ಗಂಡನ ಫ್ರೆಂಡ್‌ ಜೊತೆ ಲವ್ವಿಡವ್ವಿ.. ಇಬ್ಬರು ಮಕ್ಕಳ ತಾಯಿ ಪರಾರಿ; ಇದು ವಿಚಿತ್ರ ಪ್ರೇಮ ಕಹಾನಿ!

author-image
admin
Updated On
ಗಂಡನ ಫ್ರೆಂಡ್‌ ಜೊತೆ ಲವ್ವಿಡವ್ವಿ.. ಇಬ್ಬರು ಮಕ್ಕಳ ತಾಯಿ ಪರಾರಿ; ಇದು ವಿಚಿತ್ರ ಪ್ರೇಮ ಕಹಾನಿ!
Advertisment
  • ಗಂಡನ ಕಾರಲ್ಲೇ ಫ್ರೆಂಡ್ ಜೊತೆ ಪತ್ನಿ ಪರಾರಿ.. ಪತಿ ಕಂಗಾಲು
  • ಇಬ್ಬರು ಮುದ್ದಾದ ಮಕ್ಕಳ ಜೊತೆ ಸಾಗಿದ್ದ ಸುಂದರ ಸಂಸಾರ
  • 2 ಸೈಟ್ ದಾಖಲೆ, 60 ಗ್ರಾಂ ಚಿನ್ನ, ಮನೆಯಲ್ಲಿಟ್ಟಿದ್ದ 5 ಲಕ್ಷ ರೂ.

ಬೆಳಗಾವಿ: ಪ್ರೀತಿ-ಪ್ರೇಮಕ್ಕೆ ಯಾವ ವ್ಯಾಪ್ತಿಯೂ ಇಲ್ಲ. ಅಡ್ಡಿ, ಆತಂಕವೂ ಇಲ್ಲ ಅನ್ನೋದು ಅನುಭವದ ಮಾತು. ಅದು ಪತಿ-ಪತ್ನಿ, ಇಬ್ಬರು ಮುದ್ದಾದ ಮಕ್ಕಳ ಜೊತೆ ಸಾಗಿದ್ದ ಸುಂದರ ಸಂಸಾರ. ಈ ಮಧ್ಯೆ ಪತಿ-ಪತ್ನಿ ನಡುವೆ ಅವನು ಎಂಟ್ರಿಯಾಗಿದ್ದು ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.

ಇದನ್ನೂ ಓದಿ: oyorooms: ಮದುವೆ ಆಗದ ಜೋಡಿಗೆ ಬಿಗ್ ಶಾಕ್‌; ಓಯೋ ಹೊಸ ರೂಲ್ಸ್‌ ಏನು? 

publive-image

ಪರ ಪುರುಷನ ಜೊತೆ ಪತ್ನಿ ಪರಾರಿ.. ಪತಿ ಕಂಗಾಲು
ಪತ್ನಿ, ಮಕ್ಕಳಿಗಾಗಿ ಠಾಣೆ ಮೆಟ್ಟಿಲೇರಿದ ಪತಿರಾಯ
ಈತನ ಹೆಸರು ಆಸೀಫ್ ಸೈಯ್ಯದ್ ಅಂತ, ವೃತ್ತಿಯಲ್ಲಿ ಡ್ರೈವರ್, ಪತಿ 28 ವರ್ಷದ ಮಾಸಾಬಿ ಹೌಸ್ ವೈಫ್​. ಮಾಹಿರಾ ಹಾಗೂ ಅನಿಯಾ 7 ಮತ್ತು 2 ವರ್ಷದ ಮುದ್ದಾದ ಇಬ್ಬರು ಮಕ್ಕಳು. ಇವ್ರು ಬೆಳಗಾವಿ ಬಳಿಯ ಮಾರಿಹಾಳ ಗ್ರಾಮದ ನಿವಾಸಿಗಳು. ಮೂಲತಃ ಖಾನಾಪುರದ ನಂದಗಢ ನಿವಾಸಿಯಾಗಿರೋ ಆಸೀಫ್, ಮದುವೆ ಬಳಿಕ ಪತ್ನಿಯ ತವರು ಮಾರಿಹಾಳದಲ್ಲೇ ನೆಲೆಸಿದ್ದ. ಏಳು ವರ್ಷಗಳ ಕಾಲ ಸಂಸಾರದಲ್ಲಿ ಇತ್ತೀಚೆಗೆ ಬಿರುಗಾಳಿ ಬೀಸಿತ್ತು. ಅದೇನಾಯ್ತೋ ಏನೋ ಇದೇ ಗ್ರಾಮದ ಬಸವರಾಜ ಸೀತಿಮನಿ ಎಂಬಾತನ ಜೊತೆ ಮಾಸಾಬಿ ತನ್ನಿಬ್ಬರು ಮಕ್ಕಳ ಸಮೇತ ಪರಾರಿಯಾಗಿರೋ ಆರೋಪ ಮಾಡಿದ್ದು, ಪತಿ ಆಸೀಪ್ ಕಂಗಾಲಾಗಿದ್ದಾನೆ.

publive-image

ಜನವರಿ 1ರಂದು 9 ಗಂಟೆ ಸುಮಾರಿಗೆ ಪತಿ ಆಸೀಪ್ ಕಾರಿನಲ್ಲೇ ಪತ್ನಿ ಮಾಸಾಬಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ತನ್ನ ಹೆಸರಲ್ಲಿದ್ದ 2 ಸೈಟ್ ದಾಖಲೆಗಳು, 60 ಗ್ರಾಂ ಚಿನ್ನ, ಮನೆಯಲ್ಲಿಟ್ಟಿದ್ದ 5 ಲಕ್ಷ ರೂ. ಹಣ ಹಾಗೂ ಇಬ್ಬರು ಮಕ್ಕಳ ಜೊತೆ ಪತ್ನಿ ಮಾಸಾಬಿ ಪರಾರಿಯಾಗಿದ್ದಾಳೆ. ಬಸವರಾಜ್ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಹೆಂಡತಿ- ಇಬ್ಬರು ಮಕ್ಕಳನ್ನು ಕಾಣದೇ ನೊಂದಿರುವ ಪತಿ ಆಸೀಫ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಕಿಡ್ನಾಪ್ ಪ್ರಕರಣ ದಾಖಲಿಸಲು ಮುಂದಾಗಿದ್ದಾನೆ.

publive-image

ಅದೇನೇ ಇರಲಿ, ಒಬ್ಬರ ಜೊತೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿ ಇನ್ನೊಬ್ಬನ ಜೊತೆ ಪರಾರಿಯಾಗಿರುವ ಘಟನೆಗೆ ಲವ್​ ಮ್ಯಾಟರ್ ಎನ್ನಬೇಕಾ ಅಥವಾ ಬೇರೆ ಹೆಸರಿಡಬೇಕಾ ಗೊತ್ತಾಗ್ತಿಲ್ಲ, ಪತ್ನಿಗಾಗಿ ಹೆತ್ತವರನ್ನೂ ಬಿಟ್ಟು ಬಂದಿದ್ದ ಅಸೀಫ್​ ಸ್ಥಿತಿ ಇತ್ತ ಪತ್ನಿಯೂ ಇಲ್ಲದೇ ಅತ್ತ ತಂದೆ-ತಾಯಿಯೂ ಇಲ್ಲದೇ ಪರಿತಪಿಸುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment