/newsfirstlive-kannada/media/post_attachments/wp-content/uploads/2024/12/BELAGAVI-CONGRESS-SESSION.jpg)
ಬೆಳಗಾವಿ ನಗರ ಮತ್ತೊಂದು ಐತಿಹಾಸಿ ಕಾರ್ಯಕ್ರಮದ ಶತಮಾನೋತ್ಸವಕ್ಕೆ ಸಜ್ಜಾಗಿದೆ. ಇದೇ 26 ಮತ್ತು 27 ಎರಡು ದಿನ ಇಡೀ ದೇಶದ ಕಾಂಗ್ರೆಸ್ ನಾಯಕರು ಬೆಳಗಾವಿಗೆ ಬರಲಿದ್ದಾರೆ. ಇಲ್ಲಿ ಕಾಂಗ್ರೆಸ್ ಕಾರ್ಯಕಾರಣಿ ಸಭೆ, ಸುವರ್ಣ ಸೌಧದಲ್ಲಿ ಗಾಂಧಿ ಪ್ರತಿಮೆ ಲೋಕಾರ್ಪಣೆ ಹಾಗೂ ಬಹಿರಂಗ ಸಮಾವೇಶಕ್ಕೆ ಸಿದ್ದತೆಗಳು ಆರಂಭವಾಗಿವೆ.
ಕುಂದಾನಗರಿ ಬೆಳಗಾವಿ, ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಿದ ನಾಡು. ದೇಶಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಸಿಗಬೇಕು ಎಂದು ನಿರ್ಣಯ ಕೈಗೊಂಡಿದ್ದು, ಇದೇ ಬೆಳಗಾವಿ ಮಣ್ಣಿನಿಂದ. ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದ ಕಾಂಗ್ರೆಸ್ನ 39ನೇ ಅಧಿವೇಶನ ಬೆಳಗಾವಿಯಲ್ಲಿ 1924ರಲ್ಲಿ ನಡೆದಿತ್ತು. ಇದು ಮಹತ್ಮಾ ಗಾಂಧಿ ಅಧ್ಯಕ್ಷ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಸಹ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೊತ್ಸವಕ್ಕೆ ಬೆಳಗಾವಿ ಈಗ ಸಂಪೂರ್ಣವಾಗಿ ಸಜ್ಜಾಗಿದೆ.
ಇದನ್ನೂ ಓದಿ:ಡಿ.ಕೆ ಸುರೇಶ್ ತಂಗಿ ಎಂದ ಐಶ್ವರ್ಯ ಕೋಟಿ, ಕೋಟಿ ಪಂಗನಾಮ? ನಟ ಧರ್ಮೇಂದ್ರಗೂ ಬಿಗ್ ಶಾಕ್!
ಕಾಂಗ್ರೆಸ್ ಅಧಿವೇಶನದ ಶತಮಾನೊತ್ಸವಕ್ಕಾಗಿ ಎಲ್ಲಾ ರಾಜ್ಯಗಳಿಂದ ಕಾಂಗ್ರೆಸ್ ನಾಯಕರು ಬೆಳಗಾವಿಗೆ ಬರಲಿದ್ದು, ಎರಡು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 26 ಮತ್ತು 27 ರಂದು ಮೂರು ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 26 ವೀರಸೌಧದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಹಲವರು ಭಾಗಿಯಾಗಲಿದ್ದಾರೆ. 250ಕ್ಕೂ ಹೆಚ್ಚು ಆಯ್ದು ಗಣ್ಯರಿಗೆ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಡಿಸೆಂಬರ್ 27ರಂದು ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಲೋಕಾರ್ಪಣೆ ಆಗಲಿದೆ. ಬಳಿಕ CPZ ಮೈದಾನದಲ್ಲಿ ಕಾಂಗ್ರೆಸ್ನ ಬೃಹತ್ ಬಹಿರಂಗ ಸಮಾವೇಶ ನಡೆಯಲಿದ್ದು, ಈ ಸಮಾವೇಶದ ಮೂಲಕ ಕಾಂಗ್ರೆಸ್ ಮುಂದಿನ ಹೆಜ್ಜೆ ಬಗ್ಗೆ ಹೊಸ ಸಂದೇಶ ರವಾನೆ ಮಾಡಲಿದೆ.
ಇದನ್ನೂ ಓದಿ:ನಮ್ಮ ಊರಿಗೆ ನಮ್ಮ ಶಾಸಕರು; ಪ್ರದೀಪ್ ಈಶ್ವರ್ ಕಾರ್ಯಕ್ಕೆ ಭಾರೀ ಮೆಚ್ಚುಗೆ, ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಆಗಬೇಕಿದ್ದ ಸಮಾವೇಶ. ಆದ್ರೆ ಈ ಕಾರ್ಯಕ್ರಮವನ್ನು ಕಾಂಗ್ರೆಸ್ಮಯ ಮಾಡಲಾಗಿದೆ. ಸರ್ಕಾರಿ ದುಡ್ಡಲ್ಲಿ ಕಾಂಗ್ರೆಸ್ ಸಮಾವೇಶ ಮಾಡಲು ಹೊರಟ್ಟಿದ್ದಾರೆ. ಇಲ್ಲಿಂದ ಹೊಸ ಅಧ್ಯಾಯ ಆರಂಭವಲ್ಲ, ಅಂತ್ಯವಾಗಲಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿ ಸಕಲ ರೀತಿಯಲ್ಲಿ ಸಿದ್ದಗೊಂಡಿದೆ. ಕಾಂಗ್ರೆಸ್ಗೆ ಈ ಕಾರ್ಯಕ್ರಮ ಬೂಸ್ಟ್ ನಿಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ