಗಂಟೆ ಸುಮಾರಿಗೆ ಲಾಡ್ಜ್‌ಗೆ ನುಗ್ಗಿದ ಆಟೋ ಚಾಲಕ
  • ಶ್ರೀನಿವಾಸ ಲಾಡ್ಜ್‌ನ ಸಿಸಿಟಿವಿಯಲ್ಲಿ ಪ್ರತಿಯೊಂದು ದೃಶ್ಯವೂ ಸೆರೆ

ಬೆಳಗಾವಿ ನಗರದ ಖಡೇಬಜಾರ್ ಲಾಡ್ಜ್‌ನಲ್ಲಿ ಇಂದು ಆಘಾತಕಾರಿ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಹಲ್ಲೆ ಮಾಡಿದ್ದು, ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಪ್ರಾಣವೇ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಕ್ಷುಲ್ಲಕ ಕಾರಣವೊಂದು ನೋಡ, ನೋಡುತ್ತಿದ್ದಂತೆ ದೊಡ್ಡ ಅನಾಹುತವನ್ನು ಆಹ್ವಾನಿಸಿದೆ.

ಗೋವಾ ಪೋಂಡಾ ಕ್ಷೇತ್ರದ ಮಾಜಿ ಶಾಸಕರು ಇಂದು ಬೆಳಗಾವಿಗೆ ಆಗಮಿಸಿದ್ದರು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಖಡೇಬಜಾರ್ ಬಳಿ ಆಟೋಗೆ ಮಾಜಿ ಶಾಸಕರ ಕಾರು ಟಚ್ ಆಗಿದೆ. ಇದಾದ ಬಳಿಕ ಮಾಜಿ ಶಾಸಕ ಲಾವೂ ಮಾಮಲೇದಾರ್ ಅವರು ಕಾರಿನಲ್ಲಿ ಶ್ರೀನಿವಾಸ ಲಾಡ್ಜ್ ಕಡೆಗೆ ಬಂದಿದ್ದಾರೆ. ರೊಚ್ಚಿಗೆದ್ದ ಆಟೋ ಚಾಲಕ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಹಲ್ಲೆ ಮಾಡಿದ್ದಾನೆ.

publive-image

ಲಾಡ್ಜ್‌ ಎದುರು ಗೋವಾ ಮಾಜಿ ಶಾಸಕರ ಜೊತೆ ಆಟೋ ಚಾಲಕ ಜಗಳಕ್ಕೆ ಇಳಿದಿದ್ದ. ಕಡು ಕೋಪದಲ್ಲೇ ಲಾವೂ ಮಾಮಲೇದಾರ್‌ ಕಪಾಳಕ್ಕೆ ಜೋರಾಗಿ ಬೀಸಿದ್ದ. ಅಷ್ಟರಲ್ಲೇ ಅಕ್ಕ-ಪಕ್ಕದವರು ಬಂದು ಜಗಳ ಬಿಡಿಸೋ ಪ್ರಯತ್ನ ಮಾಡಿದ್ದರು.

publive-image

ಜಗಳ ಸ್ವಲ್ಪ ಶಾಂತವಾಗುತ್ತಿದ್ದಂತೆ ಲಾವೂ ಮಾಮಲೇದಾರ್ ಅದೇ ಲಾಡ್ಜ್‌ನಲ್ಲಿರುವ ರೂಮ್‌ಗೆ ಹೊರಟಿದ್ದಾರೆ. ಲಾಡ್ಜ್‌ ಮೆಟ್ಟಿಲು ಏರುವಾಗ ಏಕಾಏಕಿ ಕುಸಿದು ಬಿದ್ದಿದ್ದು, ಲಾವೋ ಮಾಮಲೇದಾರ್ ಮೃತದೇಹವನ್ನು ಬೆಳಗಾವಿ ಬೀಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಕ್ಷಣವೇ ಮಾರ್ಕೆಟ್ ಠಾಣೆ ಪೊಲಿಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

publive-image

ಗೋವಾ ಮಾಜಿ ಶಾಸಕ ಹಾಗೂ ಆಟೋ ಚಾಲಕನ ಗಲಾಟೆಯ ದೃಶ್ಯಗಳು ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಟಚ್ ಆಗಿದ್ದಕ್ಕೆ ಆಟೋ ಚಾಲಕ ದುಡುಕಿ ಹಲ್ಲೆ ಮಾಡಿದ್ದು ಮಾಜಿ ಶಾಸಕರು ಕುಸಿದು ಪ್ರಾಣ ಬಿಟ್ಟಿದ್ದಾರೆ. ಇದು ಕೊಲೆ ಕೇಸ್ ಆಗಿದ್ದು, ಆಟೋ ಚಾಲಕನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ನಾನು ಎಲಾನ್​ ಮಸ್ಕ್​ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ’- ಶಾಕಿಂಗ್ ಹೇಳಿಕೆ ಕೊಟ್ಟ ಆಶ್ಲೇಯ್​ ಕ್ಲೇರ್! 

ಇನ್ನು, ಗೋವಾ ಸಿಎಂ ಪ್ರಮೋದ್ ಸಾವಂತ ಅವರು ಬೆಳಗಾವಿಗೆ ಆಗಮಿಸುವ ಸಾಧ್ಯತೆ ಇದೆ. ಲಾವೂ ಮಾಮಲೇದಾರ್ ಅವರು ಗೋಮಾಂತಕ ಪಕ್ಷದಿಂದ 2012ರಲ್ಲಿ ಗೋವಾದ ಪೋಂಡಾ ಶಾಸಕರಾಗಿದ್ದರು. ಹಿರಿಯ ಮಾಜಿ ಶಾಸಕನ ಸಾವಿನ‌ ಹಿನ್ನೆಲೆಯಲ್ಲಿ ಗೋವಾ ಸಿಎಂ ಬೆಳಗಾವಿಗೆ ಬರುತ್ತಾ ಇದ್ದು, ಈ ಪ್ರಕರಣ ರಾಜಕೀಯದ ತಿರುವು ಪಡೆದುಕೊಳ್ಳುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment